ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇವಾ ಸದನದಲ್ಲಿ ಏಕಾಂಕ ಏಕ ವ್ಯಕ್ತಿ ನಾಟಕ 'ನನ್ನ ಕಥೆ' ನೋಡಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 22: 'ಅಶ್ವಘೋಷ ಥಿಯೇಟರ್ ಟ್ರಸ್ಟ್' ಅರ್ಪಿಸುವ ಮತ್ತು 'ಅನ್ವೇಷಣೆ ರಂಗತಂಡ' ಅಭಿನಯಿಸುವ 'ನನ್ನ ಕಥೆ" ಏಕಾಂಕ ಏಕ ವ್ಯಕ್ತಿ ನಾಟಕ ಶನಿವಾರ(ಫೆಬ್ರವರಿ 23)ದಂದು ಪ್ರದರ್ಶನಗೊಳ್ಳಲಿದೆ.

ದಿನ ಬೆಳಗಾದರೆ.. ನಮ್ಮ ನಿಮ್ಮ ಸುತ್ತಮುತ್ತಲು ನಡೆಯುವ ಹಲವು ನೈಜ ಮತ್ತು ಕಾಲ್ಪನಿಕ ಸನ್ನಿವೇಶಗಳ ಮಿಶ್ರಣದ ನಾಟಕ "ನನ್ನ ಕಥೆ" . ಮನುಷ್ಯನ ವ್ಯಕ್ತಿತ್ವ ಸ್ವಾರ್ಥ, ಅಸೂಯೆ, ಕಾಮ, ಮೋಹ, ಮದ, ಮಾತ್ಸರ್ಯ ದಿಂದ ಕಲ್ಮಶ ಆಗಿರೋದ್ರಿಂದ ಸಮಾಜದಲ್ಲಿ ತಾಯಾಗಿ, ಅಕ್ಕ, ತಂಗಿ, ಹೆಂಡತಿ, ಸ್ನೇಹಿತೆಯಾಗಿ ಹೆಣ್ಣು ಬೇಕೆ ಹೊರತು ಮಗಳಾಗಿ ಮಾತ್ರ ಬೇಡ ಅನ್ನೋ ಅಳುಕಿನಿಂದಲೇ ಈ ನನ್ನ ಕಥೆ ನಾಟಕ ಶುರುವಾಗುತ್ತದೆ.

Kannada Play Nanna Kathe at Seva Sadan, Malleswaram

ಇಂಥಾ ಸಮಾಜದಲ್ಲಿ ಒಬ್ಬಳು ಹೆಣ್ಣು ತನ್ನ ತಾಯ್ತನವನ್ನು ಸಂತೋಷದಿಂದ ಅನುಭವಿಸಬೇಕು. ತನ್ನ ಮಗಳನ್ನು ಗಂಡಿನ ಸರಿ ಸಮನಾಗಿ ಬದುಕೋ ಹಾಗೆ ಮಾಡಬೇಕು ಅಂತ ಆಸೆ ಪಡೋದು ತಪ್ಪಾ? ಮನುಷ್ಯ ತನ್ನ ನೈತಿಕತೆ ಕಳ್ಕೊಂಡ ಪಕ್ಷದಲ್ಲಿ ತೆಗೆದು ಕೊಳ್ಳೋ ಸಣ್ಣ ಸಣ್ಣ ನಿರ್ಧಾರದ ಬಗ್ಗೆ ಗಮನ ವಹಿಸಬೇಕಾಗುತ್ತದೆ ಅನ್ನೋ ತತ್ತ್ವದೊಂದಿಗೆ ನಾಟಕ ಮುಗಿಯುತ್ತದೆ.

ಒಂದು ಗಂಟೆ ಸಂಪೂರ್ಣ ರಂಗದ ಮೇಲೆ ಅಭಿನಯ - ಕು.ಅಂಜಲಿ

ಪ್ರತಿಯೊಬ್ಬ ಗಂಡಿನಲ್ಲಿ ಒಂದು ಹೆಣ್ಣು ಇರುತ್ತಾಳೆ,
ಪ್ರತಿಯೊಬ್ಬರೂ ನೋಡಲೇಬೇಕಾದ ನಾಟಕ

ಬೆಳಕು - ಅಭಯ್ ಹರ್ಷ
ಸಂಗೀತ - ವೆಂಕಟೇಶ್ ಜೋಶಿ

ರಚನೆ - ನಿರ್ದೇಶನ : ಶ್ರೀ ಗುರುಪ್ರಸಾದ್

23 ಫೆಬ್ರವರಿ 2019 ಶನಿವಾರ
ಸಂಜೆ 4:30 ಕ್ಕೆ

ಟಿಕೆಟ್ ದರ : ರೂ.100/-

ಸ್ಥಳ : ಸೇವಾ ಸದನ
ಸಿ 107, 14 ನೇ ಅಡ್ಡ ರಸ್ತೆ,
ಮಲ್ಲೇಶ್ವರಂ
ಬೆಂಗಳೂರು

English summary
“Nanna Kathe” revolves around the changeover of our thought process, an adaptation of western culture forgetting our heritage and culture followed from decades. “Nanna Kathe” the present day scenario written and directed by Sriguruprasad is performed by Artist Ms. Anjali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X