• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಂಬನಿಯ ಕುಯಿಲು ಆಧಾರಿತ ಚಿಗರಿಗಂಗಳ ಚೆಲುವೆ ನಾಟಕ ನೋಡಿ

|

ಬೆಂಗಳೂರು, ಅಕ್ಟೋಬರ್ 17: ಕನ್ನಡ ಸಾಹಿತಿ ತ. ರಾ. ಸುಬ್ಬರಾಯರ ಐತಿಹಾಸಿಕ ಕಾದಂಬರಿ 'ಕಂಬನಿಯ ಕುಯಿಲು' ರಂಗರೂಪ ಪಡೆದು 'ಚಿಗರಿಗಂಗಳ ಚೆಲುವೆ' ಎಂಬ ಹೆಸರಿನಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ಕಲಾ ವಿಲಾಸಿ ತಂಡ ಅಭಿನಯಿಸಿರುವ ಈ ನಾಟಕದ ಮೊದಲ ಪ್ರದರ್ಶನದ ಅಕ್ಟೋಬರ್ 19ರಂದು ನಡೆಯಲಿದೆ.

ಪ್ರದರ್ಶನದ ವಿವರಗಳು :

ನಾಟಕ : ಚಿಗರಿಗಂಗಳ ಚೆಲುವೆ

ಆಧಾರ : ತ. ರಾ. ಸು ಅವರ 'ಕಂಬನಿಯ ಕುಯಿಲು'

ರಂಗರೂಪ ನಿರ್ದೇಶನ : ಸಿದ್ದರಾಮು ಕೆ.ಎಸ್

ಸಂಗೀತ ನಿರ್ದೇಶನ: ಸತ್ಯ ರಾಧಾಕೃಷ್ಣ

ದಿನಾಂಕ : 19-ಅಕ್ಟೋಬರ್-2019, ಶನಿವಾರ

ಸಮಯ : ಸಂಜೆ 7.30. ಅವಧಿ : 90 ನಿಮಿಷ

ಸ್ಥಳ : ಕೆ.ಇ.ಎ ಪ್ರಭಾತ್ ರಂಗಮಂದಿರ ಬಸವೇಶ್ವರ ನಗರ. ಮ್ಯಾಕ್ಸ್ ಮುಲ್ಲರ್ ಶಾಲೆಯ ಹತ್ತಿರ.

ಅಭಿನಯಿಸುವ ತಂಡ : ಕಲಾವಿಲಾಸಿ ಬೆಂಗಳೂರು

ಟಿಕೆಟ್ ದರ : 100/-

"ಕಂಬನಿಯ ಕುಯಿಲು ಕಾದಂಬರಿಯ ಕಥಾವಸ್ತುವನ್ನು ಈ ರೀತಿಯ ಚಿಗರಿಗಂಗಳ ಚೆಲುವೆಯ ದೃಷ್ಟಿಯಲ್ಲಿ ವ್ಯಾಖ್ಯಾನಿಸಿ ನೋಡುಗರ ಮುಂದೆ ತರುವ ಪ್ರಯತ್ನವನ್ನು ಈ ಪ್ರಯೋಗದಲ್ಲಿ ಮಾಡಲಾಗಿದೆ" ಎಂದು ಕಲಾವಿಲಾಸಿ ತಂಡದವರು ತಿಳಿಸಿದ್ದಾರೆ.

ನಾಟಕದ ಕುರಿತು

ನಾಟಕದ ಕುರಿತು

‘ಚಿಗರಿಗಂಗಳ ಚೆಲುವೆ' ತ.ರಾ.ಸು(ತಳುಕು ರಾಮಸ್ವಾಮಯ್ಯ ಸುಬ್ಬರಾಯ) ಅವರು ಚಿತ್ರದುರ್ಗದ ಇತಿಹಾಸದ ಕುರಿತು ರಚಿಸಿರುವ ಸರಣಿ ಕಾದಂಬರಿಗಳಲ್ಲಿ ಮೊದಲ ಕಾದಂಬರಿಯಾದ ‘ಕಂಬನಿಯ ಕುಯಿಲು' ಕಾದಂಬರಿಯನ್ನು ಆಧರಿಸಿದ ನಾಟಕವಾಗಿರುತ್ತದೆ.

ಮದಕರಿ ನಾಯಕರ ಅಕಾಲ ಮರಣ ನಂತರ

ಮದಕರಿ ನಾಯಕರ ಅಕಾಲ ಮರಣ ನಂತರ

ಚಿತ್ರದುರ್ಗವನ್ನು ಸುಮಾರು ಇನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಆಳಿದ ರಾಜವಂಶಗಳ ಪೈಕಿ ಎರಡನೇ ಮದಕರಿ ನಾಯಕರ ಅಕಾಲ ಮರಣ ನಂತರ ಮುಂದಿನ ರಾಜಕುಮಾರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ, ಅರಮನೆಯವರ ಮತ್ತು ಸೇನೆಯವರ ನಡುವೆ ತಲೆದೋರುವ ಭಿನ್ನಾಭಿಪ್ರಾಯಗಳೇ ನಾಟಕದ ಪ್ರಮುಖ ವಸ್ತು. ಈ ಇಡೀ ಗೊಂದಲಮಯ ವಾತಾವಾರಣದಲ್ಲಿ ಆಡಳಿತದಲ್ಲಿ ಇದ್ದವರೇ ಅಲ್ಲದೆ ದುರ್ಗದಲ್ಲಿ ಸಾಮಾನ್ಯವಾಗಿ ಬದುಕುತ್ತಿದ್ದ ಕುಟುಂಬಗಳೂ ಕೂಡ ಈ ಒಡಕಿನ ಪರಿಣಾಮವನ್ನು ಎದುರಿಸಬೇಕಾಗಿ ಬರುತ್ತದೆ.

ಚಿಗರಿಗಂಗಳ ಚೆಲುವೆ-ಪದದ ಮೂಲ

ಚಿಗರಿಗಂಗಳ ಚೆಲುವೆ-ಪದದ ಮೂಲ

ಚಿಗರಿಗಂಗಳ ಚೆಲುವೆ, ವರಕವಿ ಬೇಂದ್ರೆ ಅವರ ಸಖೀಗೀತ ಕವನ ಸಂಕಲನದಲ್ಲಿ ಬರುವ ಕವಿತೆ. ಇಲ್ಲಿ ಬೇಂದ್ರೆ ಅವರು ಭೂಮಿಯನ್ನು ಚಿಗರಿಗಂಗಳ ಚೆಲುವೆ ಎನ್ನುತ್ತಾರೆ. ಪಕ್ಷಿ, ಪಶು, ಮಾನವ ಎಲ್ಲವನ್ನೂ ಜೀವವೆಂದು ಬಗೆಯದೆ ಜಡವಾಗಿ ಭಾವಿಸಿ ಭೂಮಿತಾಯಿಯನ್ನು ಹಿಂಸೆಗೊಳಿಸುವ ಯುಗಯುಗಗಳ ಗೋಳನ್ನು ಬೇಂದ್ರೆಯವರು ಈ ಪದ್ಯದ ಮೂಲಕ ವ್ಯಕ್ತಪಡಿಸುತ್ತಾರೆ. ಮನುಷ್ಯನ ಕ್ರೌರ್ಯಭರಿತ ದಾಹಕ್ಕೆ ಬಲಿಯಾಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಪ್ರತೀ ಹಸುಜೀವವೂ ನಮಗೆ ಚಿಗರಿಗಂಗಳ ಚೆಲುವೆಯಾಗಿ ಈ ಪದ್ಯದ ಭಾವದಲ್ಲಿ ಕಾಣಿಸಿಕೊಳ್ಳುತ್ತವೆ.

ಕಲಾವಿಲಾಸಿ ಕುರಿತು

ಕಲಾವಿಲಾಸಿ ಕುರಿತು

ಕಲಾವಿಲಾಸಿ 2018 ಜೂನ್ ತಿಂಗಳಿನಲ್ಲಿ ರಂಗಭೂಮಿ ಮತ್ತು ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವ ಆಶಯದಿಂದ ಕಾರ್ಯಾರಂಭ ಮಾಡಿದ ಕಲಾ ತಂಡ. ತಂಡದ ಮೊದಲ ನಾಟಕವಾಗಿ ಖ್ಯಾತ ಸಾಹಿತಿ ಬೀಚಿಯವರ ಜೀವನವನ್ನು ಆಧರಿಸಿದ ‘ಮಾನಸ ಪುತ್ರ' ಎಂಬ ನಾಟಕವನ್ನು ಬಸವರಾಜ ಎಮ್ಮಿಯವರ ಅವರ ನಿರ್ದೇಶನದಲ್ಲಿ ರಂಗದ ಮೇಲೆ ತಂದು ನಿರಂತರ ಪ್ರದರ್ಶನ ನೀಡಲಾಗುತ್ತಿದೆ. ಇದಲ್ಲದೇ ಆಟಾಮಾಟ ಧಾರವಾಡ ತಂಡದ ಪ್ರಮುಖ ನಾಟಕಗಳಾದ ‘ಮತ್ತೊಬ್ಬ ಮಾಯಿ', ‘ಮೋಹನ ಸ್ವಾಮಿ' ಮತ್ತು ‘ನುಲಿಯ ಚಂದಯ್ಯ' ನಾಟಕಗಳ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಚಿಗರಿಗಂಗಳ ಚೆಲುವೆ ಕಲಾವಿಲಾಸಿ ತಂಡದ ಎರಡನೇ ನಾಟಕ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kananda writer Ta. Ra. Su penned Kambaniya Kuyilu based Chigaringala cheluve Kannada drama will be staged at KEA Prabhath auditorium, Basaveshwar Nagar, Bengaluru on Oct 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more