ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಬಾಲಪಲ್ಲಿ ಪ್ರಕರಣ: ಎಲ್ಲಾ 32 ಆರೋಪಿಗಳು ಖುಲಾಸೆ

By Mahesh
|
Google Oneindia Kannada News

ಬೆಂಗಳೂರು, ಆ.21: ಕಂಬಾಲಪಲ್ಲಿ ದಲಿತರ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗುರುವಾರದಂದು ಎಲ್ಲಾ 32 ಆರೋಪಿಗಳನ್ನು ದೋಷಮುಕ್ತಗೊಳಿಸಿ ಖುಲಾಸೆ ನೀಡಿದೆ. ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿರುವ ದಲಿತ ಸಂಘರ್ಷ ಸಮಿತಿ 'ಇದು ದಲಿತ ವಿರೋಧಿ ಆದೇಶ' ಎಂದಿದೆ.

ಮಾರ್ಚ್ 11, 2000ರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಸಮೀಪದ ಕಂಬಾಲಪಲ್ಲಿ ಗ್ರಾಮದಲ್ಲಿ ರೆಡ್ಡಿ ಜನಾಂಗ ಹಾಗೂ ದಲಿತರ ನಡುವೆ ನಡೆದ ಸಂಘರ್ಷ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ಏಳು ದಲಿತರನ್ನು ಅವರ ಮನೆಯಲ್ಲೇ ಸುಟ್ಟು ಹಾಕಲಾಗಿತ್ತು.

ಘಟನೆ ನಂತರ ಕೆಂಚಾಳಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದರೆ, ಸೂಕ್ತ ಸಾಕ್ಷಿಗಳಿಲ್ಲದೆ ಪ್ರಕರಣಕುಂಠಿತವಾಗಿತ್ತು. ಕೋಲಾರದ ವಿಚಾರಣಾ ನ್ಯಾಯಲಯದಲ್ಲಿ ಈ ಹಿಂದೆ ಕೂಡಾ 32 ಮಂದಿಗೆ ಖುಲಾಸೆ ಸಿಕ್ಕಿತ್ತು.

Acquittal of Kambalapalli accused a setback to Dalits said Dalit Sangharsha Samiti

ನಂತರ ಅಂದಿನ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಪ್ರಮುಖವಾಗಿ ಆರೋಪಿಗಳನ್ನು ಗುರುತಿಸುವುದಕ್ಕೆ ಸಾಕ್ಷ್ಯಾಧಾರಗಳ ಕೊರತೆಯಿಂದ ಹೈಕೋರ್ಟ್ 32 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ.

ಕಂಬಾಲಪಲ್ಲಿ ದಲಿತದ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ನ್ಯಾ. ಮೋಹನ್ ಶಾಂತನಗೌಡರ್, ನ್ಯಾ. ಸಿ.ಆರ್ ಕುಮಾರಸ್ವಾಮಿ ಅವರಿದ್ದ ನ್ಯಾಯಪೀಠ ಖುಲಾಸೆಗೊಳಿಸಿದೆ. ಆರೋಪಿಗಳಿಗೆ ಖುಲಾಸೆ ನೀಡಿರುವುದರಿಂದ ಸರ್ಕಾರ ಈ ಆದೇಶಪ್ರಶ್ನಿಸಿ ಪುನರ್ಪರಿಶೀಲನಾ ಅರ್ಜಿ ಹಾಕಬಹುದು ಅಥವಾ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗುವ ಸಾಧ್ಯತೆಯಿದೆ.

2000 ಮಾರ್ಚ್ 11ರಂದು ನಡೆದ ಹತ್ಯಾಕಾಂಡ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕಂಬಾಲಪಲ್ಲಿ ಪ್ರಕರಣದ ನಂತರ ಊರಿಗೆ ಊರೇ ಖಾಲಿಯಾಗಿತ್ತು.ಘಟನೆ ಬಳಿಕ ಸುಮಾರು 66 ಸಂತ್ರಸ್ತ ದಲಿತ ಕುಟುಂಬಗಳಿಗೆ ಚಿಂತಾಮಣಿ ಹೊರ ವಲಯದಲ್ಲಿ 'ಮಿನಿ ಕಂಬಾಲಪಲ್ಲಿ' ಸ್ಥಾಪಿಸಲಾಯಿತು. ಉತ್ತಮ ಮನೆಗಳನ್ನು ಕಟ್ಟಲಾಯಿತು. ಶಾಲೆ, ಸಮುದಾಯ ಭವನ, ಪೊಲೀಸ್‌ ಹೊರ ಠಾಣೆ, ಬೋರ್‌ ವೆಲ್‌, ಸೋಲಾರ್‌ ಬೀದಿದೀಪ, ನೀರು ಪೂರೈಕೆ ಟ್ಯಾಂಕ್ ಗಳು ಮಿನಿ ಕಂಬಾಲಪಳ್ಳಿಯಲ್ಲಿ ತಲೆಎತ್ತಿತ್ತು.

ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಸಂತ್ರಸ್ತ ಕುಟುಂಬದ ಯುವಕರಿಗೆ ಉದ್ಯೋಗ ಭರವಸೆ ನೀಡಲಾಯಿತು. ಕೆಲವರು ಇಂದಿಗೂ ಚಿಂತಾಮಣಿಯ ಸಿಮೆಂಟ್ ಘಟಕ, ಮಿಲ್ ಗಳಲ್ಲಿ ದುಡಿಯುತ್ತಿದ್ದಾರೆ. ಆದರೆ, ಹಲವರು ಇನ್ನೂ ಸೌಲಭ್ಯ ವಂಚಿತರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಹೇಳಿದೆ.

English summary
Acquittal of Kambalapalli accused a setback to Dalits said Dalit Sangharsha Samiti after hearing the order from Karnataka High Court. HC today acquitted all 32 accused in the case. Seven Dalits were burnt alive in their house in Kambalpalli village near Chintamani in Kolar district in March 11, 2000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X