ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಶತಮಾನೋತ್ಸವ

By Ashwath
|
Google Oneindia Kannada News

Kannada Sahitya parishat
ಬೆಂಗಳೂರು, ಮೇ 5: ಕನ್ನಡ ಸಾಹಿತ್ಯ ಪರಿಷತ್‌ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯ‌ಕ್ರಮ ಜೂನ್‌ ತಿಂಗಳಿನಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.

ಧಾರವಾಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯ‌ಕ್ರಮವನ್ನು ಉದ್ಘಾಟಿಸಲಿದ್ದು, ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯ‌ಕ್ರಮದಲ್ಲಿ ಹಿಂದಿನ, ಇಂದಿನ ಮತ್ತು ಭವಿಷ್ಯದ ಕನ್ನಡ ಭಾಷೆಗೆ ಸಂಬಂಧಿಸಿದ ವಿಚಾರಗೋಷ್ಠಿಗಳು ನಡೆಯಲಿವೆ. ಶತಮಾನೋತ್ಸವದ ಸಮಾರೋಪ ಕಾರ್ಯ‌ಕ್ರಮ ಮೈಸೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹಾಲಂಬಿ ಹೇಳಿದರು.[ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ]

ಕನ್ನಡ ಸಾಹಿತ್ಯ ಪರಿಷತ್‌ ನೂರು ವರ್ಷದ ಹೆಜ್ಜೆ ಗುರುತನ್ನು ವಿವರಿಸುವ ಸಾಕ್ಷ್ಯಚಿತ್ರವನ್ನು ಸಂಗೀತಾ ನಿರ್ದೇಶಕ ಹಂಸಲೇಖಾ ನಿರ್ದೆಶಿಸಿದ್ದಾರೆ. ಸಮಾರಂಭದ ಪ್ರಯುಕ್ತ, ಎರಡು ದಿನ ಬೆಂಗಳೂರಿನಲ್ಲಿ ಹಲ್ಮಿಡಿ ಹಬ್ಬವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಶತಮಾನತ್ಸೋವ ಸಮಾರಂಭ:ಕನ್ನಡ ಸಾಹಿತ್ಯ ಪರಿಷತ್‌ನ ಶತಮಾನೋತ್ಸವ ಸಮಾರಂಭವನ್ನು 2014-15ರ ಸಾಲಿನಲ್ಲಿ ಒಂದು ವರ್ಷಗಳ ಕಾಲ ರಾಜ್ಯದ ನಾನಾ ಭಾಗಗಳಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದೆ. ಅನುದಾನದಲ್ಲಿ ಬೆಂಗಳೂರಿನಲ್ಲಿ 5 ಕೋಟಿ ರೂಪಾಯಿಯಲ್ಲಿ ಶತಮಾನೋತ್ಸವ ಭವನ ನಿರ್ಮಾಣವಾಗಲಿದೆ.

ಒಂದು ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಕಾವ್ಯ, ನಾಟಕ, ಸಣ್ಣಕಥೆ ಮುಂತಾದ ಕನ್ನಡ ಸಾಹಿತ್ಯದ ಸಂಪುಟಗಳ ಪ್ರಕಟಣೆ, ಒಂದು ಕೋಟಿ ರೂ. ವೆಚ್ಚದಲ್ಲಿ 3 ಮೌಲಿಕ ಗ್ರಂಥಗಳು ಪ್ರಕಟಣೆಯಾಗಲಿದೆ.

English summary
Kannada Sahitya Parishat president Pundalika Halambi, said inauguration of the centenary year celebrations would be held in Dharwad in June. Chief Minister Siddaramaiah would inaugurate the programmes. A two-day seminar on the past, present and future of Kannada language would be held on the occasion. The valedictory of the centenary year celebrations is planned in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X