ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಸಲೇಖ ಮುನ್ನುಡಿ ಪಡೆದ ಲಕ್ಷ್ಮಿಕಾಂತರ 'C++ ಗೌರಮ್ಮ'

By Mahesh
|
Google Oneindia Kannada News

ಬೆಂಗಳೂರು, ನ.13: ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆ ಸ್ಥಾಪಿಸುವ ಮೂಲಕ ಸಾಫ್ಟ್ ವೇರ್ ವೃತ್ತಿ ತೊರೆದು ಕನ್ನಡ ಪುಸ್ತಕ ಪ್ರಕಾಶಕರ ಸಾಲಿಗೆ ಸೇರಿದ ಲಕ್ಷ್ಮಿಕಾಂತ್ ಅವರು ಈಗ ಸಾಹಿತಿಯಾಗಿ ಹೊರ ಹೊಮ್ಮಿದ್ದಾರೆ.

ಟೋಟಲ್ ಕನ್ನಡ.ಕಾಂ ಮೂಲಕ ಕನ್ನಡ ಪುಸ್ತಕ ಮಾರಾಟ, ಪ್ರಕಟಣೆ, ಕನ್ನಡ ಅಪರೂಪದ ಚಿತ್ರಗಳ ಡಿವಿಡಿ ಹೊರತರುವ ಕಾರ್ಯಗಳ ನಡುವೆ ಹನಿಗವನಗಳು ಹಾಗೂ ದೊಡ್ಡ ಕವನಗಳನ್ನೊಳಗೊಂಡ ಪುಸ್ತಕವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದಾರೆ. C++ ಗೌರಮ್ಮ ಹೆಸರಿನ ಕೃತಿಗೆ ಸಂಗೀತ ಬ್ರಹ್ಮ ಹಂಸಲೇಖ ಬರೆದ ಮುನ್ನುಡಿ ಇಂತಿದೆ:

ಬೆಂಗಳೂರಿನಲ್ಲಿ ಒಂದು ಸೈಟು ಕೊಂಡು ಸ್ವಂತ ಮನೆ ಕಟ್ಟಿಕೊಳ್ಳಲು ಕನಿಷ್ಟ 30 ವರ್ಷ ದುಡಿಯಬೇಕು, ಉಳಿಯಬೇಕು, ಉಳಿಸಬೇಕು; ಅದರಲ್ಲೂ ಸನ್ಮಾರ್ಗದಲ್ಲಿ ಗಳಿಸಬೇಕೆಂದರೆ ಬಹಳ ಹೆಣಗಬೇಕು. 30-40 ಅಥವಾ 40-60 ರ ಒಂದು ಸ್ವಂತ ಸೈಟು ಮನೆ ನಮ್ಮದೂಂತ ಹೇಳ್ಕೊಳ್ಳೋದಕ್ಕೆ ಇಷ್ಟು ಶ್ರಮ ಇರೋವಾಗ.....

1,91,791 ಚದರ ಕಿ.ಮೀ ವಿಸ್ತೀರ್ಣದ ಕರ್ನಾಟಕವೆಂಬ ಸೈಟು, ಇಲ್ಲಿನ ಜಲ ಖನಿಜ ನಿಸರ್ಗ ಸಂಪತ್ತು, ಇತಿಹಾಸ ಪರಂಪರೆ ಸಂಸ್ಕೃತಿಯ ಹಿರಿಮೆ ಗರಿಮೆಗಳೆಲ್ಲಾ ನಮ್ಮದೂ ಅಂತ ಹೇಳಿಕೊಳ್ಳುತ್ತೇವಲ್ಲ ನಾವು.....

ಈ ಸ್ವಂತಿಕೆಯ ಸಾಫಲ್ಯದ ಹಿಂದಿನ ಶ್ರಮ, ತಪಸ್ಸು, ಎಷ್ಟಿರಬಹುದು.....

ಕಂಪ್ಯೂಟರ್ ಇಂಜಿನಿಯರೊಬ್ಬ ಅಮೆರಿಕದಲ್ಲಿ 8 ವರ್ಷ ಇದ್ದು, ಎಲ್ಲಾ ಬಿಟ್ಟು ಬಂದು ‘ಟೋಟಲ್ ಕನ್ನಡ' ಅನ್ನೊ ಒಂದು ಮಳಿಗೆ ಮಾಡಿದ್ದಾನೇ ಅಂದ್ರೆ ‘ಕನ್ನಡದಲ್ಲಿ ಬದುಕಿದೆ' ಅಂತ ತಾನೇ ಅರ್ಥ !

ಕನ್ನಡದ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಹಳ್ಳಿ ಹಳ್ಳಿ ಸುತ್ತಿ ಕನ್ನಡವನ್ನು ಓದುವ ಹುಚ್ಚನ್ನು ಹಬ್ಬಿಸಿದವರು ಹುಯಿಲಗೊಳ ನಾರಾಯಣರಾಯರು.
ಕನ್ನಡದ ಹುಚ್ಚನ್ನು ಹಬ್ಬಿಸಿದವರ ಪರಂಪರೆ ಕರ್ನಾಟಕವೆಂಬ ಏಕೀಕರಣದ ಚರಿತ್ರೆಯಲ್ಲಿ ಲಕ್ಷ ಹೆಸರುಗಳಿಗೂ ಹೆಚ್ಚಿದೆ.

‘ಟೋಟಲ್ ಕನ್ನಡ' ದ ಅಂಗಡಿ ಮಾಲಿಕನಿಗೂ ಈ ಪರಂಪರೆಯಲ್ಲಿ ಹೆಸರು ದಕ್ಕಿಸಿಕೊಳ್ಳುವ ಅದೃಷ್ಟವೊದಗಿದೆ ಎನ್ನುವುದೇ ಕನ್ನಡದ ಭಾಗ್ಯ, ಕವಿಯ ಪುಣ್ಯ.

‘ಕಾಲವಿ' ತನ್ನ ಬದುಕಿನ ಎಲ್ಲ ಘಳಿಗೆಗಳನ್ನು ಕನ್ನಡದ ಮೂಲಕವೇ ಸವಿಯಲು ಅಪೇಕ್ಷಿಸುತ್ತದೆ. ಮುಂದೆ ಓದಿ...

ಕನ್ನಡದ ಭಾಗ್ಯ, ಕವಿಯ ಪುಣ್ಯ

ಕನ್ನಡದ ಭಾಗ್ಯ, ಕವಿಯ ಪುಣ್ಯ

ತಾನು ಬರೆದ ಕವನಗಳನ್ನು ಪತ್ರಿಕೆಗಳು ಪ್ರಕಟಿಸದೇ ಹೋದಾಗ, ಚಿಂತೆ ಮಾಡದೆ, ದಿನಕ್ಕೊಂದು ಕವನದಂತೆ, ತನ್ನ ಅಂಗಡಿಯ ಮುಂದೆ ಫಲಕದಲ್ಲಿ ಬರೆದು ಬಿತ್ತರಿಸಿದ ಪುಣ್ಯಾತ್ಮ ಈ‘ಕಾಲವಿ'. ಕನ್ನಡ ಈತನನ್ನು ಕಾಪಾಡದೇ ಬಿಟ್ಟೀತೇ ! ಪ್ರಾಸಗಳ ಮೇಲೆ ವಿಪರೀತ ಏಕಾಗ್ರತೆ ಈತನ ಕವನಗಳಲ್ಲಿನ ದೋಷ. ವಸ್ತುವಲಯ ವಿಸ್ತಾರವಾಗಿದೆ. ಅದು ಈತನ ವಿಶಾಲ ಗುಣ.

ಪ್ರೀತಿಸುವಾಗ ನವ್ಯ; ಮದುವೆಯಾದರೆ ಬಂಡಾಯ; ಇದೇ ಬಾಳ ಸಾಹಿತ್ಯದ ಮಜಾ ಮಜಲು. ಇದು ‘ಕಾಲವಿ' ಬರೆದ ‘ಕವನದ' ಸಂಕ್ಷಿಪ್ತ ರೂಪ.

ಹೃದಯ ನಿರಾಳ

ಹೃದಯ ನಿರಾಳ

‘ಕಾಲವಿ' ಯ ಎಲ್ಲಾ ಕವನಗಳನ್ನು ನಮ್ಮ ದೇಸಿ ಕಾಲೇಜಿನ ವಿದ್ಯಾರ್ಥಿಗಳು ವಾಚಿಸಿ, ಚರ್ಚಿಸಿ, ಹೊಗಳಿ, ವಿಮರ್ಶಿಸಿ, ಕೆಲವನ್ನು ಅವರುಗಳೇ ಪರಿಷ್ಕರಿಸಿ, ನನ್ನೆದುರು ಓದಿದಾಗ, ‘ಕಾಲವಿ' ಯ ವಿಸ್ತಾರ ವಸ್ತುವಲಯ, ಕನ್ನಡದ ನವೀಕರಣ, ಚಿಂತನೆ, ಪ್ರಾಸಾಂಬರ, ಕನ್ನಡಕ್ಕೆ ಭಯವಿಲ್ಲ ಎಂಬ ಭರವಸೆ ಇತ್ಯಾದಿಗಳು ಹುಟ್ಟಿ ಹೃದಯ ನಿರಾಳವಾಯಿತು.

‘ಕಾಲವಿ’ ಯ ಒಂದು ಕವನ ನೋಡಿ

‘ಕಾಲವಿ’ ಯ ಒಂದು ಕವನ ನೋಡಿ

ಹರಿದ ಅರಿವೆಯಾ ತೊಟ್ಟವನನ್ನು
ನೋಡಿ ಬೀದಿ ನಾಯಿಯೂ ಸಹ
ಬೊಗಳುವುದು;
ಬಡವ-ಬಲ್ಲಿದ ಎಂಬುದು
ನಾಯಿಗು ಸಹ ಹೇಗೆ
ತಿಳಿಯುವುದು !

ಕರ್ನಾಟಕವೆಲ್ಲಾ ಟೋಟಲ್ ಕನ್ನಡವಾಗಲಿ

ಒ ಐove - ಇ ನಿಂದ - ಹಂಸಲೇಖ.

ಕಾಲವಿ ಲಾಸ್ಟ್ ಪಂಚ್

ಕಾಲವಿ ಲಾಸ್ಟ್ ಪಂಚ್

ಹಿರಿ ಮಗ Hardware
ಕಿರಿ ಮಗ Software
ಅಪ್ಪ ಅಮ್ಮ No Where

English summary
C++ Gowramma a unique book by Software professional turned Book publisher and now a writer Lakshmikanth. Totalkannada book store fame Lakshmikanth's C++ Gowramma book has Small Songs & Long Songs forward by famous musician Hamsalekha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X