ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಡಿಚಿಕ್ಕನಹಳ್ಳಿಯ ಅಪಾರ್ಟ್ಮೆಂಟಿನಲ್ಲಿ ಮಕ್ಕಳ ರಾಜ್ಯೋತ್ಸವ

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 03 : ಬೆಂಗಳೂರು ದಕ್ಷಿಣದ ಬೊಮ್ಮನಹಳ್ಳಿ ಬಳಿಯ ಕೋಡಿಚಿಕ್ಕನಹಳ್ಳಿಯಲ್ಲಿರುವ 'ಜನಪ್ರಿಯ' ವಸತಿ ಸಮುಚ್ಚಯದಲ್ಲಿ ದಿನಾಂಕ ನವೆಂಬರ್ 28ರ೦ದು ಶನಿವಾರ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಬಹಳ ವಿಜೃಂಭಣೆಯಿ೦ದ ಆಚರಿಸಲಾಯಿತು.

ಬಂದಂತಹ ಮಹನೀಯರೆಲ್ಲರಿಗೂ ಸ್ವಾಗತ ಕೋರುತ್ತ, ಜನಪ್ರಿಯ ಅಸೋಸಿಯೇಷನ್ ಸದಸ್ಯರುಗಳಾದ ಎಸ್ ಆರ್ ಶೆಟ್ಟಿ, ವಿಜಯಕುಮಾರ, ಗಜಾನನ, ರಂದೇಶ ಬಂಗೇರ ಹಾಗೂ ಇತರರು ದೀಪ ಬೆಳಗುವುದರ ಮೂಲಕ ಕಾಯ೯ಕ್ರಮಕ್ಕೆ ಚಾಲನೆಯನ್ನು ನೀಡಿದರು. [ಬೆಂಗಳೂರಿನ ಐಟಿ ಕಂಪನಿಯಲ್ಲಿ ಮೊಳಗಿದ ಕನ್ನಡ ಕಹಳೆ]

Kannada Rajyotsava and Childrens Day at Janapriya apartment

ಜನಪ್ರಿಯ ವಸತಿ ಸಮುಚ್ಚಯದ ಮಕ್ಕಳ ನಾಟಕ, ನೃತ್ಯ, ಹಾಡು ಇತರ ಸಾಂಸ್ಕೃತಿಕ ಕಾಯ೯ಕ್ರಮವು ಜನರ ಮೆಚ್ಚುಗೆಗೆ ಪಾತ್ರವಾದವು. ರಂಗೋಲಿ, ಚಿತ್ರಕಲಾ ಸ್ಪರ್ಧೆ ಹಾಗು ಇತರ ಆಟದಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮವು ಹಬ್ಬದ ವಾತಾವರಣ ಹಾಗೂ ದೇಶ ಮತ್ತು ಭಾಷಾಪ್ರೇಮವನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾಯಿತು.
Kannada Rajyotsava and Childrens Day at Janapriya apartment

ಸಾಂಸ್ಕೃತಿಕ ಕಾಯ೯ಕ್ರಮದೊ೦ದಿಗೆ ತನ್ನ ಕೋಗಿಲೆ ಕ೦ಠದಿ೦ದ ಹಾಡುವುದರ ಮೂಲಕ ಸಭಿಕರನ್ನು ಮನರ೦ಜಿಸಿದ ಕುಮಾರಿ ನಿಹಾರಿಕ (ಸರಿಗಮಪ ಲಿಟಲ್ ಚಾಂಪ್ಸ್ ನ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಸ್ಪರ್ಧಿ) ಅವರಿಗೆ ಪ್ರಶಸ್ತಿ ಪತ್ರ ಮತ್ತು ಪದಕದೊಂದಿಗೆ ಗೌರವಿಸಲಾಯಿತು.
Kannada Rajyotsava and Childrens Day at Janapriya apartment

ಮುಂಬರುವ ಎಲ್ಲಾ ಸ್ಪರ್ಧೆಗಳಲ್ಲೂ ಗೆದ್ದು ಮುಂದೊಂದು ದಿನ ಬಹಳ ದೊಡ್ಡ ಗಾಯಕಿಯಾಗುವಂತೆ ಹಾರೈಸಿದರು. ನಿಹಾರಿಕ ಅವರ ತಾಯಿ ರಜಿನಿ, ತಂದೆ ರಾಜಶೇಖರ್ ಹಾಗೂ ತಂಗಿ ನಿಷಿತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅಂತಿಮವಾಗಿ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಸ್ವಯಂ ಸೇವಕರಿಗೆ ವಂದನಾರ್ಪಣೆ ಮಾಡಿ ಅಭಿನಂದಿಸುವುದರ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

English summary
Kannada Rajyotsava and Childrens Day were celebrated at Janapriya apartment in Bommanahalli in Bangalore South with lot of cultural activity by the residents. Kumari Niharika, who has reached SaReGaMaPa final enthralled the audience with beautiful Kannada songs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X