ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಹಿರಿಯ ಕವಿ ಕೆ. ನಿಸಾರ್ ಅಹಮದ್ ವಿಧಿವಶ

|
Google Oneindia Kannada News

ಬೆಂಗಳೂರು, ಮೇ 5: ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಕವಿ ಪ್ರೊ. ಕೆ ನಿಸಾರ್ ಅಹಮದ್ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಹಿರಿಯಕವಿಗಳು ಬಳಲುತ್ತಿದ್ದರು.ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಭಾನುವಾರ(ಮೇ 5) ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡ ಸಾರಸ್ವತ ಲೋಕದಲ್ಲಿ ಸಭ್ಯ ಕವಿಯೆಂದೇ ಹೆಸರಾಗಿರುವ ನಿಸಾರ್‌ ಅಹಮದ್‌,ಜೋಗದ ಸಿರಿ ಬೆಳಕಿನಲ್ಲಿ ಸಾಹಿತ್ಯವು ಅತ್ಯಂತ ಜನಪ್ರಿಯವಾಗಿದೆ. ಶಿವಮೊಗ್ಗದಲ್ಲಿ ನಡೆಯಲಿರುವ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಾವ್ಯವೇ ಅವರ ಮೊದಲ ಪ್ರೀತಿಯಾದರೂ, ಸೊಗಸಾದ ಗದ್ಯವನ್ನೂ ಬರೆದಿದ್ದಾರೆ.

Karnataka poet K Nissar Ahmed passes away

ಹಿರಿಯ ಕವಿ ನಿಸಾರ್ ಅಹ್ಮದ್ ಅವರ ಸಂಕ್ಷಿಪ್ತ ಪರಿಚಯ
ಜನನ : ಫೆ.5, 1936
ಹುಟ್ಟಿದ ಊರು : ದೇವನಹಳ್ಳಿ(ಬೆಂಗಳೂರು ಜಿಲ್ಲೆ)
ತಂದೆ : ಕೆ.ಎಸ್‌.ಹೈದರ್‌
ತಾಯಿ : ಷಾನ್‌ವಾಜ್‌ ಬೇಗಂ
ವಿದ್ಯಾಭ್ಯಾಸ : ಭೂವಿಜ್ಞಾನ ವಿಭಾಗದಲ್ಲಿ ಎಂ.ಎಸ್ಸಿ
ವೃತ್ತಿ : ಬೆಂಗಳೂರು, ಶಿವಮೊಗ್ಗ, ಗುಲ್ಬರ್ಗ ಮತ್ತಿತರೆಡೆ ಪ್ರಾಧ್ಯಾಪಕರಾಗಿ ಸೇವೆ. ಶಿಕ್ಷಣ ಸಂದರ್ಭದಲ್ಲಿ ಪ್ರಭಾವ ಬೀರಿದ ಗುರುಗಳು : ಎಂ.ಸೀ.ಸೀತಾರಾಮಯ್ಯ, ಜಿ.ಪಿ.ರಾಜರತ್ನಂ, ಎಲ್‌ ಗುಂಡಪ್ಪ ಮತ್ತಿತರರು. ಕವನ ಸಂಕಲನ : ಮನಸು ಗಾಂಧಿ ಬಜಾರು(1960), ನೆನೆದವರ ಮನದಲ್ಲಿ(1964), ಸುಮಹೂರ್ತ(1967), ಸಂಜೆ ಐದರ ಮಳೆ(1970), ನಾನೆಂಬ ಪರಕೀಯ(1972), ಆಯ್ದ ಕವಿತೆಗಳು(1974), ನಿತ್ಯೋತ್ಸವ(1976), ಸ್ವಯಂ ಸೇವೆಯ ಗಿಳಿಗಳು(1977), ಅನಾಮಿಕ ಆಂಗ್ಲರು(1982), ಬರಿರಂತರ(1990), ಸಮಗ್ರ ಕವಿತೆಗಳು(1991), ನವೋಲ್ಲಾಸ(1994), ಆಕಾಶಕ್ಕೆ ಸರಹದ್ದುಗಳಿಲ್ಲ(1998), ಅರವತ್ತೆೈದರ ಐಸಿರಿ(2001), ಸಮಗ್ರ ಭಾವಗೀತೆಗಳು(2001), ಪ್ರಾತಿನಿಧಿಕ ಕವನಗಳು(2002)
ವಿಮರ್ಶೆ : ಇದು ಬರಿ ಬೆಡಗಲ್ಲೋ ಅಣ್ಣ, ಮನದೊಂದಿಗೆ ಮಾತುಕತೆ, ಹಿರಿಯರು ಹರಸಿದ ಹೆದ್ದಾರಿ, ಅಚ್ಚುಮೆಚ್ಚು, ವಿಚಾರ ವಿಹಾರ, ಸಮಗ್ರ ಗದ್ಯ ಬರಹಗಳು, ಸ-ರಸೋಕ್ತಿಗಳ ಸಂಗಾತಿ.
ಅನುವಾದ : ಎ ಮಿಡ್‌ ಸಮರ್‌ ನೈಟ್ಸ್‌ ಡ್ರೀಮ್ಸ್‌, ಒಥೆಲೊ, ಹೆಜ್ಜೆ ಗುರುತು, ಬರೀ ಮರ್ಯಾದಸ್ಥರೆ. ಧ್ವನಿ ಸುರಳಿ : ನಿತ್ಯೋತ್ಸವ, ಸುಶ್ರಾವ್ಯ, ನವೋಲ್ಲಾಸ, ಸುಮಧುರ, ಅಪೂರ್ವ, ಹೊಂಬೆಳಕು.
ಪ್ರಶಸ್ತಿಗಳು : ಸೋವಿಯತ್‌ ನೆಹರೂ ಪುರಸ್ಕಾರ, ಕರ್ನಾಟಕ ವಿವಿಯ ಡಾಕ್ಟರೇಟ್‌, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ, ಅನಕೃ ಪ್ರಶಸ್ತಿ, ಎನ್‌ಸಿಆರ್‌ಟಿ ರಾಷ್ಟ್ರೀಯ ಬಹುಮಾನ ಇತ್ಯಾದಿ. ಗೌರವ : ಶಿವಮೊಗ್ಗದಲ್ಲಿನ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
ಹೆಗ್ಗಳಿಕೆ : ಮೊದಲ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ...

English summary
Karnataka poet Kokkare Hosahalli Shekh Haider Nissar Ahmed passes away. He was 84.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X