ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಕಿರುವುದು ಜಾತಿ ಭೇದ ಪ್ರತಿಪಾದಿಸುವ ಹಿಂದುತ್ವ ಅಲ್ಲ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 26: ನಾಡಿಗೆ ಜಾತ್ಯತೀತತೆಯ ಸಂದೇಶವನ್ನು ಸಾರಿದ ದಾಸ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಜಯಂತಿ ಇಂದು (ನ.26).

13ನೇ ಶತಮಾನದಲ್ಲಿ ದಾಸಸಾಹಿತ್ಯ ಪರಂಪರೆಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರಲ್ಲಿ ಕನಕದಾಸರ ಕೊಡುಗೆ ಮಹತ್ವದ್ದು. ಅವರ 'ಮೋಹನ ತರಂಗಿಣಿ', 'ನಳ ಚರಿತ್ರೆ', 'ಹರಿಭಕ್ತಸಾರ', 'ರಾಮಧಾನ್ಯ ಚರಿತೆ' ಕೃತಿಗಳು ಅವರ ವೈವಿಧ್ಯಮಯ ಸಾಹಿತ್ಯ ಪ್ರತಿಭೆಗೆ ಸಾಕ್ಷಿ.

ಪ್ರತಿ ವರ್ಷ ಕನಕದಾಸ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿತ್ತು. ಸರ್ಕಾರದ ವತಿಯಿಂದ ಕನಕದಾಸ ಜಯಂತಿ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ, ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ನಡೆಸದೆ ಸರಳವಾಗಿ ಆಚರಿಸುವಂತೆ ಸೂಚಿಸಲಾಗಿತ್ತು.

'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!

ಆದರೆ, ಅಂತ್ಯ ಸಂಸ್ಕಾರ ಸೋಮವಾರ ನಡೆಸುವುದಾಗಿ ತೀರ್ಮಾನಿಸಿದ್ದರಿಂದ ಜಯತಿ ಆಚರಣೆಯನ್ನು ಮುಂದೂಡುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕದಾಸರನ್ನು ಹೊಗಳುತ್ತಾ, ಅವರ ಜಾತ್ಯತೀತ ತತ್ವಗಳನ್ನು ನೆನಪಿಸಿಕೊಂಡಿದ್ದಾರೆ.

Array

ಕನಕದಾಸ ಜಯಂತಿ ಶುಭಾಶಯ

ಐದುನೂರು ವರ್ಷಗಳ ಹಿಂದೆಯೇ ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ? ಎಂದು ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿರುವ ಜಾತಿ ನರಕವನ್ನು ದಿಟ್ಟತನದಿಂದ ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಸಂತ ಕನಕದಾಸರ ಜಯಂತಿಗೆ ನಾಡಬಾಂಧವರಿಗೆ ಶುಭಾಶಯಗಳು.

'ಕನಕನಿಗೆ ಅಪಚಾರ ಎಸಗುವರ ವಿರುದ್ಧದ ಹೋರಾಟದಲ್ಲಿ ನಾನೂ ಭಾಗಿಯಾಗ್ತೇನೆ''ಕನಕನಿಗೆ ಅಪಚಾರ ಎಸಗುವರ ವಿರುದ್ಧದ ಹೋರಾಟದಲ್ಲಿ ನಾನೂ ಭಾಗಿಯಾಗ್ತೇನೆ'

Array

ಕನಕದಾಸರು ಇಂದಿಗೂ ಪ್ರಸ್ತುತ

ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳು ಕಳೆದರೂ, ಸಮಾನತೆಯ ಆಧಾರದ ಸಮಾಜ ನಿರ್ಮಾಣದ ಆಶಯದ ಸಂವಿಧಾನವನ್ನು ಒಪ್ಪಿಕೊಂಡ ನಂತರವೂ ಕನಕದಾಸರು 500 ವರ್ಷಗಳ ಹಿಂದೆ ಎತ್ತಿರುವ ಪ್ರಶ್ನೆ ಈಗಲೂ ಪ್ರಸ್ತುತ ಎಂದು ಅನಿಸಲು ಕಾರಣಗಳೇನೆಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಾತಿ-ಮತಗಳ ಮೀರುವ ಪ್ರಯತ್ನಕ್ಕೆ ನಾಂದಿಯಾಗಲಿ ಕನಕಜಯಂತಿಜಾತಿ-ಮತಗಳ ಮೀರುವ ಪ್ರಯತ್ನಕ್ಕೆ ನಾಂದಿಯಾಗಲಿ ಕನಕಜಯಂತಿ

ಜಾತಿ, ಧರ್ಮಕ್ಕೆ ಸೀಮಿತರಲ್ಲ

ಕನಕದಾಸರ ಜಯಂತಿ ಎಂದರೆ ಅವರ ವೈಯಕ್ತಿಕ ವೈಭವೀಕರಣ ಅಲ್ಲ, ಅವರನ್ನು ಒಂದು ಜಾತಿ ಇಲ್ಲವೆ,ಧರ್ಮಕ್ಕೆ ಸೀಮಿತಗೊಳಿಸುವುದೂ ಅಲ್ಲ. ಕನಕದಾಸರ ಸಾಮಾಜಿಕ ಚಿಂತನೆ, ಸಮಾನತೆಯ ಸಮಾಜದ ಆಶಯಹೊಂದಿರುವ ಎಲ್ಲ ಜಾತಿ-ಧರ್ಮಗಳಿಗೂ ಆದರ್ಶಪ್ರಾಯವಾಗಿರುವಂತಹದ್ದು ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದಿದ್ದಾರೆ.

ಭೇದ ಪ್ರತಿಪಾದಿಸುವ ಹಿಂದುತ್ವ ಬೇಡ

ನಮಗೆ ಇಂದು ಬೇಕಾಗಿರುವುದು ಕನಕದಾಸರು ಪ್ರತಿಪಾದಿಸಿದ ಜಾತಿಭೇದ, ವರ್ಣಭೇದ ಲಿಂಗಭೇದ ಮತ್ತು ವರ್ಗ ಭೇದ ಇಲ್ಲದ ಹಿಂದುತ್ವವೇ ಹೊರತು ಮನು ಪ್ರಣೀತ ಜಾತಿವ್ಯವಸ್ಥೆಯನ್ನು ಸಮರ್ಥಿಸುವ, ಜಾತಿ, ಲಿಂಗ ಭೇದವನ್ನು ಪ್ರತಿಪಾದಿಸುವ ಹಿಂದುತ್ವ ಅಲ್ಲ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

English summary
Former Chief Minister Siddaramaiah wished the people on the occasion of Kanakadasa Jayanti in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X