ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂನಲ್ಲಿ ಕನ್ನಡ ಡಿಂಡಿಮ: ಗ್ರಾಹಕರ ಮನವಿಗೆ ಸಿಕ್ಕ ಜಯ

|
Google Oneindia Kannada News

ಬೆಂಗಳೂರು, ಮಾರ್ಚ್ 3: ಕರ್ನಾಟಕದಲ್ಲೇ ಸರಿಯಾಗಿ ಕನ್ನಡ ಭಾಷೆಯನ್ನು ಬಳಸುತ್ತಿಲ್ಲ ಎಂಬ ಆರೋಪ ಇದೆ. ಕೆಲವು ಸರ್ಕಾರಿ ಕಚೇರಿಯಲ್ಲೂ ಕನ್ನಡ ಭಾಷೆ ಕಡೆಗಣನೆ ಮಾಡಲಾಗುತ್ತಿದೆ ಎಂಬ ಬೇಸರವನ್ನು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡಾಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಇದೀಗ, ಬೆಂಗಳೂರಿನ ಬೆಸ್ಕಾಂ ಸಂಸ್ಥೆಯಲ್ಲಿ ಕನ್ನಡವನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಗ್ರಾಹಕರೊಬ್ಬರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಅಪ್ಪಟ ಕನ್ನಡ ಸಂಸ್ಥೆಯಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಬಳುಸುತ್ತಿಲ್ಲ ಎಂದು ದೂರಿದ್ದಾರೆ.

ನನ್ನ ರಕ್ತದ ಕಣಕಣದಲ್ಲೂ ಕನ್ನಡ ಇದೆ: ಸಚಿವ ನಾರಾಯಣಗೌಡನನ್ನ ರಕ್ತದ ಕಣಕಣದಲ್ಲೂ ಕನ್ನಡ ಇದೆ: ಸಚಿವ ನಾರಾಯಣಗೌಡ

ಈ ಕುರಿತು ಬೆಂಗಳೂರಿನ ವಿವೇಕ್ ಶಂಕರ್ ಎಂಬ ವ್ಯಕ್ತಿ ಫೆಬ್ರವರಿ 14 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಧಿಕಾರ ಬೆಸ್ಕಾಂಗೆ ನೋಟಿಸ್ ನೀಡಿದೆ.

Kannada Development Authority Gave Notice To Bescom

ವಿವೇಕ್ ಶಂಕರ್ ಅವರ ದೂರಿಗೆ ಉತ್ತರ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ ಎಸ್ ನಾಗಾಭರಣ ''ಬೆಸ್ಕಾಂ ಸಂಸ್ಥೆ ಅಪ್ಪಟ ಕನ್ನಡ ಸಂಸ್ಥೆ. ಸಂಸ್ಥೆಯ ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದಲೇ ಸಂಬಂಧಪಟ್ಟವರಿಗೆ ಕನ್ನಡವನ್ನು ಸಾಮಾಜಿಕ ಜಾಲತಾಣವೂ ಸೇರಿದಂತೆ ಆಡಳಿತ ಎಲ್ಲಾ ಹಂತದಲ್ಲೂ ಪ್ರಧಾನವಾಗಿ ಬಳಸುವಂತೆ ಸೂಚಿಸಲು ತಿಳಿಸಿದೆ'' ಎಂದು ಆದೇಶ ನೀಡಿದ್ದಾರೆ.

'ಪ್ರಭುತ್ವದಿಂದ ಪ್ರಜಾಸತ್ತಾತ್ಮಕ ಮೌಲ್ಯದ ಮೇಲೆ ದಾಳಿ ನಡೆಯುತ್ತಿದೆ''ಪ್ರಭುತ್ವದಿಂದ ಪ್ರಜಾಸತ್ತಾತ್ಮಕ ಮೌಲ್ಯದ ಮೇಲೆ ದಾಳಿ ನಡೆಯುತ್ತಿದೆ'

ಈ ಮೂಲಕ ಬೆಸ್ಕಾಂನಲ್ಲಿ ಕನ್ನಡ ಭಾಷೆ ಕಡೆಗಣನೆ ಆಗುತ್ತಿದೆ ಎಂಬುದಕ್ಕೆ ಒಂದು ಹಂತದ ಪರಿಹಾರ ಮತ್ತು ಸಮಾಧಾನ ಸಿಕ್ಕಿದೆ. ಇನ್ನು ಮುಂದಾದರೂ ಬೆಸ್ಕಾಂ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆ ಡಿಂಡಿಮ ಬಾರಿಸುತ್ತಾ ಕಾದುನೋಡಬೇಕಿದೆ.

English summary
One of the customer has give complaint to kannada development authority to use more kannada language in bescom social media platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X