ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಕಾರ್ಯಕ್ರಮದಲ್ಲಿ ಕನ್ನಡ ಏಕಿಲ್ಲ?; ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 30; ನಮ್ಮ ಮೆಟ್ರೋದ ಮೈಸೂರು ರಸ್ತೆ-ಕೆಂಗೇರಿ ಮಾರ್ಗಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಆದರೆ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಕನ್ನಡ ಕಾಣೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.

ಮೈಸೂರು ರಸ್ತೆ (ನಾಯಂಡಹಳ್ಳಿ) ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿ ಮುಂತಾದವರು ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಆದರೆ ವೇದಿಕೆಯಲ್ಲಿ ಕನ್ನಡ ಯಾಕಿಲ್ಲ? ಎಂಬುದು ಹಲವರ ಪ್ರಶ್ನೆಯಾಗಿತ್ತು.

ಹೊಸಕೋಟೆಗೆ ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಿ ಹೊಸಕೋಟೆಗೆ ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಿ

ಬಳಿಕ ಕೆಂಗೇರಿ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ವೇದಿಕೆಯಲ್ಲಿ ಕನ್ನಡ ಕಾಣೆಯಾಗಿತ್ತು. ಪ್ರಧಾನ ವೇದಿಕೆಯ ಹಿಂಭಾಗದ ಫೆಕ್ಸ್‌ನಲ್ಲಿ ಇಂಗ್ಲಿಶ್ ಬರಹಗಳು ಮಾತ್ರ ಇದ್ದವು. ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಕನ್ನಡವನ್ನು ಕಡೆಗಣಿಸಿದೆ ಎಂದು ಆರೋಪಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹಲವು ಜನರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರಶ್ನಿಸಿದ್ದರು. ಇದು ನಿಮ್ಮ ಕನ್ನಡ ಪ್ರೀತಿಯೇ ಎಂದು ಕೇಳಿದ್ದರು.

Breaking news; ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಉದ್ಘಾಟನೆBreaking news; ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಉದ್ಘಾಟನೆ

ಸೋಮವಾರ ಸರಣಿ ಟ್ವೀಟ್ ಮೂಲಕ ನಮ್ಮ ಮೆಟ್ರೋ ಈ ಆರೋಪಗಳಿಗೆ ಉತ್ತರ ನೀಡಿದೆ. 'ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಕ್ರಮ ವಹಿಸುತ್ತೇನೆ. ಈ ತಪ್ಪನ್ನು ಮನ್ನಿಸಬೇಕೆಂದು ಈ ಮೂಲಕ ಕೋರಲಾಗಿದೆ' ಎಂದು ಟ್ವೀಟ್ ಮೂಲಕ ಕನ್ನಡಿಗರಲ್ಲಿ ಮನವಿ ಮಾಡಲಾಗಿದೆ.

 ಕೆಂಗೇರಿ ಮೆಟ್ರೋ ಪ್ರಯಾಣಿಕರಿಗೆ ಪ್ರತಿ 15 ನಿಮಿಷಕ್ಕೊಂದರಂತೆ ಬಿಎಂಟಿಸಿ ಫೀಡರ್ ಬಸ್ ಸೇವೆ ಕೆಂಗೇರಿ ಮೆಟ್ರೋ ಪ್ರಯಾಣಿಕರಿಗೆ ಪ್ರತಿ 15 ನಿಮಿಷಕ್ಕೊಂದರಂತೆ ಬಿಎಂಟಿಸಿ ಫೀಡರ್ ಬಸ್ ಸೇವೆ

ಉದ್ಘಾಟನಾ ಸಮಾರಂಭ

ಮಾನ್ಯರೇ, ದಿನಾಂಕ:29.08.2021 ರಂದು ಮೆಟ್ರೋ ರೈಲು ಯೋಜನೆಯ ಹಂತ-2ರ ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗಿನ 7.5 ಕಿ.ಮೀ ವಿಸ್ತರಿಸಿದ ಮಾರ್ಗವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಮತ್ತು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಎಲ್ಲಾ ಫಲಕಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿಯೇ ಇದ್ದು ಎಂದು ನಮ್ಮ ಮೆಟ್ರೋ ಟ್ವೀಟ್ ಮಾಡಿದೆ.

ಮುಖ್ಯ ವೇದಿಕೆಯ ಫಲಕವು

'ಮುಖ್ಯ ವೇದಿಕೆಯ ಫಲಕವು ಮಾತ್ರ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಆಕ್ಷೇಪಣೆಗಳು ಮಾದ್ಯಮ ಮತ್ತು ಸಾಮಾಜಿಕ ಜಾಲಗಳಲ್ಲಿ ಬಂದಿರುತ್ತವೆ. ಈ ತಪ್ಪು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಇದರ ಸಂಪೂರ್ಣ ಹೊಣೆ ನನ್ನದೆ ಎಂದು, ತಪ್ಪಿಗೆ ವಿಷಾದಿಸುತ್ತಾ, ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಕ್ರಮ ವಹಿಸುತ್ತೇನೆ. ಈ ತಪ್ಪನ್ನು ಮನ್ನಿಸಬೇಕೆಂದು ಈ ಮೂಲಕ ಕೋರಲಾಗಿದೆ' ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

Recommended Video

ಬಹು ನಿರೀಕ್ಷಿತ ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಮಾರ್ಗ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
6 ಹೊಸ ನಿಲ್ದಾಣಗಳನ್ನು ಹೊಂದಿದೆ

6 ಹೊಸ ನಿಲ್ದಾಣಗಳನ್ನು ಹೊಂದಿದೆ

ಮೈಸೂರು ರಸ್ತೆ-ಕೆಂಗೇರಿ ಮಾರ್ಗ ವಿಸ್ತರಣೆ ಬಳಿಕ 6 ಹೊಸ ನಿಲ್ದಾಣಗಳು ಸೇರ್ಪಡೆಗೊಂಡಿವೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳು. 7.5 ಕಿ. ಮೀ. ಉದ್ದದ ಎಲಿವೇಟೆಡ್ ಮಾರ್ಗ ಇದಾಗಿದೆ. ಈ ಮಾರ್ಗದ ಮೂಲಕ ಪೂರ್ವ-ಪಶ್ಚಿಮ ಕಾರಿಡಾರ್ 23 ನಿಲ್ದಾಣಗಳೊಂದಿಗೆ 25.6 ಕಿ. ಮೀ. ಉದ್ದವಾಗುತ್ತದೆ. 2016ರ ಫೆಬ್ರವರಿಯಲ್ಲಿ ಆರಂಭವಾದ ಕಾಮಗಾರಿ 2021ರ ಆಗಸ್ಟ್‌ನಲ್ಲಿ ಪೂರ್ಣಗೊಂಡು ವಾಣಿಜ್ಯ ಸಂಚಾರ ಆರಂಭವಾಗಿದೆ.

ರೈಲು ಸಂಚಾರದ ಮಾಹಿತಿ

ರೈಲು ಸಂಚಾರದ ಮಾಹಿತಿ

ಭಾನುವಾರ ಉದ್ಘಾಟನೆಗೊಂಡ ಮೈಸೂರು ರಸ್ತೆ-ಕೆಂಗೇರಿ ಮಾರ್ಗ ಸೋಮವಾರದಿಂದ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಿದೆ. ಜನದಟ್ಟಣೆ ಸಮಯದಲ್ಲಿ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ವಿಭಾಗದಲ್ಲಿ 5 ನಿಮಿಷಕ್ಕೆ ಒಂದು ರೈಲು, ಕೆಂಗೇರಿ-ಬೈಯಪ್ಪನಹಳ್ಳಿ ವಿಭಾಗದಲ್ಲಿ 10 ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಲಿದೆ.

ಜನದಟ್ಟಣೆ ಇಲ್ಲದ ಸಮಯದಲ್ಲಿ ಕೆಂಗೇರಿ-ಬೈಯಪ್ಪನಹಳ್ಳಿ ವಿಭಾಗದಲ್ಲಿ 10 ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಲಿದೆ. ಭಾನುವಾರ ಮತ್ತು ಎಲ್ಲಾ ರಜೆ ದಿನಗಳಲ್ಲಿ ಕೆಂಗೇರಿ-ಬೈಯಪ್ಪನಹಳ್ಳಿ ವಿಭಾಗದಲ್ಲಿ 10 ನಿಮಿಷಕ್ಕೆ ಒಂದು ರೈಲು ಓಡಲಿದೆ.

English summary
Why Namma Metro not used Kannada in the inauguration function of Mysuru Road- Kengeri 7.5 Km purple line. In a tweet BMRCL clarification on the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X