ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನೇಕ ಗೆಳೆಯರ ಸಾಹಿತ್ಯ ಪತ್ರಿಕೆ 'ಸಂಕಥನ' ಅನಾವರಣ

By Prasad
|
Google Oneindia Kannada News

ಬೆಂಗಳೂರು, ಮೇ 17 : ಯುವ ಸೃಜನಶೀಲ ಸಾಹಿತ್ಯಾಸಕ್ತರ ಗುಂಪು 'ಅನೇಕ ಗೆಳೆಯರು' ಹೊರತರುತ್ತಿರುವ ಪ್ರಥಮ ಸಾಹಿತ್ಯ ತ್ರೈಮಾಸಿಕ 'ಸಂಕಥನ'. ಇದೇ ಭಾನುವಾರ, ಮೇ 17ರಂದು, ಬೆಂಗಳೂರಿನ ಮಲ್ಲತ್ತಹಳ್ಳಿಯ ಜ್ಞಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಅನಾವರಣಗೊಳ್ಳುತ್ತಿದೆ.

ಇದರ ರಾಜೇಂದ್ರ ಪ್ರಸಾದ್ ಸಂಪಾದಿಸುತ್ತಿದ್ದು, ಹಲವಾರು ಯುವ ಸೃಜನಶೀಲ ಲೇಖಕರು ಇದಕ್ಕೆ ಜೀವ ತುಂಬಿದ್ದಾರೆ. ಸುಬ್ಬು ಹೊಲೆಯಾರ್ ಅವರ ಅಧ್ಯಕ್ಷತೆಯಲ್ಲಿ, ಹಲವಾರು ಹಿರಿಯ ಸಾಹಿತಿಗಳು, ವಿಮರ್ಶಕರು, ಬರಹಗಾರರು, ಸ್ನೇಹಿತರ ಸಮ್ಮುಖದಲ್ಲಿ ವಿಶಿಷ್ಟವಾಗಿ ಲೋಕಾರ್ಪಣೆಗೊಳ್ಳುತ್ತಿದೆ.

ಸಮಯ : ಬೆಳಿಗ್ಗೆ 10.00ರಿಂದ ಮಧ್ಯಾಹ್ನ 12.30ರವರೆಗೆ, ಪದ್ಯ ಪಾರಾಯಣ ಮಧ್ಯಾಹ್ನ 12.30ರಿಂದ 2.00 ರವರೆಗೆ

ಸ್ಥಳ : ಕಲಾಗ್ರಾಮ , ಜ್ಞಾನಭಾರತಿ ಆವರಣ, ಮಲ್ಲತ್ತಹಳ್ಳಿ, ಬೆಂಗಳೂರು.

Kannada literary magazine Samkathana inauguration

ನಮ್ಮೊಂದಿಗೆ :
ಸಿ.ಎನ್ . ರಾಮಚಂದ್ರನ್, ಹಿರಿಯ ವಿಮರ್ಶಕರು
ಚಂದ್ರಶೇಖರ ಆಲೂರು, ಹಿರಿಯ ಬರಹಗಾರರು
ಪೂರ್ಣಿಮಾ ಆರ್. ಹಿರಿಯ ಪತ್ರಕರ್ತರು
ರಾಜೇಂದ್ರ ಪ್ರಸಾದ್, ಸಂಪಾದಕ (ಸಂಕಥನ)

ಜೊತೆಗೆ :
ದಿನೇಶ್ ಕುಮಾರ್ ಎಸ್.ಸಿ., ಶಂಕರ ಕೆಂಚನೂರು, ವಿಕ್ರಮ್ ಹತ್ವಾರ್, ದೀಪಾ ಗಿರೀಶ್, ದಯಾನಂದ ಟಿ. ಕೆ., ಮೋಹನ್ ಕೊಳ್ಳೇಗಾಲ, ಹುಲಿಕುಂಟೆ ಮೂರ್ತಿ, ಹರವು ಸ್ಪೂರ್ತಿ, ಶ್ರೀದೇವಿ ಕಳಸದ, ರಾಜಶೇಖರ ಬಂಡೆ, ರಘು ಅಪಾರ, ಮಹಮದ್ ಹುಸೇನ್, ಸಂಯುಕ್ತಾ ಪುಲಿಗಲ್, ಭರತ್ ಎಂ. ವಿ., ಮಂಜುನಾಥ್ ಎಸ್., ಚಿದಂಬರ್ ನರೇಂದ್ರ, ಹೃದಯ ಶಿವ, ಗೊರವಿ ಆಲ್ದೂರು

ಮತ್ತು ಜೊತೆಗೆ :
ಟಿ.ಎನ್. ಸೀತಾರಾಂ, ಪ್ರತಿಭಾ ನಂದಕುಮಾರ್, ವಿವೇಕ್ ಶಾನಭಾಗ್, ಆರತಿ ಎಚ್.ಎನ್., ಉಷಾ ಕಟ್ಟೆಮನೆ, ಎಂ.ಎಸ್. ರುದ್ರೇಶ್ವರಸ್ವಾಮಿ ಮತ್ತಷ್ಟು ಹಿರಿಯರು.. ಗೆಳೆಯರು

ಅನೇಕ ಗೆಳೆಯರು : 2013ನೇ ವರ್ಷದ ನಡುಭಾಗದಲ್ಲಿ ಹುಟ್ಟಿಕೊಂಡ ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಕಲಿಯುತ್ತಿರುವ, ದುಡಿಯುತ್ತಿರುವ ಗ್ರಾಮೀಣ ಸೃಜನಶೀಲ ಯುವ ಸಾಹಿತ್ಯಾಸಕ್ತರ ಸಮುದಾಯ. ಕಲೆ - ಸಾಹಿತ್ಯ - ಸಂಗೀತ - ಸಂಸ್ಕೃತಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ, ಸಂಕಥನ, ಕೃತಿ ಪ್ರಕಟಣೆ - ಪ್ರಸರಣ, ವಿಶೇಷವಾಗಿ ಗಾಂಧೀಯ ಚಿಂತನೆ.. ಕಳೆದುಹೋಗುತ್ತಿರುವ ನೆಲಮೂಲ ಸಂಸ್ಕೃತಿಯ ಕುರಿತು ಅರಿವು, ಅಧ್ಯಯನ ಇದರ ಮೂಲ ಭೂಮಿಕೆ.

ಆಧುನಿಕ ಜೀವನದ ಧಾವಂತಗಳಲ್ಲಿ ಹೊಸಪೀಳಿಗೆ ತನ್ನ ಬಹುಪರಂಪರೆಯ ನೆಲೆಗಳನ್ನು, ಅದರ ಮಾರ್ಗಗಳನ್ನು ಹತ್ತಾರು ಸೃಜನಶೀಲ ವಲಯಗಳಲ್ಲಿ ಕಂಡುಕೊಳುವುದಕ್ಕೆ ಪ್ರಯತ್ನಿಸುತ್ತಲೇ ಇದೆ ಮತ್ತು ಏಕಕಾಲದಲ್ಲಿ ಇನ್ನೊಂದು ಕಡೆ ಈ ಎಲ್ಲ ನೆಲೆಗಳ ಬಗ್ಗೆ ವಿಸ್ಮೃತಿಯೊಂದು ಆವರಿಸಿ ಪಾಶ್ಚಿಮಾತ್ಯ ಸ್ವರೂಪದ ''ಒಂದು ರಾಷ್ಟ್ರ, ಒಂದು ಸಂಸ್ಕೃತಿ'' ಎಂಬುವ ಅಪಾಯಕಾರಿ ಮಾದರಿಯೊಂದನ್ನು ಬೆನ್ನತ್ತಿದೆ. ಹೀಗಿರುವಾಗ 'ವಿವಿಧತೆಯಲ್ಲಿ ಏಕತೆ'ಯನ್ನು, ಉಪಖಂಡವು ರೂಪಿಸಿಕೊಂಡ ಸಂವಿಧಾನವನ್ನು ನಂಬಿದ ಸೃಜನಶೀಲ ಯುವಮನಸ್ಸುಗಳ ಸಮೂಹ ಇದಾಗಿದೆ.

ಈ ಪತ್ರಿಕೆಯ ಪರಿಕಲ್ಪನೆ ಮಂಡ್ಯ ವಾಸಿಯಾಗಿರುವ ರಾಜೇಂದ್ರ ಪ್ರಸಾದ್ ಅವರದ್ದು. ರಾಜೇಂದ್ರ ಓದಿದ್ದು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಎಂಕಾಂ. ಕಳೆದ 4-5 ವರ್ಷಗಳಿಂದ ಈ ರೀತಿಯ ಒಂದು ಪತ್ರಿಕೆ ಮಾಡುವ ಯೋಜನೆ ಅವರದಾಗಿತ್ತು. 'ಅನೇಕ ಗೆಳೆಯರು' ಎಂಬ ಒಂದು ಸಮೂಹವನ್ನು ಫೇಸ್ಬುಕ್ ಮುಖಾಂತರ ಸೃಷ್ಟಿಸಿ ಸಾಹಿತ್ಯದ ಪುಟ್ಟ ಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅದೇ ಸಮೂಹದ ಬಲದಿಂದ ಈಗ 'ಸಂಕಥನ' ಸಾಹಿತ್ಯ ಪತ್ರಿಕೆ ಹೊರಬರುತ್ತಿದೆ.

ರಾಜೇಂದ್ರ ಅವರ ಜೊತೆಗೆ
* ಪ್ರವರ ಕೊಟ್ಟೂರು (MCA ಓದು, ಕಾಲೇಜಿನಲ್ಲಿ ಉಪನ್ಯಾಸಕ)
* ಶರತ್ ಚಕ್ರವರ್ತಿ (ಸುದ್ದಿ ಮಾಧ್ಯಮದಲ್ಲಿ ಕಾರ್ಯಕ್ರಮ ನಿರ್ಮಾಪಕ)
* ಹರವು ಸ್ಪೂರ್ತಿ (ಪತ್ರಿಕೋದ್ಯಮ ಓದು, ಸುದ್ದಿ ಚಾನಲ್ ನಲ್ಲಿ ಕೆಲಸ)
* ಸಂತೋಷ್ ಕುಮಾರ್ (ಸಾಫ್ಟ್ ವೇರ್ ಇಂಜಿನಿಯರ್)
* ನಿತೇಶ್ ಕುಮಾರ್ (ಸಾಫ್ಟ್ ವೇರ್ ಇಂಜಿನಿಯರ್)
* ಭರತ್ ಎಂ.ವಿ. (ಸಾಫ್ಟ್ ವೇರ್ ಇಂಜಿನಿಯರ್)
* ಸತೀಶ್ ಬೆಂಗಳೂರು (ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ )

ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಸಾಹಿತ್ಯ ಪತ್ರಿಕೆಗಳು ಬಂದಿವೆ ಹೋಗಿವೆ ಮತ್ತು ಇಂದಿಗೂ ಬರುತ್ತಲಿವೆ. ಅಡಿಗರ 'ಸಾಕ್ಷಿ', ಯು.ಆರ್. ಅನಂತಮೂರ್ತಿಯವರ 'ಋಜುವಾತು', ಚಂಪಾ ಅವರ 'ಸಂಕ್ರಮಣ', ವಿವೇಕ್ ಶಾನಭಾಗರ 'ದೇಶಕಾಲ' ಇನ್ನೂ ಬಹಳಷ್ಟೂ ಇವೆ. ಆದರೆ ಇವೆಲ್ಲವೂ ಸಾಹಿತ್ಯ ಕ್ಷೇತ್ರದ ಹೆಸರುಳ್ಳ ಸಾಹಿತಿಗಳಿಂದ ಆರಂಭಗೊಂಡ ಪತ್ರಿಕೆಗಳು. ಹಾಗಾಗಿ ಅವುಗಳ ಬೆಳವಣಿಗೆ ಚೆನ್ನಾಗಿಯೇ ಇತ್ತು. ಕಾಲಕ್ರಮೇಣ ಸ್ಥಗಿತವೂ ಉಂಟಾಯಿತು.

ಪ್ರಪಂಚದ ಬೇರೆ ಬೇರೆ ಭಾಷೆಗಳಲ್ಲಿ ಬರುತ್ತಿರುವ ಸಾಹಿತ್ಯ ಪತ್ರಿಕೆಗಳನ್ನು ನೋಡಿದ್ರೆ ಕನ್ನಡ ಭಾಷೆಯಲ್ಲಿ ಇವತ್ತಿನ ಮಟ್ಟಿಗೆ ಅಂತಹ ಒಳ್ಳೆಯ ಸಾಹಿತ್ಯ ಪತ್ರಿಕೆ ಇಲ್ಲ. ತುಂಬಾ ಚೆನ್ನಾಗಿಯೇ ಬರುತ್ತಿರುವ ಸಂಚಯ ಮತ್ತು ಸಂಕ್ರಮಣ ಪತ್ರಿಕೆಗಳು ಕೂಡ ಎಲ್ಲರಿಗೂ ಮುಟ್ಟುತ್ತಿಲ್ಲ... ಹೊಸ ಪೀಳಿಗೆಯನ್ನು ಸೆಳೆದುಕೊಳ್ಳುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ನಮ್ಮ ಪತ್ರಿಕೆ ಕಿರಿಯ ಬರಹಗಾರರಿಂದ ಶುರುವಾಗುತ್ತಿದೆ.

ನಿಮ್ಮ ಗಮನಕ್ಕೆ

* ಪತ್ರಿಕೆ ಬರಿಯ ಕಾವ್ಯ, ಕಥನ, ಟಿಪ್ಪಣಿಗಳಿಗೆ ಸೀಮಿತವಾಗದೇ ಈ ಕಾಲಘಟ್ಟದ ಸಾಹಿತ್ಯದ ಹಲವು ಮೂಲನೆಲೆಗಳಿಂದ ಬರಹಗಳನ್ನು ತರುತ್ತಿದೆ. ಇತಿಹಾಸ, ತತ್ವಜ್ಞಾನ, ವಿಜ್ಞಾನ, ತಂತ್ರಜ್ಞಾನಗಳನ್ನು ಜೊತೆಗಿರಿಸಿಕೊಂಡಿದ್ದೇವೆ.
* ಸಂಕಥನ - ಸಾಹಿತ್ಯ ಪತ್ರಿಕೆಯು ಯುಗಾದಿಯಿಂದ ಮೊದಲುಗೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಹೊರಬರಲಿದೆ.
* ಚಂದಾದಾರರಿಗೆ ನೇರವಾಗಿ ಪತ್ರಿಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಹೊರಗೆ ಎಲ್ಲೂ ಪತ್ರಿಕೆ ಲಭ್ಯವಿಲ್ಲ.
* ಪತ್ರಿಕೆಯ ವಾರ್ಷಿಕ ಚಂದಾ ರೂ. 250 ಇದೆ. ಅದನ್ನು ನೇರವಾಗಿ Onlineನಲ್ಲಿ direct pay ಮಾಡಬಹುದುದಾಗಿದೆ.

English summary
Aneka Gelayaru, a group of young and enthusiastic writers are bringing out quarterly Kannada literary magazine 'Samkathana' on 17th May at Kalagrama, Jnanabharathi, Mallattahalli, Bengaluru. The magazine is edited by Rajendra Prasad, Kannada poet and writer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X