• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನ್ನಡ ವಿಜ್ಞಾನ ಬರಹಗಾರರಿಗೆ ಸಮ್ಮೇಳನ ಕಮ್ ಕಾರ್ಯಾಗಾರ

By Mahesh
|

ಬೆಂಗಳೂರು, ಏ,.22: ಕನ್ನಡ ವಿಜ್ಞಾನ ಬರಹಗಾರರು ವ್ಯವಸ್ಥಿತವಾಗಿ ಕೆಲಸ ಮಾಡಿದರೆ ವಿಜ್ಞಾನ ಸಾಹಿತ್ಯವನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಸಾಧ್ಯ ಎಂಬ ಆಶಯದಿಂದ ಮೇ 16ರಂದು ಬೆಂಗಳೂರಿನಲ್ಲಿ ಕನ್ನಡ ವಿಜ್ಞಾನ - ತಂತ್ರಜ್ಞಾನ ಬರಹಗಾರರ ಸಮ್ಮೇಳನ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿಜ್ಞಾನ ಸಂವಹನ ಕ್ಷೇತ್ರದ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಸಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶಾಸ್ತ್ರಗಳಲ್ಲಿ ಅಭೂತಪೂರ್ವ ಬೆಳವಣಿಗೆಗಳು ನಡೆಯುತ್ತಿವೆ. ಇವುಗಳನ್ನು ಕುರಿತು ಕನ್ನಡದಲ್ಲಿ ಬರೆಯುವವರ ಸಂಖ್ಯೆ ವಿರಳವಾಗಿದೆ. ವಿಶ್ವಕೋಶಗಳು, ವಿಕಿಪೀಡಿಯಾ, ಪಠ್ಯಪುಸ್ತಕಗಳು, ಇ-ಪುಸ್ತಕಗಳು, ವಿಜ್ಞಾನ ಪತ್ರಿಕೆಗಳು, ಜನಪ್ರಿಯ ಪತ್ರಿಕೆಗಳಲ್ಲಿ ವಿಜ್ಞಾನ ಲೇಖನಗಳು, ಬ್ಲಾಗ್ ಬರಹಗಳು, ವಿಜ್ಞಾನ ಕಥಾಸಾಹಿತ್ಯ, ... ಹೀಗೆ ವಿಜ್ಞಾನ ಬರಹಗಾರರಿಗೆ ಲಭ್ಯವಾಗಿರುವ ಮಾಧ್ಯಮಗಳು ಹಲವಾರು. [ಅಂತರಿಕ್ಷದಲ್ಲಿವೆ ಒಟ್ಟು 8 ವಾಸಯೋಗ್ಯ ಭೂಮಿಗಳು!]

ಕಾರ್ಯಕ್ರಮ ಬಾಗ್ಮನೆ ಟೆಕ್ ಪಾರ್ಕ್‌ನಲ್ಲಿರುವ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಚೇರಿಯಲ್ಲಿ ನಡೆಯಲಿದ್ದು ತಾಣದಲ್ಲಿ ಮುಂಚಿತವಾಗಿಯೇ ನೋಂದಾಯಿಸಿಕೊಂಡ ಆಸಕ್ತರು ಇದರಲ್ಲಿ ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇಲ್ಲ. ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಯಕ್ರಮ ಆಯೋಜಕರು

* ಡಾ. ಸಿ. ಪಿ. ರವಿಕುಮಾರ್ ,ಡಾ. ಯು.ಬಿ. ಪವನಜ,ಟಿ.ಜಿ. ಶ್ರೀನಿಧಿ,ಸುಧೀಂದ್ರ ಹಾಲ್ದೊಡ್ಡೇರಿ, ರವಿಕಿರಣ್ ಎ.

* ಸಂಪರ್ಕ -knsciworkshop@gmail.com

ಸಹಕಾರ: IEEE ಬೆಂಗಳೂರು ವಿಭಾಗ, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ

* ಕನ್ನಡ ವಿಜ್ಞಾನ /ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ - 2015

* ಮೇ 16, ಶನಿವಾರ

* ಸ್ಥಳ - ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಚೇರಿ, ಬಾಗ್ಮನೆ ಟೆಕ್ ಪಾರ್ಕ್, ಸಿ ವಿ ರಾಮನ್ ನಗರ, ಬೆಂಗಳೂರು 560093.

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶಾಸ್ತ್ರಗಳಲ್ಲಿ ಅಭೂತಪೂರ್ವ ಬೆಳವಣಿಗೆಗಳು ನಡೆಯುತ್ತಿವೆ. ಇವುಗಳನ್ನು ಕುರಿತು ಕನ್ನಡದಲ್ಲಿ ಬರೆಯುವವರ ಸಂಖ್ಯೆ ವಿರಳವಾಗಿದೆ. ವಿಶ್ವಕೋಶಗಳು, ವಿಕಿಪೀಡಿಯಾ, ಪಠ್ಯಪುಸ್ತಕಗಳು, ಇ-ಪುಸ್ತಕಗಳು, ವಿಜ್ಞಾನ ಪತ್ರಿಕೆಗಳು, ಜನಪ್ರಿಯ ಪತ್ರಿಕೆಗಳಲ್ಲಿ ವಿಜ್ಞಾನ ಲೇಖನಗಳು, ಬ್ಲಾಗ್ ಬರಹಗಳು, ವಿಜ್ಞಾನ ಕಥಾಸಾಹಿತ್ಯ, ... [ವಿಜ್ಞಾನ, ತಂತ್ರಜ್ಞಾನ ಬಿಟ್ಟು ಅಭಿವೃದ್ಧಿ ಅಸಾಧ್ಯ : ಮೋದಿ]

ಹೀಗೆ ವಿಜ್ಞಾನ ಬರಹಗಾರರಿಗೆ ಲಭ್ಯವಾಗಿರುವ ಮಾಧ್ಯಮಗಳು ಹಲವಾರು. ಕನ್ನಡ ವಿಜ್ಞಾನ ಬರಹಗಾರರು ವ್ಯವಸ್ಥಿತವಾಗಿ ಕೆಲಸ ಮಾಡಿದರೆ ವಿಜ್ಞಾನ ಸಾಹಿತ್ಯವನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಸಾಧ್ಯ ಎಂಬ ಆಶಯದಿಂದ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ವಿಜ್ಞಾನ ಸಾಹಿತ್ಯ ಬರೆಯುತ್ತಿರುವವರಿಗೆ ಆದ್ಯತೆ.

ಶಿಬಿರಾರ್ಥಿಗಳಿಗೆ ಸೂಚನೆಗಳು

* ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವ ಶುಲ್ಕವಿಲ್ಲ.

* ಮುಂಚಿತವಾಗಿ ನೋಂದಣಿ ಮಾಡುವುದು ಕಡ್ಡಾಯ.

* ನಿಮ್ಮನ್ನು ಮೇ 7ರ ಮುನ್ನ ಇ-ಮೇಲ್ ಮೂಲಕ ಸಂಪರ್ಕಿಸಲಾಗುವುದು.

* ಕಾರ್ಯಕ್ರಮ ಇರುವ ಸ್ಥಳ ಎಲ್‌ಆರ್‌ಡಿ‌ಈ ಕಚೇರಿಯ ಬಳಿ ಇದೆ; ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣಕ್ಕೆ ಹತ್ತಿರವಾಗುತ್ತದೆ.

[ವಿಶ್ವ ಸೃಷ್ಟಿಸಿದ ದೇವಕಣ ವಿಶ್ವವನ್ನೇ ನಾಶ ಮಾಡಬಲ್ಲದೆ?]

* ಬೆಳಗಿನ ಉಪಾಹಾರ, ಊಟ ಮತ್ತು ಕಾಫಿಯ ವ್ಯವಸ್ಥೆ ಇರುತ್ತದೆ.

* ಬರುವ/ಹೋಗುವ ವೆಚ್ಚವನ್ನು ದಯವಿಟ್ಟು ನೀವೇ ವಹಿಸಿಕೊಳ್ಳಬೇಕು.

* ಕಾರ್ಯಕ್ರಮದಲ್ಲಿ ನೀವು ಬರೆದ ಪುಸ್ತಕಗಳ/ಲೇಖನಗಳ/ಬ್ಲಾಗ್ ಬರಹಗಳ ಪ್ರದರ್ಶನಕ್ಕೆ ಅವಕಾಶವಿದೆ;

* ಎಷ್ಟು ಪುಸ್ತಕ ತರುತ್ತೀರಿ ಎಂದು ಮುಂಚೆ ತಿಳಿಸಿದರೆ ಅನುಕೂಲ.

* ಲೇಖನ ಬರೆಯುವ ಶಿಬಿರಕ್ಕಾಗಿ ಮೊದಲೇ ನೀವು ಬರೆಯುವ ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು ಬರಬೇಕು.

* ಚರ್ಚೆ ಸಮಯದಲ್ಲಿ ಕೇಳಬೇಕೆಂದುಕೊಂಡ ಪ್ರಶ್ನೆಗಳನ್ನು ಗುರುತು ಹಾಕಿಕೊಂಡು ಬರುವುದು ಅಥವಾ ಮುಂಚಿತವಾಗಿ ಆಯೋಜಕರಿಗೆ ಕಳಿಸುವುದು ಒಳ್ಳೆಯದು.

(ಒನ್ ಇಂಡಿಯಾ ಸುದ್ದಿ)

English summary
Kannada Science and Technology Writers conference and Workshop 2015 organized in Bengaluru by U.B Pavanaja, Haldodderi Sudhindra, T.G Srinidhi and others in association with Texas Instrumentand IEEE. The event will be held at Bagmane tech Park on May.16, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more