• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ 'ಸನ್ನಿ ನೈಟ್' ಹಾಟೆಸ್ಟ್ ಪಾರ್ಟಿ ಬೇಕಾ?

By Prasad
|
   Sunny leone is all set to visit Bengaluru for new year celebration and people are angry about it

   ಬೆಂಗಳೂರು, ಡಿಸೆಂಬರ್ 09 : ಮೈಯಲ್ಲಿ ಚಳಿಯ ಗುಳ್ಳೆಗಳನ್ನೆಬ್ಬಿಸುವ ಡಿಸೆಂಬರ್ 31ರ ಹೊಸವರ್ಷದ ಸಂಭ್ರಮದಲ್ಲಿ, ಕೊರೆಯುವ ಮಾಗಿಯ ಚಳಿಯಲ್ಲಿ ಪಡ್ಡೆಗಳ ಮೈಯನ್ನು ಬೆಚ್ಚಗಾಗಿಸಲು ಕರನ್ಜಿತ್ ಕೌರ್ ವೋಹ್ರಾ ಎಂಬ ಅದ್ಭುತ ಅಂಗಸೌಷ್ಟವದ ಬೆಡಗಿ ಬೆಂಗಳೂರಿಗೆ ಬರುತ್ತಿದ್ದಾರೆ.

   ಈ ಕರನ್ಜಿತ್ ಕೌರ್ ವೋಹ್ರಾ ಯಾರೆಂಬುದನ್ನು ತಿಳಿಯಬೇಕಿದ್ದರೆ ಗೂಗಲ್ ನೊಮ್ಮೆ ಜಾಲಾಡಿ ನೋಡಿ. ಆ ಚೆಲುವೆ ಮತ್ತಾರೂ ಅಲ್ಲ, ಒಂದಾನೊಂದು ಕಾಲದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸಿ ಕುಖ್ಯಾತಿಯನ್ನು ಗಳಿಸಿದ್ದ ಭಾರತದ ಮೂಲದ ಬೆಡಗಿ ಸನ್ನಿ ಲಿಯೋನ್.

   ಕೊಚ್ಚಿ ಭೇಟಿ ನೀಡಿದ್ದಕ್ಕೆ ಸನ್ನಿ ಲಿಯೋನ್ ವಿರುದ್ಧ ಪ್ರಕರಣ ದಾಖಲು

   ಜಿಸಮ್ 2, ಶೂಟೌಟ್ ಅಟ್ ವಡಾಲಾ, ಎಂಎಂಎಸ್ 2, ಲವ್ ಯೂ ಆಲಿಯಾ, ಕಾಮ ಕಾಮಿಡಿ ಚಿತ್ರ ಮಸ್ತ್ ಜಾದೆ, ಒನ್ ನೈಟ್ ಸ್ಟಾಂಡ್ ಮುಂತಾದ ಹಿಂದಿ ಚಿತ್ರಗಳಲ್ಲಿ ಕಾಮನೆ ಕೆರಳಿಸುವಂಥ ಪಾತ್ರಗಳಲ್ಲಿ ಅಭಿನಯಿಸಿ ಭಾರತದಲ್ಲಿಯೂ ಸನ್ನಿ ಲಿಯೋನ್ ಹೆಸರುವಾಸಿಯಾಗಿದ್ದಾರೆ.

   ಪೇಟಾ ಜಾಹೀರಾತಿಗಾಗಿ ಬೆತ್ತಲಾದ ಸನ್ನಿ

   ಪೇಟಾ ಜಾಹೀರಾತಿಗಾಗಿ ಬೆತ್ತಲಾದ ಸನ್ನಿ

   ಅವರು ಹಿಂದಿ ಸಿನೆಮಾಗಳಲ್ಲಿ ನಟಿಸುವುದು ಮಾತ್ರವಲ್ಲ, ಪ್ರಾಣಿಹಿಂಸೆ ಮಾಡಬೇಡಿರೆಂದು ಪೇಟಾಗಾಗಿ ತನ್ನ ಗಂಡ ಡೇನಿಯೆಲ್ ವೈಬರ್ ನೊಂದಿಗೆ ಇತ್ತೀಚೆಗೆ ಬೆತ್ತಲಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಅಮೆರಿಕಾದ ಕ್ಯಾನ್ಸರ್ ಸೊಟೈಟಿ ಪರವಾಗಿಯೂ ಅವರು ಅಭಿಯಾನ ಮಾಡಿದ್ದಾರೆ.

   ಪ್ರಾಣಿಗಳ ಮೇಲಿನ ಪ್ರೀತಿಗೆ ಬೆತ್ತಲಾದ ಸನ್ನಿಲಿಯೋನ್ ದಂಪತಿ!

   'ಸನ್ನಿ ನೈಟ್' ಎಂಬ ಹಾಟೆಸ್ಟ್ ಪಾರ್ಟಿ

   'ಸನ್ನಿ ನೈಟ್' ಎಂಬ ಹಾಟೆಸ್ಟ್ ಪಾರ್ಟಿ

   ಈ ಪರಿಯ ಸನ್ನಿ ಲಿಯೋನ್ ಅವರ 'ಸನ್ನಿ ನೈಟ್' ಎಂಬ ಹಾಟೆಸ್ಟ್ ಪಾರ್ಟಿಗೆ ಬೆಂಗಳೂರಿನಲ್ಲಿ ವೇದಿಕೆ ಸಜ್ಜಾಗುತ್ತಿದೆ. ನಾಗವಾರದಲ್ಲಿರುವ ಮಾನ್ಯತಾ ಎಂಬಾಸಿ ಬಿಸಿನೆಸ್ ಪಾರ್ಕ್ ನಲ್ಲಿ ಸನ್ನಿ ಲಿಯೋನ್ ಪಡ್ಡೆಗಳ ಚಳಿ ಬಿಡಿಸಲಿದ್ದಾರೆ. ಇಪ್ಪತ್ತೊಂದು ವಯಸ್ಸು ಮೀರಿದವರಿಗೆ ಮಾತ್ರ ಪ್ರವೇಶ! ಪ್ರೊಗ್ರೆಸಿವ್ ಬ್ರದರ್ಸ್ ಎಂದೇ ಹೆಸರುವಾಸಿಯಾಗಿರುವ ಸನ್ನಿ ಮತ್ತು ಕಣ್ ಎಂಬುವವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

   ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

   ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

   ಸನ್ನಿ ಬಂದು ಬೆಂಗಳೂರಿನಲ್ಲಿ ಕುಣಿಯುತ್ತಿರುವುದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಹಲವಾರು ಕನ್ನಡಪರ ಸಂಘಟನೆಗಳು ಭಾರೀ ಪ್ರತಿರೋಧ ಆರಂಭಿಸಿವೆ. ಬೆಂಗಳೂರು ನಗರದ ಸಂಸ್ಕೃತಿಯನ್ನು ಸನ್ನಿ ನೈಟ್ ಕುಲಗೆಡಿಸಲಿದೆ, ಇಂಥ ಕಾರ್ಯಕ್ರಮದಲ್ಲಿ ನಡೆಯುವ ಅರೆಬೆತ್ತಲೆ ನೃತ್ಯಗಳು ಯುವಕರ ಹಾದಿ ತಪ್ಪಿಸಲಿವೆ ಎಂಬುದು ಕನ್ನಡಪರ ಸಂಘಟನೆಗಳು ವಾದ.

   ಸನ್ನಿ ಚಿತ್ರ ಸುಟ್ಟು ಹಾಕಿ ಆಕ್ರೋಶ

   ಸನ್ನಿ ಚಿತ್ರ ಸುಟ್ಟು ಹಾಕಿ ಆಕ್ರೋಶ

   ಕರ್ನಾಟಕ ರಕ್ಷಣಾ ವೇದಿಕೆ ಕೂಡ ಪ್ರತಿಭಟನೆ ನಡೆಸಿ ಸನ್ನಿ ಲಿಯೋನ್ ಅವರ ಚಿತ್ರವನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಇನ್ಫೋಟೆಕ್ ಮತ್ತು ಬಯೋಟೆಕ್ ಕಂಪನಿಗಳಿಗೆ ಮಾತ್ರ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದು, ಇದನ್ನು ಕೂಡಲೆ ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಓದುಗರೆ, ಏನು ಹೇಳುತ್ತೀರಿ? ಕಾರ್ಯಕ್ರಮ ರದ್ದಾಗಬೇಕಾ? ಅಥವಾ ನಡೆಯಬೇಕಾ?

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Kannada organizations are protesting against Sunny Leone Night in Bengaluru on the eve of December 31. They say such programs will harm the culture of Bengaluru. Do you agree with it? Should the program be cancelled?

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more