ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಸುದ್ದಿ ವಾಹಿನಿ ಬಿಟಿವಿ ನ್ಯೂಸ್‌ ಲೋಕಾರ್ಪಣೆ

By Ashwath
|
Google Oneindia Kannada News

ಬೆಂಗಳೂರು,ಜು.11: ಕನ್ನಡದ ಹತ್ತನೇ ಸುದ್ದಿವಾಹಿನಿಯಾಗಿ 'ಬಿಟಿವಿ ನ್ಯೂಸ್‌' ಗುರುವಾರ ಅಧಿಕೃತವಾಗಿ ಆರಂಭಗೊಂಡಿದೆ. ನಗರದ ಕ್ರೆಸೆಂಟ್‌ ರಸ್ತೆಯಲ್ಲಿರುವ ವಾಹಿನಿಯ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿವಾಹಿನಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು "ವಾಸ್ತವಿಕ ನಲೆಗಟ್ಟಿನಲ್ಲಿ ಮೌಲ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಸುದ್ದಿಯನ್ನು ಜನರಿಗೆ ಮುಟ್ಟಿಸಬೇಕು. ಸಣ್ಣಪುಟ್ಟ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಿ ಮಹತ್ವದ ವಿಚಾರಗಳಿಗೆ ಹೆಚ್ಚಿನ ಪಾಮುಖ್ಯತೆ ಸಿಗದೇ ಹೋದರೆ ಜನರ ವಿಶ್ವಾಸ ಕಡಿಮೆಯಾಗುತ್ತದೆ. ವಸ್ತುನಿಷ್ಠವಾದ ತನಿಖಾ ವರದಿಗಳನ್ನು ಪ್ರಸಾರ ಮಾಡಿ ಜನರ ಸಮಸ್ಯೆಗಳನ್ನು ಮಾಧ್ಯಮಗಳು ಬಗೆಹರಿಸಬೇಕು" ಎಂದರು.

ಸರ್ಕಾರದ ತಪ್ಪುಗಳನ್ನು ಹೇಳುವುದು ಮಾಧ್ಯಮಗಳ ಕರ್ತವ್ಯ. ಆದರೆ ಸರ್ಕಾರದ ತಪ್ಪುಗಳನ್ನು ಹೇಳುವಾಗ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡು ಸುದ್ದಿಯನ್ನು ಪ್ರಕಟಿಸಬೇಕು. ಗಂಡ ಹೆಂಡತಿ ಸುದ್ದಿ ವೈಭವಿಕರಿಸುವುದು ಸರಿಯಿಲ್ಲ. ಅದಕ್ಕಿಂತ ಹೆಚ್ಚಿನ ಮಹತ್ವದ ಸುದ್ದಿಗಳಿಗೆ ಒತ್ತು ನೀಡಿ ಜನರ ಹಿತಕ್ಕೆ ಸಂಬಂಧಪಟ್ಟ ಸುದ್ದಿಗಳನ್ನು ಮಾಧ್ಯಮಗಳು ನೀಡಬೇಕು. ಈ ನಿಟ್ಟಿನಲ್ಲಿ ಬಿಟಿವಿ ನ್ಯೂಸ್‌ ಕಾರ್ಯ‌ನಿರ್ವ‌ಹಿಸಿ ರಾಜ್ಯದ ಜನರ ವಿಶ್ವಾಸವನ್ನು ಗಳಿಸುವಂತಾಗಲಿ ಎಂದು ಅವರು ಶುಭಹಾರೈಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ "ಇಂದು ಮಹತ್ವದ ವಿಷಯಗಳಿಗೆ ಮಾಧ್ಯಮಗಳಲ್ಲಿ ಸ್ಥಾನ ಕಡಿಮೆಯಾಗುತ್ತಿದೆ. ದುರ್ಘಟನೆ, ಕ್ರೈಂಗಳಿಗೆ ಹೆಚ್ಚಿನ ಮಹತ್ವ ನೀಡದೇ ರಚನಾತ್ಮಕ ಕೆಲಸಗಳಿಗೆ ಹೆಚ್ಚಿನ ಮಹತ್ವ ನೀಡಿ ಸಮಾಜದದ ಅಭಿವೃದ್ಧಿಗೆ ಬಿಟಿವಿ ಸ್ಪಂದಿಸಲಿ" ಎಂದು ಶುಭಹಾರೈಸಿದರು.

ವಾಹಿನಿಯ ಮುಖ್ಯಸ್ಥ ಜಿ.ಎಂ.ಕುಮಾರ್‌ ಮಾತನಾಡಿ "ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ. ಬದಲಾವಣೆಗಾಗಿ ಬಿಟಿವಿಯನ್ನು ಆರಂಭಿಸಲಾಗಿದೆ. ಬಿಟಿವಿಯಲ್ಲಿ ನುರಿತ ಅನುಭವಿ ಹೊಂದಿರುವ ಸಿಬ್ಬಂದಿಗಳಿದ್ದಾರೆ. ವೃತ್ತಿಪರತೆಯನ್ನು ಉಸಿರಾಗಿಸಿಕೊಂಡ ದಕ್ಷ ಪ್ರಾಮಾಣಿಕ ಪತ್ರಕರ್ತರಿದ್ದಾರೆ. ನಮ್ಮ ವಾಹಿನಿ ಏಕವ್ಯಕ್ತಿ ಕೇಂದ್ರಿತ ವ್ಯವಸ್ಥೆ ಅಲ್ಲ. ಎಲ್ಲಾ ಜನರ ಆಶೋತ್ತರಗಳಿಗೆ ಬಿಟಿವಿ ಸ್ಪಂದಿಸುತ್ತದೆ" ಎಂದು ಅವರು ಹೇಳಿದರು.

btvv 444

ಫೇಸ್ ಬುಕ್‌‌ನಲ್ಲಿ ಬಿಟಿವಿ ನ್ಯೂಸ್ ಕರ್ನಾಟಕ ಸಂಸ್ಥೆ ತನ್ನನ್ನು ಪ್ರಕಟಿಸಿದ್ದು ಹೀಗೆ...

'ಕಾಯುವಿಕೆಯ ದಿನಗಳು ಮುಗಿದವು... ಇದು ಪತ್ರಕರ್ತರೇ ವೃತ್ತಿನಿಷ್ಠೆಯಿಂದ ಕಟ್ಟಿದ ನ್ಯೂಸ್ ಚಾನಲ್. ಮಾನವೀಯತೆಯ ನೆಲೆಗಟ್ಟಿನಲ್ಲಿ, ಸತ್ಯ ಹಾಗೂ ನಿಷ್ಠುರತೆಗೆ ಬದ್ಧರಾಗಿ ಕಾರ್ಯ ನಿರ್ವಹಿಸುವ ಸಂಕಲ್ಪ ನಮ್ಮದು. ನಮ್ಮ ಪ್ರತಿ ಸುದ್ದಿಯೂ ವಸ್ತುನಿಷ್ಠ ಹಾಗೂ ಪ್ರತಿ ವಿಶ್ಲೇಷಣೆಯೂ ಸತ್ವಭರಿತವಾಗಿರುತ್ತದೆ. ಯಾವುದೇ ರಾಗ ದ್ವೇಷಗಳಿಲ್ಲದೆ ನಿಷ್ಪಕ್ಷಪಾತವಾಗಿ ನಿಮಗೆ ಸುದ್ದಿ ನೀಡುತ್ತೇವೆ. ನಿಮ್ಮೆಲ್ಲಾ ನಿರೀಕ್ಷೆಗಳಿಗೆ ಸ್ಪಂದಿಸುವ ಭರವಸೆಯೊಂದಿಗೆ ನಿಮ್ಮ ಮನೆಗೇ ಬರುತ್ತಿದ್ದೇವೆ. ಹೊಸ ಸಾಹಸಕ್ಕೆ ಸದಾ ಬೆನ್ನೆಲುಬಾಗಿ ನಿಂತು ಬೆಂಬಲಿಸಿದವರು ನೀವು. ಈಗ ನಮ್ಮನ್ನೂ ಆದರಿಸಿ, ಹರಸಿ, ಹಾರೈಸಿ...

ಬಿಟಿವಿ ನ್ಯೂಸ್ ಸಂಸ್ಥೆ ವಿಳಾಸ:
#32/1-2, ಕ್ರೆಸೆಂಟ್ ಟವರ್
ಕ್ರೆಸೆಂಟ್ ರಸ್ತೆ, ಹೈ ಗ್ರೌಂಡ್ಸ್,
ಬೆಂಗಳೂರು- 560 001.
ಸಂಪರ್ಕ ಸಂಖ್ಯೆ: 080-4968 6666.

ಕನ್ನಡದ ಉಳಿದ ಒಂಭತ್ತು ಸುದ್ದಿ ವಾಹಿನಿಗಳು :ಉದಯ ನ್ಯೂಸ್‌, ಟಿವಿ9, ಸುವರ್ಣ‌ ನ್ಯೂಸ್‌, ಸಮಯ ನ್ಯೂಸ್‌, ಜನಶ್ರೀ ನ್ಯೂಸ್‌,ಕಸ್ತೂರಿ ನ್ಯೂಸ್‌, ಪಬ್ಲಿಕ್‌ ಟಿವಿ, ರಾಜ್‌ ನ್ಯೂಸ್‌, ‌ಈಟಿವಿ ಕನ್ನಡ ನ್ಯೂಸ್

English summary
Kannada 24X7 News Channel “Btv” Launched on Thursday July 11. Karnataka chief minister Siddaramaiah Launched Btv news Channel in Bangalore . BTV News Karnataka a 24X7 Kannada news channel which is a brainchild of various journalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X