ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಸಂತ್ ಶೆಟ್ಟಿ ಅವರ 'ಕನ್ನಡ ಜಗತ್ತು' ಕೃತಿ ಬಿಡುಗಡೆಗೆ ಆಹ್ವಾನ

By Mahesh
|
Google Oneindia Kannada News

ಬೆಂಗಳೂರು, ಡಿ.11: ಜಾಗತೀಕರಣ ಕನ್ನಡದ ಶತ್ರುವೇ? ಕನ್ನಡಿಗರ ಏಳಿಗೆಯಲ್ಲಿ ಕನ್ನಡದ ಪಾತ್ರವೇನು? ಕನ್ನಡಿಗರು ಪ್ರಪಂಚದ ಇತರೆ ನುಡಿ ಜನಾಂಗಗಳಿಂದ ಕಲಿಯಬಹುದಾದದ್ದೇನು? ಈ ರೀತಿಯ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಕೃತಿಯನ್ನು ಅಂಕಣಕಾರ ವಸಂತ್ ಶೆಟ್ಟಿ ಅವರು ಹೊರ ತಂದಿದ್ದಾರೆ.

ಜಾಗತೀಕರಣ, ತಂತ್ರಜ್ಞಾನದ ಬದಲಾವಣೆ, ಕಳೆದ ನೂರು ವರ್ಷಗಳ ಜಿಯೋ ಪಾಲಿಟಿಕಲ್ ಪಲ್ಲಟಗಳ ನಡುವೆ ಕನ್ನಡ ತನ್ನ ಇರುವಿಕೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಬಗ್ಗೆ ಪ್ರಪಂಚದ ಇತರೆ ನುಡಿಸಮುದಾಯಗಳಿಂದ ಕಲಿಯುವುದು ಸಾಕಷ್ಟಿದೆ.

Kannada Jagattu Kannada book release Vasanth Shetty

ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಕನ್ನಡದ ಮುಂದೆ ಎದುರಾಗಿರುವ ಸವಾಲುಗಳ ಸ್ವರೂಪ ಕಳೆದ ಎರಡು ಸಾವಿರ ವರ್ಷದಲ್ಲಿ ಕಂಡ ಸವಾಲುಗಳಿಗಿಂತ ಬಹಳ ಬೇರೆಯೇ ಸ್ವರೂಪದ್ದಾಗಿರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಯೋಚನೆ ಮಾಡುತ್ತಿರುವ ರೀತಿಯೂ ಬದಲಾಗಬೇಕಿದೆ.

ಕನ್ನಡ ಜಾಗತೀಕರಣವನ್ನು ಎದುರಿಸುವುದು ಹೇಗೆ? ಪ್ರಪಂಚದ ಇತರೆ ಯಶಸ್ವಿ ಭಾಷಾ ಸಮುದಾಯಗಳಿಂದ ಕನ್ನಡಿಗರು ಕಲಿಯಬೇಕಾದದ್ದು ಏನು? ಕನ್ನಡಿಗರ ಏಳಿಗೆಯಲ್ಲಿ ಕನ್ನಡದ ಮಹತ್ವವೇನು ಅನ್ನುವ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಉದಯವಾಣಿ ಪತ್ರಿಕೆಯಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ 'ಕನ್ನಡ ಜಗತ್ತು" ಅಂಕಣ ಮಾಡಿತ್ತು. ಈ ಅಂಕಣ ಬರಹಗಳ ಸಂಕಲನವನ್ನು ಪುಸ್ತಕದ ರೂಪದಲ್ಲಿ ಬನವಾಸಿ ಬಳಗ ಪ್ರಕಾಶನ ಹೊರ ತರುತ್ತಿದೆ.

ಶನಿವಾರ ಡಿಸೆಂಬರ್ 12, ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ನಡೆಯಲಿದೆ. ಉದಯವಾಣಿ ಪತ್ರಿಕೆಯ ಸಮೂಹ ಸಂಪಾದಕರಾದ ರವಿ ಹೆಗಡೆ, ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮ ಸಲಹೆಗಾರರಾದ ರಾಮಕೃಷ್ಣ ಉಪಾಧ್ಯ ಹಾಗೂ ಶಾಸಕರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ವೈ.ಎಸ್.ವಿ ದತ್ತಾ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ತಪ್ಪದೇ ಪಾಲ್ಗೊಳ್ಳಿ ಎಂದು ವಸಂತ್ ಶೆಟ್ಟಿ ಅವರು ಎಲ್ಲರನ್ನು ಆಹ್ವಾನಿಸಿದ್ದಾರೆ.ಹೆಚ್ಚಿನ ವಿವರಗಳಿಗೆ ಫೇಸ್ ಬುಕ್ ಇವೆಂಟ್ ಪುಟವನ್ನು ನೋಡಿ. (ಒನ್ ಇಂಡಿಯಾ ಸುದ್ದಿ)

English summary
Kannada Jagattu- a Book by Vasanth Shetty scheduled to release on December 12 at The Indian Institute of World Culture, BP Wadia road, Basavanagudi, Bengaluru. This book is a collection of column articles written by Vasanth Shetty for Udayavani Kannada daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X