ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್ಲೈನ್ ಪುಸ್ತಕ ಮಳಿಗೆ ಕನ್ನಡಲೋಕ ವೆಬ್ ತಾಣ ಲೋಕಾರ್ಪಣೆ

ಬಸವ ಜಯಂತಿಯ ಪ್ರಯುಕ್ತ ಆನ್ ಲೈನ್ ಪುಸ್ತಕ ಮಳಿಗೆ ಕನ್ನಡಲೋಕ.ಇನ್ ಎಂಬ ಹೊಸ ವೆಬ್ ತಾಣವನ್ನು ಲೋಕಾರ್ಪಣೆ ಮಾಡಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಅಣ್ಣ ಬಸವಣ್ಣನವರು ಹುಟ್ಟಿದ ಈ ಶುಭ ದಿನ ಹೊಸ ವೆಬ್ ಸೈಟ್ 'ಕನ್ನಡಲೋಕ'ವನ್ನು (www.kannadaloka.in) ಲೋಕಾರ್ಪಣೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ನಮ್ಮ ಎಲ್ಲಾ ವಸ್ತುಗಳ ಮೇಲೆ ಶೇಕಡಾ 10% ರಿಯಾಯಿತಿ ಮತ್ತು ಬಸವಣ್ಣನವರ ವಚನಗಳ ಪುಸ್ತಕವನ್ನು ಉಚಿತವಾಗಿ ನೀಡಲಾಗಿದ್ದು,. ಕೂಪನ್ ಕೋಡ್ 'KANNADA' ಬಳಸಿ 10% ರಿಯಾಯಿತಿ ಪಡೆಯಬಹುದು.

ಏನಿದು ವೆಬ್ ಸೈಟ್?: ಕಿಂಗ್ಸ್ ಮಾರ್ಟ್ ಎಂಬ ವೆಬ್ ಸೈಟ್ ಪ್ರಾರಂಭಿಸಿದ ನಾವು ಮೊದಲಿಗೆ ಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದೆವು. ಸ್ವಲ್ಪ ತಿಂಗಳುಗಳ ನಂತರ ಕನ್ನಡ ಪುಸ್ತಕಗಳನ್ನು ಮಾರಲು ಶುರು ಮಾಡಿದೆವು.

ಎಸ್ ಎಲ್ ಬೈರಪ್ಪನವರ 'ಉತ್ತರಕಾಂಡ' ಕಾದಂಬರಿ ಬಿಡುಗಡೆಯಾದಾಗ ಅದನ್ನು ನಮ್ಮ ವೆಬ್ ಸೈಟ್ ನಲ್ಲಿ ಪೂರೈಸುವ ಕೆಲಸ ಶುರು ಮಾಡಿದಾಗ ಕನ್ನಡ ಸಾಹಿತ್ಯಕ್ಕೆ ದೊಡ್ಡ ಓದುಗರ ಬಳಗವಿದೆ ಎಂದು ಮನವರಿಕೆಯಾಯಿತು.

Kannadaloka dot in website launch on Basava Jayanti

ಆ ಸಮಯದಲ್ಲಿ ನಮ್ಮ ಗ್ರಾಹಕರು ಕೊಟ್ಟ ಅಭಿಪ್ರಾಯದಲ್ಲಿ ಕನ್ನಡ ಪುಸ್ತಕ ದೂರದ ಊರುಗಳಿಗೆ ಕೊಡುವ ಸೇವೆ ಇಲ್ಲ ಇದ್ದರು ಅಂಚೆ ವೆಚ್ಚವೇ ಹೆಚ್ಚು, ಕನ್ನಡ ಪುಸ್ತಕ ನಮ್ಮ ಮನೆಯ ಬಾಗಿಲಿಗೆ ಬರುವ ವ್ಯವಸ್ಥೆಯಾದರೆ ಇನ್ನ ಹಲವಾರು ಪುಸ್ತಕ ಕೊಂಡು ಓದಬಹುದು. ಈ ರೀತಿ ಹಲವಾರು ಅಭಿಪ್ರಾಯಗಳು ಬಂದವು. ಕನ್ನಡಿಗರಾದ ನಾವು ಈ ಒಂದು ವ್ಯವಸ್ಥೆ ನಮ್ಮಿಂದಲೇ ಶುರುವಾಗಲಿ ಎಂದು ಕನ್ನಡಲೋಕ ಪ್ರಾರಂಭಿಸಿದ್ದೇವೆ ಎಂದು ಕನ್ನಡಲೋಕ ವೆಬ್ ರೂವಾರಿಗಳು ಹೇಳಿದ್ದಾರೆ.

ಕಿಂಗ್ಸ್ ಮಾರ್ಟ್ ವೆಬ್ ಸೈಟ್ ಗೆ ಕನ್ನಡತನವಿಲ್ಲ. ಎಷ್ಟು ಸಾಧ್ಯವೊ ಅಷ್ಟು ಕನ್ನಡವನ್ನು ಉಣಬಡಿಸೋಣವೆಂದು ಹೊಸ ವೆಬ್ ಸೈಟ್ ಗೆ ಕನ್ನಡಲೋಕ ಎಂದು ನಾಮಕರಣ ಮಾಡಿದೆವು. ಈ ವೆಬ್ ಸೈಟ್ ಮೂಲಕ ಕನ್ನಡ ಪುಸ್ತಕವನ್ನು ಕನ್ನಡಿಗರ ಮನೆ ಬಾಗಿಲಿಗೆ ಆದಷ್ಟು ಕಡಿಮೆ ಬೆಲೆಗೆ ತಲುಪಿಸುವುದು ಯೋಚನೆ. ಮುಂದೆ ಕನ್ನಡ ಬಾವುಟ, ಕನ್ನಡ ಟಿ ಶರ್ಟ್, ಕನ್ನಡ ಪೋಸ್ಟರ್, ಕನ್ನಡ ಸಿನಿಮಾ ಡಿವಿಡಿ ಇನ್ನು ಹಲವಾರು ವಸ್ತುಗಳನ್ನು ಸೇರಿಸುತ್ತೇವೆ.

ಈ ನಮ್ಮ ಪಯಣಕ್ಕೆ ಸಾದಾ ಸ್ಪೂರ್ತಿಯಾಗಿರುವುದು ಸಾಹಿತ್ಯ ಭಂಡಾರದ ರಾಜು ಸಹೋದರರು. concave ಮೀಡಿಯಾದ ನಂದೀಶ್, ಎಸ್ ಎಲ್ ಬೈರಪ್ಪ ಫೇಸ್ಬುಕ್ ಪುಟದ ಅಡ್ಮಿನ್ ಶಶಾಂಕ್, ತಂತ್ರಾಂಶದ ಚಂದನ್ ವೀರಭದ್ರ, ಸಾಮಾನ್ಯ ಕನ್ನಡಗ ಫೇಸ್ಬುಕ್ ಅಡ್ಮಿನ್ ಆಗಿರುವ ಶರತ್.

English summary
www.Kannadaloka.in exclusive website for Kannada books, Tshirts launched today(April 29) on the occasion of Basava Jayanti. Kannadaloka site is a online bookstore for Kannada literature lovers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X