• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆಂಗಳೂರಿನ ರೇವಣ ಸಿದ್ಧಪ್ಪ!

|

ಬೆಂಗಳೂರು, ಅಕ್ಟೋಬರ್ 28: ದೆಹಲಿಯ 'ಬಾಬಾ ಕಾ ಡಾಬಾ' ಅಕ್ಟೋಬರ್ ಮೊದಲ ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು, ಸುದ್ದಿ ಮಾಡಿತ್ತು. ಈಗ ಬೆಂಗಳೂರಿನ ರೇವಣ ಸಿದ್ಧಪ್ಪ ಸುದ್ದಿಯಾಗಿದ್ದಾರೆ.

79 ವರ್ಷದ ರೇವಣ ಸಿದ್ಧಪ್ಪ ಕನಕಪುರ ರಸ್ತೆಯಲ್ಲಿ ಫುಟ್‌ ಪಾತ್‌ ಮೇಲೆ ಔಷಧಿ ಸಸ್ಯಗಳನ್ನು ಮಾರಾಟ ಮಾಡುತ್ತಿದ್ದರು. ಈ ಸುದ್ದಿ ಟ್ವೀಟ್, ಫೇಸ್ ಬುಕ್ ಮೂಲಕ ವೈರಲ್ ಆಯಿತು. ಹಲವಾರು ಜನರು ಅವರ ಸಹಾಯಕ್ಕೆ ಬಂದರು.

ವೈರಲ್ ಫೋಟೋ; ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ

ರೇವಣ್ಣ ಸಿದ್ಧಪ್ಪಗೆ ಸಹಾಯ ಮಾಡಲು ನಟ-ನಟಿಯರು, ಎನ್‌ಜಿಓಗಳು ಆಗಮಿಸಿದವು. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಮತ್ತಷ್ಟು ವೈರಲ್ ಆಯಿತು. ಬಿಸಿಲಿನಲ್ಲಿ ಕೂತಿದ್ದ ವೃದ್ಧರಿಗೆ ಛತ್ರಿಯ ಆಸರೆ ದೊರೆಯಿತು. ಗಿಡಗಳನ್ನು ಇಟ್ಟುಕೊಳ್ಳಲು ಟೇಬಲ್ ವ್ಯವಸ್ಥೆ ಮಾಡಲಾಯಿತು.

ಹಂಪಿ ಡಿವೈಎಸ್ಪಿ ರಾಜೀನಾಮೆ: ಐಜಿಪಿ ನಂಜುಂಡಸ್ವಾಮಿ ವಿರುದ್ಧ ಆಡಿಯೋ ವೈರಲ್

ರೇವಣ ಸಿದ್ಧಪ್ಪ ಬಳಿ ಔಷಧಿ ಸಸ್ಯಗಳನ್ನು ಕೊಳ್ಳಲು ಈಗ ಬಹಳ ಜನರು ಬರುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಸಿಕ್ಕ ಮೇಲೆ ವ್ಯಾಪಾರ ಹೆಚ್ಚಾಗಿದೆ. ಆಗ ಒಂದು ಗಿಡ ಮಾರಾಟವಾದರೆ ಸಾಕು ಎಂಬಂತಿದ್ದ ಪರಿಸ್ಥಿತಿ ಬದಲಾಗಿದೆ.

ಜೀವವೈವಿಧ್ಯ ವನ ಭಾಗ 2; ನಮ್ಮ ಗಿಡ-ನಮ್ಮ ವನ- ಕಡಿಯಲು ಬಿಡೆವು

"ಹಿಂದೆ ಗಿಡಗಳನ್ನು ಕೊಳ್ಳುವವರೇ ಇರಲಿಲ್ಲ. ನನ್ನ ಕಥೆ ವೈರಲ್ ಆದ ಬಳಿಕ ಜನರು ಗಿಡಗಳ ಖರೀದಿಗಾಗಿ ಆಗಮಿಸುತ್ತಿದ್ದಾರೆ" ಎಂದು ರೇವಣ ಸಿದ್ದಪ್ಪ ಹೇಳುತ್ತಾರೆ.

English summary
People coming to buy plants from Revanna Siddappa. 79 year old Revanna Siddappa story got viral on social media. He is selling saplings on the side of Kanakapura Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X