• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೊಲೆ ಯತ್ನ : ಮೂರು ವಿಶೇಷ ತನಿಖಾ ತಂಡ ರಚನೆ

|
Google Oneindia Kannada News

ಬೆಂಗಳೂರು, ಜು. 30: ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಕೊಲೆಗೆ ಯತ್ನಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಆರೋಪಿಗಳ ಪತ್ತೆಗಾಗಿ ಮೂರು ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಶಶಿಕುಮಾರ್ ಕಾರಿನಿಂದ ಇಳಿಯುತ್ತಿದ್ದಂತೆ ನಾಲ್ವರು ದಾಳಿ ಮಾಡಿದ್ದಾರೆ. ತಕ್ಷಣ ಲೈಸನ್ಸ್ ಗನ್ ಹೊರ ತೆಗೆದಿದ್ದರಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆರ್‌ಟಿಐ ಕಾರ್ಯಕರ್ತನ ಜತೆಗೆ ವೈಷಮ್ಯ ಹೊಂದಿದ್ದ ಶಶಿಕುಮಾರ್ ಮೇಲೆ ಎರಡು ವರ್ಷದ ಹಿಂದೆಯೂ ಹಲ್ಲೆಗೆ ಯತ್ನ ನಡೆದಿತ್ತು. ಶಶಿಕುಮಾರ್ ಹೇಳಿಕೆ ಪಡೆದಿದ್ದು, ಮೂರು ವಿಶೇಷ ತನಿಖಾ ತಂಡ ರಚಿಸಿ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ.

   Shikhar Dhawan ಆಟ ನೋಡಿ ಕೋಪಗೊಂಡ ಟ್ವಿಟರ್ | Oneindia Kannada

   ಯಾರು ಎನ್ನುವ ಸ್ಪಷ್ಟತೆ ಇರಲಿಲ್ಲ: ರಾತ್ರಿ ವೇಳೆ ನನ್ನ ಮೇಲೆ ದಾಳಿ ಮಾಡಿದ ವ್ಯಕ್ತಿಗಳ ಬಗ್ಗೆ ಸ್ಪಷ್ಟತೆ ಇಲ್ಲ. ಬೆದರಿಕೆ ಇರುವುದು ನಿಜ. ಆರ್‌ಟಿಐ, ಆರ್‌ಟಿಇ, ಕೆಲ ಖಾಸಗಿ ಶಾಲಾ ಸಂಸ್ಥೆಗಳ ಒಕ್ಕೂಟದ ಹೆಸರಿನಲ್ಲಿ ಬೆದರಿಕೆಗಳು ಬಂದಿವೆ. ಕತ್ತಲು ಆಗಿದ್ದರಿಂದ ಆರೋಪಿಗಳ ಚಹರೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಕೇವಲ ಐದಾರು ಸೆಕೆಂಡಿನಲ್ಲಿ ಘಟನೆ ನಡೆದಿದ್ದು ಎಲ್ಲವನ್ನು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

   English summary
   KAMS General Secretary D. Shashikumar assault case: Police suspected the deadly assault on the Kams General secretary in the wake of the old Revelry know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X