ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳೇ ಮುಖಕ್ಕೆ ಬಣ್ಣ ಹಚ್ಚಿಕೊಳ್ಳಲು ಸಿದ್ಧರಾಗಿ

By Prasad
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 29 : ಹಳೆಯ ವರ್ಷ ತನ್ನ ಪಯಣವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕರ್ನಾಟಕದಾದ್ಯಂತ ಕಾಲೇಜುಗಳಲ್ಲಿ ಹಲವಾರು ಚಟುವಟಿಕೆಗಳು ಗರಿಗೆದರುತ್ತವೆ.

ಕಾಲೇಜು ವಾರ್ಷಿಕೋತ್ಸವ, ಅಂತರ್ ಕಾಲೇಜು ರಂಗೋತ್ಸವ, ವಿಜ್ಞಾನ ಪ್ರದರ್ಶನಗಳು, ವಿದ್ಯಾರ್ಥಿಗಳ ಗೆಟ್ ಟುಗೆದರ್, ಆಟೋಗ್ರಾಫ್ ಬರೆಯುವುದು ಇತ್ಯಾದಿ ಇತ್ಯಾದಿ. ಅಧ್ಯಯನದಲ್ಲಿ ಮುಳುಗುವ ಮೊದಲು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಂದಿಷ್ಟು ಪಠ್ಯೇತರ ಚಟುವಟಿಕೆಗಳು.

Kannada drama festival in Shivamogga district

ಶಿವಮೊಗ್ಗದ ರಂಗಾಯಣವು ರಂಗಾಸಕ್ತ ವಿದ್ಯಾರ್ಥಿಗಳಿಗಾಗಿ ತನ್ನ ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ಕಾಲೇಜು ರಂಗೋತ್ಸವವನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳೇ ಸಿದ್ಧರಾಗಿ, ಹಳೆಯದಾದ ಮತ್ತು ಹಳಸಲು ನಾಟಕಗಳಿಗೆ ಜೋತುಬೀಳಬೇಡಿ. ಈಗಿನ ವಿದ್ಯಮಾನಕ್ಕೆ ಒಗ್ಗುವಂಥ, ಹೊಸತನದ ನಾಟಕಗಳನ್ನು ಆಯ್ದುಕೊಳ್ಳಿ.

ಈ ಜಿಲ್ಲೆಗಳ ಎಲ್ಲ ತಾಲ್ಲೂಕುಗಳ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕೆನ್ನುವುದು ರಂಗಾಯಣದ ಬಯಕೆಯಾಗಿದೆ.

ಇದೇ ಡಿಸೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈಗಾಗಲೇ 9 ಜಿಲ್ಲೆಗಳಲ್ಲಿ ಜಿಲ್ಲಾ ರಂಗ ಸಂಚಾಲಕರನ್ನು ನೇಮಿಸಲಾಗಿದೆ. ಅವರ ಹೆಸರು ಮತ್ತು ಮೊಬೈಲ್ ಸಂಖ್ಯೆ ಕೆಳಗಿನಂತಿವೆ.

ಬೆಂಗಳೂರು ನಗರ - ಫೈರೋಜ್ 99454 67572
ಬೆಂಗಳೂರು ಗ್ರಾಮಾಂತರ - ಶಿವಮ್ಮ 91085 52569
ರಾಮನಗರ - ನರೇಶ್ ಮಯ್ಯ 96639 70250
ಕೋಲಾರ - ಕೃಷ್ಣ ರೆಡ್ಡಿ 78999 42601
ಚಿಕ್ಕಬಳ್ಳಾಪುರ - ಗಾನ ಅಶ್ವಥ್ 97407 61963
ತುಮಕೂರು - ಗೋಮಾರದಹಳ್ಳಿ ಮಂಜುನಾಥ್ ಸಿರಾ 98450 30614
ದಾವಣಗೆರೆ - ನಾಗರಾಜ್ 89715 62981
ಶಿವಮೊಗ್ಗ - ಕೊಟ್ರಪ್ಪ ಜಿ ಹಿರೇಮಾಗಡಿ 98445 69645
ಚಿತ್ರದುರ್ಗ - ಕೆ.ಪಿ.ಎಮ್ ಗಣೇಶಯ್ಯ 94486 64878

English summary
Rangayana Shivamogga has organized inter college Kannada drama and folk dance festival. Interested students can apply before December 30. Just before immersing into the study just enjoy the extra curricular activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X