ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರಕ್ಕೆ ಎಂಟ್ರಿ ಕೊಟ್ಟ 77ವರ್ಷ ಇತಿಹಾಸವುಳ್ಳ ಸೀರೆ ಬ್ರ್ಯಾಂಡ್

|
Google Oneindia Kannada News

ಬೆಂಗಳೂರು, ಆಗಸ್ಟ್ 15: ಸೀರೆಗಳ ರಾಣಿ ಕಂಕಟಾಲ ಸ್ಯಾರೀಸ್ ಬೆಂಗಳೂರಿನ ಜಯನಗರದಲ್ಲಿ ಭಾರತದ 12ನೇ ರೀಟೇಲ್ ಮಳಿಗೆಯನ್ನು ಪ್ರಾರಂಭಿಸಿದೆ. ಕಂಕಟಾಲ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳ ಅತ್ಯಂತ ಹಳೆಯ ಸೀರೆಯ ಬ್ರಾಂಡ್‍ಗಳಲ್ಲಿ ಒಂದಾಗಿದೆ ಮತ್ತು 77ವರ್ಷಗಳಿಗೂ ಮೇಲ್ಪಟ್ಟು ಹಳೆಯ ನೇಯ್ಗೆ ತಂತ್ರಗಳನ್ನು ಪ್ರತಿನಿಧಿಸುತ್ತಿದೆ. ಈ ಬ್ರಾಂಡ್ ಸದಾ ತನ್ನ ಮಾರುಕಟ್ಟೆಯಲ್ಲಿ ಮುಂಚೂಣಿಯ ಟ್ರೆಂಡ್‍ಗಳಿಗೆ ಖ್ಯಾತಿ ಪಡೆದಿದೆ ಮತ್ತು ಸ್ಥಿರವಾಗಿ ಬೆಳವಣಿಗೆ ಕಾಣುತ್ತಿದೆ. ಜಯನಗರದ ಮಳಿಗೆಯು ಕರ್ನಾಟಕದಲ್ಲಿ ಕಂಕಟಾಲದ 1ನೇ ಮಳಿಗೆಯಾಗಿದೆ ಮತ್ತು ಜಯನಗರ ಮತ್ತು ಬೆಂಗಳೂರಿನ ಗ್ರಾಹಕರಿಗೆ ಮೀಸಲಾಗಿದೆ.

ಈ ಮಳಿಗೆಯನ್ನು ಮಾಜಿ ಗೃಹ ಸಚಿವ ಹಾಗೂ ಶಾಸಕರಾದ ಎಂ.ಬಿ. ಪಾಟೀಲರು ಶನಿವಾರ ಬೆಳಿಗ್ಗೆ 10.53ಕ್ಕೆ ಅವರ ಪತ್ನಿ ಶ್ರೀಮತಿ ಆಶಾ ಪಾಟೀಲ್ ಅವರೊಂದಿಗೆ ಉದ್ಘಾಟಿಸಿದರು. ನಂತರ ಶಾಸಕಿ ಶ್ರೀಮತಿ ಸೌಮ್ಯ ರೆಡ್ಡಿ ಸಾಂಪ್ರದಾಯಿಕ ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಕಂಕಟಾಲ ಸ್ಯಾರೀಸ್‍ನ ಸಿಎಂಡಿ ಶ್ರೀ ಮಲ್ಲಿಕ್ ಕಂಕಟಾಲ ಅವರೊಂದಿಗೆ ಇಡೀ ಕಂಕಟಾಲ ಕುಟುಂಬವು ಮೂರನೇ ತಲೆಮಾರಿನ ನಿರ್ದೇಶಕರಾದ ಅರವಿಂದ್, ಭರತ್ ಮತ್ತು ಅನಿರುಧ್ ಕಂಕಟಾಲ ಮತ್ತು ಕೊಟಕ್ ಮಹಿಂದ್ರಾ ಬ್ಯಾಂಕ್‍ನ ಉಪಾಧ್ಯಕ್ಷ ಶ್ರೀ ಸೋವಿತ್ ನಂದಾ ಉಪಸ್ಥಿತರಿದ್ದರು.

Kankatala is NOW IN Jayanagar BENGALURU

ಕಂಕಟಾಲದ ರಾಣಿಯರ ಅನುಕೂಲಕ್ಕೆ ವಿನ್ಯಾಸಗೊಡಿರುವ ಮಳಿಗೆಯ ಒಳಾಂಗಣ ಸಮಕಾಲೀನ ಮತ್ತು ಕ್ಲಾಸಿಯಾಗಿದೆ. ಈ ಮಳಿಗೆಯು ಭಾರತದ 50 ಪ್ರಮುಖ ನೇಯ್ಗೆಯ ಕ್ಲಸ್ಟರ್‌ಗಳಿಂದ ಆಯ್ಕೆ ಮಾಡಲಾದ 10000 ಸೀರೆಗಳಿಗೂ ಮೇಲ್ಪಟ್ಟ ಸಂಗ್ರಹ ಹೊಂದಿದ್ದು ರೂ.5000ಗಳಿಂದ ರೂ.5 ಲಕ್ಷ ಮತ್ತು ಮೇಲ್ಪಟ್ಟು ಬೆಲೆ ಹೊಂದಿದೆ.

ಉಡುಪಿ: ಎಂಬಿಎ ಪದವೀಧರೆಯ ಕೈಯಲ್ಲಿ ಮತ್ತೆ ಅರಳುತ್ತಿವೆ ಕೈಮಗ್ಗದ ಸೀರೆಗಳುಉಡುಪಿ: ಎಂಬಿಎ ಪದವೀಧರೆಯ ಕೈಯಲ್ಲಿ ಮತ್ತೆ ಅರಳುತ್ತಿವೆ ಕೈಮಗ್ಗದ ಸೀರೆಗಳು

ಪ್ರತಿ ಬಜೆಟ್, ಸಂದರ್ಭ ಮತ್ತು ಸ್ಟೈಲ್‍ಗೆ ಒನ್-ಸ್ಟಾಪ್ ಸೀರೆಯ ತಾಣವಾಗಿಸಿದೆ. ಈ ಮಳಿಗೆಯು ವಿನೂತನ ಬಗೆಯ ಕೈಗಳಲ್ಲಿ ನೇಯ್ಗೆ ಮಾಡಿದ ಕಾಂಚೀಪುರಂ, ಬನಾರಸಿ, ಪಟೋಲ, ಇಕತ್, ಪೈಥಾನಿ, ಕೋಟ, ಉಪ್ಪದ, ಖಾದಿ, ಜಮ್‍ದಾನಿ, ಆರ್ಗಾಂಜಾ, ಕಲಂಕರಿ, ಗಡ್ವಾಲ್, ಟಸ್ಸಾರ್ ಮತ್ತಿತರೆ ಸೀರೆಗಳನ್ನು ಹೊಂದಿದೆ.

Kankatala is NOW IN Jayanagar BENGALURU

ಎಲ್ಲ ಕಂಕಟಾಲ ಮಳಿಗೆಗಳಂತೆ ಇಲ್ಲಿ ಕೂಡಾ ಕಂಕಟಾಲ ಕುಟುಂಬವು ಎಚ್ಚರಿಕೆಯಿಂದ ವೈಯಕ್ತಿಕವಾಗಿ ಆಯ್ಕೆ ಮಾಡಲಾಗಿದ್ದು ಪ್ರತಿ ಸೀರೆಯೂ ವಿಶಿಷ್ಟ ಮತ್ತು ಯಾವುದೇ ವಿನ್ಯಾಸ ಪುನರಾವರ್ತನೆಗೊಂಡಿರುವುದಿಲ್ಲ.

ನೈಕಾ ಫ್ಯಾಷನ್‍ನಲ್ಲಿ ವಿಶೇಷವಾದ ತನೀರಾ ಬ್ರಾಂಡ್ ಕೈಮಗ್ಗದ ಸೀರೆಗಳುನೈಕಾ ಫ್ಯಾಷನ್‍ನಲ್ಲಿ ವಿಶೇಷವಾದ ತನೀರಾ ಬ್ರಾಂಡ್ ಕೈಮಗ್ಗದ ಸೀರೆಗಳು

ಇದರಿಂದ ಪ್ರತಿ ಕಂಕಟಾಲ ಸೀರೆಯೂ ಅವರ ಪೋಷಕರಿಗೆ ವಿಶಿಷ್ಟವಾಗಿರುತ್ತದೆ. ಈ ಪ್ರಕ್ರಿಯೆಯಿಂದ ಅವರ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನಷ್ಟೇ ಅವರ ಗ್ರಾಹಕರಿಗೆ ಒದಗಿಸುತ್ತವೆ.

Kankatala is NOW IN Jayanagar BENGALURU

Recommended Video

ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಪ್ರತಾಪ್ ಸಿಂಹ | Oneindia Kannada

'''ನಾವು ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳ 3 ತಲೆಮಾರುಗಳ ವಿಶ್ವಾಸಾರ್ಹ ಕೈಮಗ್ಗಗಳನ್ನು ಪ್ರತಿನಿಧಿಸುತ್ತಿದ್ದು ನಮ್ಮ ಗ್ರಾಹಕರನ್ನು ನಮ್ಮ ರಾಜ್ಯಗಳ ಹೊರಗಡೆಯೂ ತಲುಪುತ್ತಿರುವುದನ್ನು ಕಾಣುತ್ತಿದ್ದೇವೆ. 3 ವರ್ಷಗಳ ಹಿಂದೆ ನಮ್ಮ ಇ-ಕಾಮರ್ಸ್ ಪ್ರವೇಶದಿಂದ ವಿಶ್ವದಾದ್ಯಂತ ಭಾರತೀಯರನ್ನು ತಲುಪಲು ಸಾಧ್ಯವಾಗಿದೆ. ಕರ್ನಾಟಕದಲ್ಲಿ ನಮ್ಮ ಮೊದಲನೆಯ ಮಳಿಗೆ ನಮ್ಮ 12ನೇ ಮಳಿಗೆಯಾಗಿದ್ದು ಇದು ಬೆಂಗಳೂರಿನಲ್ಲಿ ವಿಸ್ತರಿಸುತ್ತಿರುವ ಗ್ರಾಹಕರಿಗೆ ಪೂರೈಸುವ ಉದ್ದೇಶಕ್ಕೆ ಪಾರಂಭಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಅತ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ ಮತ್ತು ನಮ್ಮ ಪೋಷಕರು ತಮ್ಮ ನಗರದಲ್ಲಿ ಅವರಿಗೆ ಒಂದು ಔಟ್ಲೆಟ್ ಅನ್ನು ತರಲು ಪ್ರೋತ್ಸಾಹಿಸಿದರು. ಈ ತ್ರೈಮಾಸಿಕದಲ್ಲಿ 2ನೇ ಸ್ಟೋರ್ ಆರಂಭಿಸಿದ್ದು, ನಾವು ಇತ್ತೀಚೆಗೆ ಕಳೆದ ತಿಂಗಳು ಹೈದರಾಬಾದ್‌ನ ನಮ್ಮ 11 ನೇ ಕಂಪನಿಯ ಮಾಲೀಕತ್ವದ ಮತ್ತು ಕಂಪನಿ-ನಿರ್ವಹಣೆಯ ಅಂಗಡಿಯನ್ನು ಪ್ರಾರಂಭಿಸಿದ್ದೇವೆ. ಭಾರತದ ಕೈಮಗ್ಗದ ಮೋಡಿಗೆ ಪುನರುತ್ತೇಜನ ನೀಡುವ ನಿಟ್ಟಿನಲ್ಲಿ ಸದ್ಯದಲ್ಲೇ ನಾವು ನಮ್ಮ ರಾಷ್ಟ್ರೀಯ ವಿಸ್ತರಣೆಯನ್ನು ಯೋಜಿಸುತ್ತಿದ್ದೇವೆ,'' ಎಂದು ಕಂಕಟಾಲ ಸ್ಯಾರೀಸ್ ಅಧ್ಯಕ್ಷ ಮಲ್ಲಿಕಾರ್ಜುನ ರಾವ್ ಕಂಕಟಾಲ ಹೇಳಿದರು.

English summary
Queen of Sarees, Kankatala Sarees launches 12th Retail Outlet of India in Jayanagar, Bengaluru. Kankatala is one of the oldest saree brands in Andhra Pradesh & Telangana and has represented the age-old weaving techniques for more than 77 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X