• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ಆಯಿತು ಕನ್ನಡ ರಾಜ್ಯೋತ್ಸವದ ಪೋಸ್ಟರ್!

|
Google Oneindia Kannada News

ಬೆಂಗಳೂರು, ನವೆಂಬರ್ 24 : ನವೆಂಬರ್ ತಿಂಗಳಿನಲ್ಲಿ ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ರಾಜ್ಯೋತ್ಸವ ಆಚರಣೆಗೆ ಬೆಂಗಳೂರಿನ ಜಯನಗರದಲ್ಲಿ ಹಾಕಿದ ಪೋಸ್ಟರ್ ಈಗ ವಿವಾದ ಹುಟ್ಟು ಹಾಕಿದೆ.

ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘ (ನೋಂ) ನವೆಂಬರ್ 22ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದೆ. ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಾವೇರಿ; ಫೆ. 26 ರಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ; ಫೆ. 26 ರಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

'65ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಂಘದ ವತಿಯಿಂದ 26ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭ' ಎಂದು ಹಾಕಿಸಿರುವ ಪೋಸ್ಟರ್ ಈಗ ವಿವಾದ ಹುಟ್ಟು ಹಾಕಿದೆ. ಹಲವು ಬಿಜೆಪಿ ನಾಯಕರು ಪೋಸ್ಟರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ವಾಟಾಳ್ ನಾಗರಾಜ್ ಒಬ್ಬರೇ ಕನ್ನಡ ಅಭಿಮಾನಿ ಅಲ್ಲ ವಾಟಾಳ್ ನಾಗರಾಜ್ ಒಬ್ಬರೇ ಕನ್ನಡ ಅಭಿಮಾನಿ ಅಲ್ಲ

ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘ (ನೋಂ) ಪೋಸ್ಟರ್‌ನಲ್ಲಿ ಬರೆದಿರುವ ಬರಹ ವಿವಾದ ಹುಟ್ಟು ಹಾಕಿದೆ. 'ಸಿರಿಗನ್ನಡಂ ಗೆಲ್ಗೆ, ಜೈ ಯೇಸು' ಮತ್ತು 'ಸಿರಿಗನ್ನಡಂ ಬಾಳ್ಗೆ ಜೈ ಕ್ರಿಸ್ತ' ಎಂಬ ಬರಹಗಳು ಪೋಸ್ಟರ್‌ನಲ್ಲಿವೆ.

ಕರ್ನಾಟಕದಲ್ಲಿ 2021ರವರೆಗೂ ಕನ್ನಡ ಕಾಯಕ ವರ್ಷ ಆಚರಣೆಕರ್ನಾಟಕದಲ್ಲಿ 2021ರವರೆಗೂ ಕನ್ನಡ ಕಾಯಕ ವರ್ಷ ಆಚರಣೆ

ಬೆಂಗಳೂರಿನ ಜಯನಗರ 8ನೇ ಬಡಾವಣೆಯಲ್ಲಿನ ನಡೆದ ಕನ್ನಡ ರಾಜ್ಯೋತ್ಸವದ ಪೋಸ್ಟರ್ ಇದಾಗಿದೆ. 'ಬಾರಿಸು ಕನ್ನಡ ಡಿಂದಿಮವ ಓ ಕರ್ನಾಟಕ ಹೃದಯ ಯೇಸು' ಎಂಬ ಬರಹಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯೇಸುವಿನ ಬಗ್ಗೆ ತಕರಾರಿಲ್ಲ. ಆದರೆ, ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ತಿರುಚಿದ ಮತಿಗೇಡಿಗಳಿಗೆ ಕನ್ನಡಿಗರ ಧಿಕ್ಕಾರವಿರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಳವಿಕಾ ಅವಿನಾಶ್ ಅವರು ಪೋಸ್ಟರ್ ಟ್ವೀಟ್ ಮಾಡಿದ್ದಾರೆ.

English summary
Kannada rajyotsava poster sparks controversy in Bengaluru. Jayanagar Congress MLA Sowmya Reddy took part in the rajyotsava function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X