ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡಿಗರಿಗೆ ಅನ್ಯಾಯ, ಕಾರಣ ನೀಡದೆ ಕೆಲಸದಿಂದ ಗೇಟ್‌ ಪಾಸ್

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 13: ನಗರದಲ್ಲಿರುವ ಎಂಎನ್‌ಸಿಗಳ ಕನ್ನಡ ವಿರೋಧಿ ಧೋರಣೆ ಮುಂದುವರೆದಿದೆ. ಎಲೆಕ್ಟ್ರಾನಿಕ್ ಸಿಟಿಯ ಸಂಸ್ಥೆಯೊಂದು ಏಕಾ-ಏಕಿ ಕನ್ನಡಿಗ ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಎಲೆಕ್ಟ್ರಾನಿಕ್ ಸಿಟಿಯ MRO TECH ಸಂಸ್ಥೆಯಲ್ಲಿ ಈ ರೀತಿಯ ಅನ್ಯಾಯ ನಡೆದಿದ್ದು, ಕನ್ನಡಿಗರಾದ 50 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಾರಣ ನೀಡದೇ ಸಂಸ್ಥೆಯಿಂದ ಏಕಾ-ಏಕಿ ಹೊರ ಹಾಕಲಾಗಿದೆ.

ರಾಜ್ಯ ಸರ್ಕಾರದಿಂದಲೇ ರಾಜ್ಯದ ಉದ್ಯಾಗಾಕಾಂಕ್ಷಿಗಳಿಗೆ ಅನ್ಯಾಯ?ರಾಜ್ಯ ಸರ್ಕಾರದಿಂದಲೇ ರಾಜ್ಯದ ಉದ್ಯಾಗಾಕಾಂಕ್ಷಿಗಳಿಗೆ ಅನ್ಯಾಯ?

ಹಿಂದಿ ಮತ್ತು ತಮಿಳು ಮೂಲದ ನೌಕರರನ್ನು ಮಾತ್ರ ಸಂಸ್ಥೆಯಲ್ಲಿ ಉಳಿಸಿಕೊಂಡು ಸ್ಥಳೀಯರಾದ ಕನ್ನಡದ ನೌಕರರಿಗೆ ಮಾತ್ರ ಗೇಟ್‌ ಪಾಸ್ ನೀಡಿರುವುದು ನೌಕರರನ್ನು ಕೆರಳಿಸಿದೆ. ಈ ಎಲ್ಲಾ ಯುವಕರು ಏಜೆನ್ಸಿ ಮೂಲಕ ಸಂಸ್ಥೆಗೆ ಸೇರಿದ್ದರು. ಆದರೆ ಈಗ ಸಂಸ್ಥೆಯ ಕನ್ನಡ ವಿರೋಧಿ ನೀತಿಯಿಂದ ಬೀದಿಗೆ ಬಂದಿದ್ದಾರೆ.

Kannadigas fired from job without intimation

ಈ ನೌಕರರು ಕೆಲಸಕ್ಕೆ ಸೇರಬೇಕಾದರೆ ಸಂಸ್ಥೆಯು ಆಫರ್ ಲೆಟರ್ , ಐಡಿ ಕಾರ್ಡ್‌ ಸಹ ಕೊಟ್ಟಿರಲಿಲ್ಲ, ಅಷ್ಟೆ ಅಲ್ಲ ನೌಕರರಿಗೆ ಕಾನೂನು ರೀತ್ಯಾ ನೀಡಬೇಕಾದ ಭತ್ಯೆಗಳು ಮುಂತಾದವುಗಳನ್ನು ನೀಡದೇ ಹಾಗೆಯೇ ದುಡಿಸಿಕೊಳ್ಳುತ್ತಿದ್ದರು ಆದರೆ ಈಗ ವಿನಾ ಕಾರಣ ಕನ್ನಡಿಗರನ್ನು ಸಂಸ್ಥೆಯಿಂದ ಹೊರ ಹಾಕಲಾಗಿದೆ.

'ನಮ್ಮ ಮೆಟ್ರೋ'ದ ಕನ್ನಡೇತರ ಉದ್ಯೋಗಿಗಳು ಕೆಲಸ ಕಳೆದುಕೊಳ್ತಾರಾ?'ನಮ್ಮ ಮೆಟ್ರೋ'ದ ಕನ್ನಡೇತರ ಉದ್ಯೋಗಿಗಳು ಕೆಲಸ ಕಳೆದುಕೊಳ್ತಾರಾ?

Kannadigas fired from job without intimation

ಕೆಲಸದಿಂದ ತೆಗೆದುದ್ದನ್ನು ವಿರೋಧಿಸಿ ನೌಕರರು ಇಂದು ಕಂಪೆನಿ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದರು. ಸಂಸ್ಥೆಯ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.

English summary
Whitfield's MRO TECH company Fired more than 50 Kannadigas employees from work without intimation. Kannadiga employees did protest today in front of the company but manager refuses to talk with employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X