• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಡೀಪಾರು ಸುದ್ದಿ: ನಟ ಚೇತನ್ ಅಹಿಂಸಾ ಫೇಸ್ ಬುಕ್ ಪೋಸ್ಟ್

|
Google Oneindia Kannada News

ಬೆಂಗಳೂರು, ಮಾರ್ಚ್ 14: ಅಮೆರಿಕಾದ ಗ್ರೀನ್ ಕಾರ್ಡ್ ಹೋಲ್ಡರ್ ಆಗಿರುವ ಆ ದಿನಗಳು ಚಲನಚಿತ್ರ ಖ್ಯಾತಿಯ ನಟ ಚೇತನ್ ಕುಮಾರ್, ಗಡೀಪಾರು ವಿಚಾರದ ಬಗ್ಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

ಬೇರೆ ದೇಶದ ಪ್ರಜೆಯಾಗಿ ಭಾರತದಲ್ಲಿ ಹೋರಾಟ ನಡೆಸುತ್ತಿರುವುದಕ್ಕಾಗಿ ಕಾನೂನಿನ ಉಲ್ಲಂಘನೆ ಆರೋಪ ಚೇತನ್ ವಿರುದ್ದ ಕೇಳಿ ಬಂದಿದೆ. ಈ ಸಂಬಂಧ, ಬೆಂಗಳೂರು ಪೊಲೀಸರು ರಾಜ್ಯ ಸರಕಾರಕ್ಕೆ ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ಫೇಸ್ ಬುಕ್ ನಲ್ಲಿ ಚೇತನ್ ಬರೆದುಕೊಂಡಿದ್ದು ಹೀಗೆ:

ನಟ ಚೇತನ್ ಅಹಿಂಸಾ ದೇಶದಿಂದ ಗಡೀಪಾರು? ಕಾನೂನು ಏನು ಹೇಳುತ್ತೆ!ನಟ ಚೇತನ್ ಅಹಿಂಸಾ ದೇಶದಿಂದ ಗಡೀಪಾರು? ಕಾನೂನು ಏನು ಹೇಳುತ್ತೆ!

"ಮೂರು ವಾರಗಳ ನಂತರ ಸಾಮಾಜಿಕ ತಾಣಕ್ಕೆ ಮತ್ತೆ ಮರಳಿದ್ದೇನೆ. ಕರ್ನಾಟಕದಲ್ಲಿ, ಭಾರತದಲ್ಲಿ ಮತ್ತು ವಿದೇಶಗಳಿಂದಲೂ ಗಟ್ಟಿ ಕಾರಣವಿರದ ನ್ಯಾಯಾಂಗ ಬಂಧನದ ಸಮಯದಲ್ಲಿ ನನ್ನ ಜೊತೆಗಿದ್ದು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು"

"ಸದ್ಯದ ನನ್ನ ಗಡಿಪಾರಿನ ವರದಿಗಳೆಲ್ಲ ಆಧಾರವಿಲ್ಲದ ಅತಿರೇಕದ ಸುದ್ದಿಗಳು. ಈ ತರದ ಸರ್ಕಾರಿ ಬೆಂಬಲಿತ ದಾಳಿಗಳು ನಮ್ಮ ಸತ್ಯ ಮತ್ತು ಸಮಾನತೆಯ ಪರದ ಧ್ವನಿಗಳು ಹೆಚ್ಚಾಗುತ್ತಿರುವುದನ್ನ ತೋರಿಸುತ್ತದೆ"ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಚೇತನ್ ಅಹಿಂಸಾ ಬರೆದುಕೊಂಡಿದ್ದಾರೆ.

ಚೇತನ್ ಅವರ ಈ ಪೋಸ್ಟಿಗೆ ನೂರಾರು ಕಾಮೆಂಟುಗಳು ಬಂದಿವೆ. "ಅಧಿಕಾರ ಅನ್ನೋದು ನಿಜವಾಗ್ಲೂ ನಿಮ್ಮಂಥವರಿಗೆ ಸಿಗಬೇಕು. ಸಾಮಾನ್ಯ ಜ್ಞಾನ ಇಲ್ಲದವರು, ಕಾಂಜಿ ಪಿಂಜಿಗಳೆಲ್ಲ ಅಧಿಕಾರ ಅನುಭವಿಸುತ್ತಿದ್ದಾರೆ, ನಿಮ್ಮ ಮುಂದೆ ಅವರೆಲ್ಲ ಶೂನ್ಯ ಅಣ್ಣ" ಎಂದು ಅವರ ಅಭಿಮಾನಿಗಳು ಚೇತನ್ ಅವರಿಗೆ ಸ್ವಾಗತ ಕೋರಿದ್ದಾರೆ.

"ನಿನ್ನ ಬಿಡುಗಡೆಗೆ ಬೆಂಬಲಿಸಿದವರಲ್ಲಿ ಬಹುತೇಕರು ಮಹಾತ್ಮ ಗಾಂಧಿ ಯಾವ ಅಭಿಮಾನಿಗಳು. ಇನ್ನಾದರೂ ಗಾಂಧಿಯನ್ನು ನಿಂದಿಸುವ ನಿನ್ನ ಮತಿಗೆಟ್ಟ ಬುದ್ದಿಗೆ ತಿಲಾಂಜಲಿಯಿಟ್ಟು ಮಾನವನಾಗು" ಎನ್ನುವ ಬುದ್ದಿಮಾತುಗಳೂ ಇವರ ಪೋಸ್ಟಿಗೆ ಬಂದಿದೆ.

ಸಾಗರೋತ್ತರ ಭಾರತೀಯ ನಾಗರಿಕ ಪತ್ರ (Overseas Citizenship of India) ಕಾನೂನಿನ ಪ್ರಕಾರ, ಚೇತನ್ ಕಾನೂನನ್ನು ಉಲ್ಲಂಘಿಸಿದ್ದಾರೆ ಎನ್ನುವ ವರದಿಯನ್ನು ಬೆಂಗಳೂರು ಪೊಲೀಸರು, ರಾಜ್ಯ ಗೃಹ ಸಚಿವಾಲಯಕ್ಕೆ ನೀಡಿದ್ದಾರೆ. ಈ ಕಾನೂನಿನ ಪ್ರಕಾರ, ಈ ಕಾರ್ಡ್ ಅನ್ನು ಹೊಂದಿರುವವರು ಸ್ಥಳೀಯ ಕಾನೂನು ಉಲ್ಲಂಘನೆ, ಹೋರಾಟ, ಪ್ರತಿಭಟನೆ ನಡೆಸುವಂತಿಲ್ಲ.

Recommended Video

   ಮ್ಯಾಚ್ ಮದ್ಯೆ ಅಭಿಮಾನಿಗಳ ರಾದಂಥ !! | Oneindia Kannada
   English summary
   Kananda Actor Chetan Ahimsa Facebook Post Over His Deportation News. Know More
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X