ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ. 29ರಂದು ಒಂದ್ ಸೆಕೆಂಡ್ ವಿ ಮೂವ್ ಥಿಯೇಟರ್ ನ ಕನ್ನಡ ನಾಟಕ

By ಒಂದ್ ಸೆಕೆಂಡ್
|
Google Oneindia Kannada News

ಬೆಂಗಳೂರು, ಫೆಬ್ರವರಿ 25: ಬೆಂಗಳೂರಿನ ಜನಪ್ರಿಯ ನಾಟಕ ಸಂಸ್ಥೆ ವಿಮೂವ್ ಥಿಯೇಟರ್ ಕಳೆದ ಹದಿಮೂರು ವರ್ಷಗಳಿಂದ ದೇಶದಾದ್ಯಂತ ತನ್ನ ನಾಟಕಗಳ ಪ್ರತಿ ವರ್ಷ ಹಾಗೂ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ವಿ ಮೂವ್ ತಂಡ ತನ್ನ 16ನೇ ರಂಗ ಪ್ರಯೋಗ ''ಒಂದ್ ಸೆಕೆಂಡ್'' ಎಂಬ ಹೊಸ ಕನ್ನಡ ನಾಟಕವನ್ನು ರಂಗದ ಮೇಲೆ ತಂದಿದೆ. ಫೆಬ್ರವರಿ 29ರಂದು ಜೆಪಿನಗರದ ವ್ಯೋಮಾ ಆರ್ಟ್ಸ್ ಸ್ಟುಡಿಯೋದಲ್ಲಿ ಪ್ರದರ್ಶನಗೊಳ್ಳಲಿದೆ.

ನಾಟಕದ ಬಗ್ಗೆ: ಒಂದ್ ಸೆಕೆಂಡ್ ನಾಟಕವನ್ನು, ಗೋಪಾಲ ಕೃಷ್ಣ ಪೈ ಅನುವಾದಿಸಿರುವ ಆಧುನಿಕ ಚೀನಿ ಕಥೆಗಳು ಪುಸ್ತಕದಿಂದ ರಂಗಕ್ಕೆಅಳವಡಿಸಿಕೊಳ್ಳಲಾಗಿದೆ. ಈ ನಾಟಕ ಒಬ್ಬ ವ್ಯಕ್ತಿಯ ವಾಸ್ತವದ ಹುಡುಕಾಟದ ಕಥೆ, ತನ್ನ ಜೀವನದಲ್ಲಿ ನಡೆದು ಹೋಗಿರುವ ಅತಿ ದೊಡ್ಡಸನ್ನಿವೇಶವನ್ನು ಮೆಲಕು ಹಾಕುತ್ತ ಆ ಸನ್ನಿವೇಶ ಹೇಗೆ ಅವನ ಜೀವನದ ದಿಕ್ಕನ್ನು ಬದಲಾಯಿಸಿತು ಅನ್ನೋದನ್ನ ಎಳೆ ಎಳೆಯಾಗಿಬಿಡಿಸುತ್ತಿರುವಾಗ ಅವನಿಗೆ ಅರಿವಾಗುವ ಸತ್ಯವೇ ಅವನು ಹುಡುಕುತ್ತಿದ್ದ ವಾಸ್ತವವೇ? ಅನ್ನೋ ಪ್ರಶ್ನೆಯಿಂದ ನಾಟಕಮುಕ್ತಾಯವಾಗುತ್ತದೆ.

ಗಿರೀಶ್ ಕಾರ್ನಾಡ್ ಅವರಲ್ಲಿ ಚಿಂತಕನೂ ಇದ್ದ, ರಾಜಕಾರಣಿಯೂ ಇದ್ದಗಿರೀಶ್ ಕಾರ್ನಾಡ್ ಅವರಲ್ಲಿ ಚಿಂತಕನೂ ಇದ್ದ, ರಾಜಕಾರಣಿಯೂ ಇದ್ದ

ಒಬ್ಬ ಮನುಷ್ಯನ್ನ ಒಳ ಯೋಚನೆಗಳನ್ನು ಪ್ರತಿಬಿಂಬಿಸುವ ಪ್ರಯತ್ನದಲ್ಲಿ ಹೇಗೆ ಜೀವನದ ಕೆಲವು ಮುಖ್ಯ ಸನ್ನಿವೇಶಗಳು ಒಂದುಜೀವನವನ್ನೇ ಬದಲಾಯಿಸುವುದು ಅನ್ನೋದೇ ನಾಟಕದ ತಿರುಳು! ನಾಟಕದ ಪಾತ್ರದಾರಿ ತನ್ನ ಕಥೆಯನ್ನು ವ್ಯಕ್ತ ಪಡಿಸುತ್ತ, ತನ್ನಲ್ಲಿಪ್ರತಿಯೊಬ್ಬ ಪ್ರೇಕ್ಷಕನನ್ನು ಬಿಂಬಿಸುವ ತಂತ್ರವನ್ನು ನಾಟಕದಲ್ಲಿ ಅಳವಡಿಸಲಾಗಿದೆ. ನಾಟಕ ವಿಡಂಬನಾತ್ಮಕ ಶೈಲಿಯಲ್ಲಿದ್ದು, ಪಾತ್ರಧಾರನಕಥೆಯನ್ನು ಸಮಾಜದ ಆಗು ಹೋಗುಗಳ ಮಧ್ಯೆ ಬಿಂಬಿಸುತ್ತ ತನ್ನಲಿ ಅಡಗಿರೋ ಪ್ರಶ್ನೆಗಳನ್ನು ಪ್ರೇಕ್ಷನಿಗೆ ಕೇಳುತ್ತ ಸಂವಾದಾತ್ಮಕಮಾದರಿಯಲ್ಲಿ ನಾಟಕವನ್ನು ಕಟ್ಟಿ ಕೊಡಲು ಪ್ರಯತ್ನ ಮಾಡಲಾಗಿದೆ.

Kannada play ‘Ond Secoond’ by WeMove Theatre Vyoma Arts Studio

ಸುಮಾರು 60 ನಿಮಿಷದ ಈ ಏಕ ವ್ಯಕ್ತಿ ನಾಟಕವನ್ನು, ಅಭಿಷೇಕ್ ಅಯ್ಯಂಗಾರ್ ರಂಗರೂಪಕ್ಕೆ ಅಳವಡಿಸಿ ನಿರ್ದೇಶಿಸಿದ್ದಾರೆ. ರಂಗದ ಮೇಲೆ ಅನಿರುಧ್ ಮಹೇಶ್ ಸುಮಾರು 7 ಕ್ಕೂ ಹೆಚ್ಚು ಪಾತ್ರಗಳನ್ನೂ ಒಬ್ಬನೇ ನಿರ್ವಹಿಸುತ್ತಾರೆ. ನಾಟಕ್ಕೆ ಅಭಿಷೇಕ್ ನರೈನ್ ರವರಸಂಗೀತ ಇದ್ದು, ಬೆಳಕು ಮಂಜು ನಾರಾಯಣ್ ರವರದ್ದು. ಫೆ. 29ರಂದು 7.30ಕ್ಕೆ ಪ್ರದರ್ಶನ ಆರಂಭ.

Kannada play ‘Ond Secoond’ by WeMove Theatre Vyoma Arts Studio

ಈ ನಾಟಕ ಒಬ್ಬ ವ್ಯಕಿಯು ವಾಸ್ತವದ ಹುಡುಕಾಟದ ಕಥೆ, ತನ್ನ ಜೀವನದಲ್ಲಿ ನಡೆದು ಹೋಗಿರುವ ಅತಿ ದೊಡ್ಡ ಸನ್ನಿವೇಶವನ್ನು ಮೆಲುಕು ಹಾಕುತ್ತಾ ಆ ಸನ್ನಿವೇಶ ಹೆೇಗೆ ಅವನ ಜೀವನದ ದಿಕ್ಕನ್ನು ಬದಲಾಯಿಸಿತು ಅನ್ನೋದನ್ನು ಎಳೆ ಎಳೆಯಾಗಿ ಬಿಡಿಸುತ್ತಿರುವಾಗ ಅವನಿಗೆ ಅರಿವಾಗುವ ಸತ್ಯವೇ ಅವನು ಹುಡುಕುತ್ತಿದ್ದ ವಾಸ್ತವವೆೇ? ಅನ್ನೋ ಪ್ರಶ್ನೆಯಿಂದ ನಾಟಕ ಮಕ್ತಾಯವಾಗುತ್ತದೆ.

English summary
The Kannada play ‘Ond Secoond’ WeMove Theatre will be staged on Feb 29th in VYOMA ARTS STUDIO, J.P NAGAR at 7.30pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X