ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲಾ ಚಿತ್ರ ಬಿಡುಗಡೆ ವಿರೋಧಿಸಿ ಒರಾಯನ್‌ ಮಾಲ್ ಎದುರು ಪ್ರತಿಭಟನೆ

By Nayana
|
Google Oneindia Kannada News

ಬೆಂಗಳೂರು, ಜೂನ್ 6: ಕಳೆದ ಒಂದು ವಾರದಿಂದ ಕಾಲಾ ಸಿನೆಮಾ ಬಿಡುಗಡೆ ಕುರಿತಾಗಿ ರಾಜ್ಯಾದ್ಯಂತ ತೀವ್ರ
ವಿರೋಧ ವ್ಯಕ್ತವಾಗುತ್ತಿದೆ. ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಒರಾಯನ್ ಮಾಲ್ ಎದುರು ಪ್ರೊಟೆಸ್ಟ್ ಮಾಡುತ್ತಿದ್ದಾರೆ.

ನಮ್ಮ ಹೋರಾಟ ರಜನಿಕಾಂತ್ ಅವರ ವಿರುದ್ಧವಾಗಿದೆ. ನಾಗರಹಾವು ಚಿತ್ರ ತಮಿಳುನಲ್ಲಿ ಡಬ್ ಆದಾಗ ಅದನ್ನು ಮೂಲೆಗುಂಪು ಮಾಡಿದ್ದರು. ತಮಿಳುನಾಡಿನಲ್ಲಿ ಕನ್ನಡ ಚಿತ್ರಕ್ಕೆ ಗೌರವ ಕೊಡಲಿಲ್ಲ.

ಕಾವೇರಿಗೂ 'ಕಾಲಾ' ಸಿನಿಮಾಕ್ಕೂ ಏನು ಸಂಬಂಧ?: ಪ್ರಕಾಶ್ ರೈಕಾವೇರಿಗೂ 'ಕಾಲಾ' ಸಿನಿಮಾಕ್ಕೂ ಏನು ಸಂಬಂಧ?: ಪ್ರಕಾಶ್ ರೈ

ಈಗ ಕಾವೇರಿ ವಿಚಾರವನ್ನು ತಮ್ಮ ಹಕ್ಕು ಎನ್ನುತ್ತಿದ್ದಾರೆ, ಕೋರ್ಟ್ ಮನವಿ ಮಾಡಿದರೂ ನಮಗೆ ಕನ್ನಡ ಮುಖ್ಯ, ಕೋರ್ಟ್ ಹೋರಾಡಬೇಡಿ ಎಂದು ಹೇಳಿಲ್ಲ ಮುಖ್ಯಮಂತ್ರಿಯವರು ನಮ್ಮ ಜತೆ ಇದ್ದಾರೆ ಎಂದು ಪ್ರವೀಣ್‌ ಶೆಟ್ಟಿ ತಿಳಿಸಿದ್ದಾರೆ.

Kannada activists protest against Kaala film release in the state

ರಜನಿಕಾಂತ್ ಕನ್ನಡ ವಿರೋಧಿ, ಕಾವೇರಿ ವಿಚಾರದಲ್ಲಿ ಕರ್ನಾಟಕ ವಿರೋಧಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಬಿಡಬಾರದೆಂದು ಆಗ್ರಹಿಸಿದ್ದಾರೆ.

ರಜನೀಕಾಂತ್ ವಿರುದ್ಧ ಘೋಷಣೆ ಕೂಗುವ ಮೂಲಕ ಕಾಲಾ ಚಿತ್ರ ಬಿಡುಗಡೆಯನ್ನು ವಿರೋಧಿಸಿದ್ದಾರೆ. ಚಿತ್ರದ ನಾಯಕ ರಜನಿಕಾಂತ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತದೆ ಎಂದು ನನಗೆ ಭರವಸೆ ಇದೆ ಎಂದಿದ್ದಾರೆ.

English summary
Karnataka Rakshana Vedike activists led by Praveen Sheety were held protest in from it Orion mall against release of Rajinikanth starred 'Kaala' film on Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X