ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದಿ ವ್ಯಾಮೋಹ: ಯಡಿಯೂರಪ್ಪ ಮೇಲೆ ಕನ್ನಡಿಗರ ಅಸಮಾಧಾನ

|
Google Oneindia Kannada News

ಬೆಂಗಳೂರು, ಜೂನ್ 18: ಈ ಹಿಂದೆ ವಲಸೆ ಕಾರ್ಮಿಕರ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಮತ್ತೆ ಯಡಿಯೂರಪ್ಪ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಮುಂಬರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ''ನಮ್ಮ ಪಕ್ಷದಿಂದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಶ್ರೀ ಪ್ರತಾಪ್ ಸಿಂಹ ನಾಯಕ್, ಶ್ರೀ ಎಂ.ಟಿ.ಬಿ.ನಾಗರಾಜ್, ಶ್ರೀ ಆರ್.ಶಂಕರ್, ಶ್ರೀ ಸುನೀಲ್ ವಲ್ಯಾಪುರೆ ಅವರುಗಳಿಗೆ ಅಭಿನಂದನೆಗಳು.'' ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

Kannadigas Unhappy With BS Yediyurappa Hindi Tweet

Recommended Video

Sreesanth to make a comeback to Ranji cricket at the age of 37 | Oneindia Kannada

ಪಟ್ಟಿ ಬದಲಿಸಿದ ಹೈಕಮಾಂಡ್: ಸಿಎಂ ಯಡಿಯೂರಪ್ಪಗೆ ಮತ್ತೆ ಹಿನ್ನಡೆ?ಪಟ್ಟಿ ಬದಲಿಸಿದ ಹೈಕಮಾಂಡ್: ಸಿಎಂ ಯಡಿಯೂರಪ್ಪಗೆ ಮತ್ತೆ ಹಿನ್ನಡೆ?

ಆ ಈ ಟ್ವೀಟ್‌ನಲ್ಲಿ ಕನ್ನಡದ ಪ್ರಕಟಣೆಯ ಬದಲು ಹಿಂದಿ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಿಂದಿ ವ್ಯಾಮೋಹವನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಹಿಂದಿ ಪಕ್ಷ, ಹಿಂದಿ ಗುಲಾಮರು, ನಮಗೆ ಬಿಡಿ.. ನಿಮ್ಮ ಪಕ್ಷದವರಿಗಾದರೂ ಹಿಂದಿ ಅರ್ಥ ಆಗುತ್ತಾ..?, ಕನ್ನಡ ಎಲ್ಲಿದೆ ಮುಖ್ಯಮಂತ್ರಿಗಳೆ ?, ನಮ್ಮ ಭಾಷೆಯ ಅಭಿಮಾನ ಬಿಡಬೇಡಿ ಹೀಗೆ ಸಾಕಷ್ಟು ಮಂದಿ ಸಿಎಂ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಕನ್ನಡ ಬಳಸಿ ಎಂದು ಜನರಿಗೆ ಹೇಳುವ ಬದಲು ತಾವೇ ಹಿಂದಿ ಬಳಸುವುದು ಬೇಸರದ ಸಂಗತಿ.

English summary
Kannadigas unhappy with CM BS Yediyurappa hindi tweet. Yediyurappa released hindi statement on karnataka vidhana parishad election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X