ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧುರೆಗೆ ಹೋದನು ಮಾಧವ ಡಾ. ಎಚ್ಎಸ್ವಿ ಗೀತ ಗಾಯನ

By Mahesh
|
Google Oneindia Kannada News

ಸಂಗೀತ ಮತ್ತು ಸಂಗೀತವನ್ನಷ್ಟೇ ಮೂಲ ಆಶಯವನ್ನಾಗಿಸಿಕೊಂಡ ಅಂತರಾಳಕ್ಕೆ ಹೊಸ ತರಹದ ಕಾರ್ಯಕ್ರಮಗಳಿಗೆ ಮುಖ ಮಾಡುವ ಬಯಕೆ.

ಅಂತೆಯೇ "ಸಾಹಿತಿ-ಸಾಹಿತ್ಯ-ಸಂಗೀತ"ದ ಆಶಯದೊಂದಿಗೆ ನಡೆಸುತ್ತಿರುವ ಸರಣಿಯ ಮೊದಲನೇಯ ಪ್ರಸ್ತುತಿಯಾಗಿ ಡಾ. ದೊಡ್ಡರಂಗೇಗೌಡರ 40 ವರ್ಷದ ಚಿತ್ರ-ಸಾಹಿತ್ಯದ ದೀರ್ಘ ಪಯಣದಲ್ಲಿ ಕನ್ನಡ ಚಿತ್ರ ರಂಗಕ್ಕೆ ಅವರು ನೀಡಿದ ಮರೆಯಲಾಗದ ಹಾಡುಗಳನ್ನು ಮೆಲುಕುಹಾಕುವುದಕ್ಕೆ ಮತ್ತು ದೊಡ್ಡರಂಗೇಗೌಡರಿಗೆ ಗೌರವವನ್ನು ಅರ್ಪಿಸುವುದಕ್ಕಾಗಿ 'ನಿನ್ನ ರೂಪು ಎದೆಯ ಕಲಕಿ' ಸಂಗೀತ ಸಂಜೆಯನ್ನು ಆಯೋಜಿಸಿತ್ತು.

ಆ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಸರಣಿಯ ಎರಡನೇಯ ಕಾರ್ಯಕ್ರಮ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತ ಗಾಯನ ಕಾರ್ಯಕ್ರಮ "ಮಧುರೆಗೆ ಹೋದನು ಮಾಧವ" ಅನ್ನು ಮುಂದಿನ ಶನಿವಾರ ಫೆಬ್ರವರಿ 24 ರಂದು ಸಂಸ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದೆ.

ಕನ್ನಡ ಸಾಹಿತ್ಯ ಲೋಕವೆಂಬುದು ಆಕಾಶದಂತೆ, ಅಲ್ಲಿ ಅಸಂಖ್ಯ ನಕ್ಷತ್ರಗಳು, ನೂರಾರು ಸೂರ್ಯ-ಚಂದ್ರರು. ಈ ನೂರಾರು ಮಿನುಗುವ ಸೂರ್ಯರಲ್ಲಿ ಭೂಮಿಗೆ ಹತ್ತಿರವಿರುವ ಸೂರ್ಯರು ಕೆಲವು ಮಾತ್ರ. ಅಂತಹ ಒಂದು ಮಿನುಗುವ, ಬೆಳಗುವ ಸಾಹಿತ್ಯಲೋಕದ ಸೂರ್ಯ ಎಂದರೆ ನಮ್ಮ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ.

Kannada poet Dr. HS Venkatesh Murthy musical event by Antarala

ರೆಕ್ಕೆ ಇದ್ದರೆ ಸಾಕೆ, ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು, ಮ್ಯಾಲೆ ಹಾರೋಕೆ...

ನನ್ನ ಹಳೆಯ ಹಾಡುಗಳೆ, ನಿಮ್ಮೋಳಿರಲಿ ಕೊಂಚ ದಯಾ
ನಾನು ಒಂಟಿ, ನನ್ನೊಡನೆ ಇದೆ ಚಡಪಡಿಸುವ ಹೃದಯ..

ನಾಕು ದಿನದ ಬಾಳಿಗೆ, ಇರಲಿ ಹಾಲು ಹೋಳಿಗೆ
ಕೆಡಿಸಬಹುದೆ ಬಾಳ ಹದವ, ಹುಳಿಯ ಹಿಂಡಿ ಹಾಲಿಗೆ..

ಹೀಗೆ ಹಲವಾರು ಮನಸೂರೆಗೊಳ್ಳುವ ಭಾವ ಮುತ್ತುಗಳಿಗೆ ಅಸಾಮಾನ್ಯ ದಾರ ಪೋಣಿಸಿದವರು ಎಚ್.ಎಸ್ವಿ ಮೇಷ್ಟ್ರು. ಸಾಹಿತ್ಯ ಲೋಕದಲ್ಲಿ ಕೂತು ಕನ್ನಡ ಕವನಗಳನ್ನು ತಮ್ಮ ಲೇಖನಿಯ ತುದಿಯಿಂದ ಎಲ್ಲರ ಮನ ತೂಗುವಂತೆ ಪದ ಪುಂಜ ಚಿತ್ತಾರ ಬಿಡಿಸುತ್ತಿರುವ ಎಚ್.ಎಸ್ವಿ ಇಂದಿಗೂ ಎಂದಿಂಗೂ ಯುವ-ಕವಿ.

ಕನ್ನಡದ ಭರವಸೆಯ, ನೆಚ್ಚಿನ ಸಂಗೀತಗಾರ, ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್ ಜೊತೆಗೆ ಸುಶ್ರಾವ್ಯ ಕಂಠದ ಗಾಯಕಿಯರಾದ ಶ್ವೇತಾ ಪ್ರಭು, ಅರ್ಪಿತಾ ವೇಣು & ಶ್ರುತಿ ತುಮಕೂರು ಜೊತೆಗೆ ಗಾಯಕ ಮಹೇಶ್ ಪ್ರೀಯದರ್ಶನ್ ಧ್ವನಿಯಾಗಲಿದ್ದಾರೆ.

ಸುಮಧುರ ಹಾಡುಗಳು, ಸಂತಸದ ಕ್ಷಣಗಳ ಜೊತೆಗೆ ಅಂದು ಎಚ್.ಎಸ್ವಿ ಮೇಷ್ಟ್ರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ತಮ್ಮ ಜೀವನಾನುಭವಗಳನ್ನು, ಹಾಡು ಹುಟ್ಟಿದ ಸಂಧರ್ಭಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಕನ್ನಡ ಸಂಗೀತ ಪ್ರೇಮಿಗಳು, ಚಿತ್ರಗೀತೆ ರಸಿಕರು ಮತ್ತು ಸಾಹಿತ್ಯಾಭಿಮಾನಿಗಳು ತಪ್ಪದೇ ಹಾಜರಿದ್ದು ಗುನುಗುವ ಹಾಡುಗಳಿಗೆ ದನಿಯಾಗುವ ಅಪರೂಪದ ಕಾರ್ಯಕ್ರಮ ಇದಾಗಿದೆ. ಸಂತಸದ ಸಂಭ್ರಮಕ್ಕೆ ಸಾಕ್ಷಿಯಾಗುವ ಬನ್ನಿ.

ನಿಮ್ಮ ನೀರಿಕ್ಷೆಯಲ್ಲಿ,
ಅಂತರಾಳ

English summary
Antarala team has organised Kannada poet Dr. HS Venkatesh Murthy musical event at Samsa Bayalu Rangamandira, JC road, Bengaluru on Feb 24, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X