ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ -ಎಂಜಿ ರಸ್ತೆ ನಡುವಿನ ಕಾಮರಾಜ ರಸ್ತೆ 4 ವರ್ಷ ಬಂದ್

|
Google Oneindia Kannada News

ಬೆಂಗಳೂರು, ಜೂನ್ 17: ಕಬ್ಬನ್ ರಸ್ತೆ ಹಾಗೂ ಎಂಜಿ ರಸ್ತೆ ನಡುವಿನ ಕಾಮರಾಜ ರಸ್ತೆಯ ಮಾರ್ಗ 4 ವರ್ಷಗಳ ಕಾಲ ಬಂದ್ ಆಗಲಿದೆ.

ನಾಗವಾರ ಗೊಟ್ಟಿಗೆರೆ ನಮ್ಮ ಮೆಟ್ರೋ ಮಾರ್ಗದ ಮೆಟ್ರೋ ಸುರಂಗ ನಿಲ್ದಾಣ ಕಾರ್ಯ ಆರಂಭವಾಗುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಮೆಟ್ರೋ ಸುರಂಗ ಮಾರ್ಗ ಕಾರ್ಯ: ನಾಳೆಯಿಂದ ಎಂಜಿ ರಸ್ತೆಯಲ್ಲಿ ಹೆವಿ ಟ್ರಾಫಿಕ್ ಮೆಟ್ರೋ ಸುರಂಗ ಮಾರ್ಗ ಕಾರ್ಯ: ನಾಳೆಯಿಂದ ಎಂಜಿ ರಸ್ತೆಯಲ್ಲಿ ಹೆವಿ ಟ್ರಾಫಿಕ್

ಸುಮಾರು200 ಮೀಟರ್ ಉದ್ದದ ರಸ್ತೆಯಡಿಯಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ನಾಲ್ಕು ಎಂಟ್ರಿ ಹಾಗೂ ನಾಲ್ಕು ಎಕ್ಸಿಟ್ ಪಾಯಿಂಟ್‌ಗಳು ಬರಲಿವೆ.

ಒಟ್ಟು 14 ಕಿ.ಮೀ ಉದ್ದದ ಸುರಂಗ ಮಾರ್ಗ ಇದಾಗಿದ್ದು, ಎಲ್ಲಾ ಮೆಟ್ರೋ ಸುರಂಗ ಮಾರ್ಗಕ್ಕಿಂತಲೂ ಇದು ಅತಿ ಉದ್ದದ ಮಾರ್ಗವಾಗಿದೆ.

ಲಾರ್ಸನ್ ಹಾಗೂ ಟರ್ಬೋ ಕಂಪನಿಯು ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರ(2.7 ಕಿ.ಮೀ), ಶಿವಾಜಿನಗರದಿಂದ ಪಾಟರಿ ಟೌನ್ (2.8) ಕಿ.ಮೀ ಮಾರ್ಗದಲ್ಲಿ ಸುರಂಗ ಮೆಟ್ರೋ ಮಾರ್ಗ ನಿರ್ಮಿಸಲು ಗುತ್ತಿಗೆ ತೆಗೆದುಕೊಂಡಿದೆ. ಮಾರ್ಚ್ ತಿಂಗಳಿನಿಂದ ಬಿಎಂಆರ್‌ಸಿಎಲ್ ಈ ಪ್ರದೇಶದಲ್ಲಿ ಮಣ್ಣಿನ ಪರಿಶೀಲನೆಯನ್ನು ಮಾಡುತ್ತಿದೆ.

ಐದು ಸುರಂಗ ಮೆಟ್ರೋ ಮಾರ್ಗಗಳು ಬರಲಿವೆ

ಐದು ಸುರಂಗ ಮೆಟ್ರೋ ಮಾರ್ಗಗಳು ಬರಲಿವೆ

ಕಾಮರಾಜ ರಸ್ತೆಯಲ್ಲಿ ಒಟ್ಟು ಐದು ಸುರಂಗ ಮೆಟ್ರೋ ನಿಲ್ದಾಣಗಳು ಬರಲಿವೆ. ಒಟ್ಟು 2,628 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ನಮ್ಮ ಮೆಟ್ರೋ ಎರಡನೇ ಹಂತದ ನಾಗವಾರ, ಗೊಟ್ಟಿಗೆರೆ ಮಾರ್ಗದಲ್ಲಿ ಈ ನಿಲ್ದಾಣಗಳು ಬರಲಿವೆ. ಈ ಮಾರ್ಗದಲ್ಲಿ 12 ಸುರಂಗ ನಿಲ್ದಾಣಗಳು ಬರಲಿವೆ.

ಮೊದಲ ಬಾರಿಗೆ ಮಾರ್ಗ ಸಂಪೂರ್ಣ ಬಂದ್, ಸರ್ವೀಸ್ ರಸ್ತೆ ಇಲ್ಲ

ಮೊದಲ ಬಾರಿಗೆ ಮಾರ್ಗ ಸಂಪೂರ್ಣ ಬಂದ್, ಸರ್ವೀಸ್ ರಸ್ತೆ ಇಲ್ಲ

ಮೊದಲ ಬಾರಿಗೆ ಒಂದು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಕಾರ್ಯ ಕೈಗೊಳ್ಳುತ್ತಿದೆ. ಹೀಗಾದಾಗ ಕಾಮಗಾರಿ ಬೇಗ ಪೂರ್ಣಗೊಳ್ಳುತ್ತದೆ ಎಂಬ ಭರವಸೆಯನ್ನೂ ಹುಟ್ಟುಹಾಕುತ್ತದೆ. ಕಾರ್ಯ ಆರಂಭಿಸುವ ಮುನ್ನ ಸಾಮಾನ್ಯವಾಗಿ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ವಿಧಾನಸೌಧ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವಾಗಲೂ ಕೂಡ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿತ್ತು.

ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹತ್ತಿದಲ್ಲಿ ಜಾಗವಿಲ್ಲ

ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹತ್ತಿದಲ್ಲಿ ಜಾಗವಿಲ್ಲ

ನಮ್ಮ ಮೆಟ್ರೋ ನಿಲ್ದಾಣವನ್ನು ಹಾಗೂ ಮಾರ್ಗವನ್ನು ನಿರ್ಮಿಸಲು ಹತ್ತಿರದಲ್ಲಿ ಎಲ್ಲಿಯೂ ಜಾಗ ಲಭ್ಯವಾಗಲಿಲ್ಲ, ಒಂದೆಡೆ ಪರೇಡ್ ಗ್ರೌಂಡ್, ಇನ್‌ಸ್ಟಿಟ್ಯೂಷನ್ ಮತ್ತೊಂದು ಕಡೆ. ಸ್ಟೇಷನ್ ಎಂಟ್ರೆನ್ಸ್ ನಿರ್ಮಾಣ ಮಾಡಲು ಜಾಗವನ್ನು ನೀಡುವುದಾಗಿ ಒಪ್ಪಿದ್ದರು. ವಿವಿಧ ಪರ್ಯಾಯ ಮಾರ್ಗಗಳಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ಸವಾರರು ಹೇಗೆ ಸಂಚರಿಸಬೇಕು

ವಾಹನ ಸವಾರರು ಹೇಗೆ ಸಂಚರಿಸಬೇಕು

ಬ್ರಿಗೆಡ್ ರಸ್ತೆ, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಹೋಗುವ ವಾಹನ ಸವಾರರು ಕಾಮರಾಜ್ ರಸ್ತೆಯಲ್ಲಿ ಬಲ ತಿರುವು ಪಡೆದುಕೊಳ್ಳಬೇಕು ಅಲ್ಲಿಂದ ಕಬ್ಬನ್ ರಸ್ತೆ, ಮೂಲಕ ಬಿಆರ್‌ವಿ ಜಂಕ್ಷನ್ ತಲುಪಿ ಮುಂದುವರೆಯಬೇಕು. ಆಂಜನೇಯ ಟೆಂಪಲ್ ಜಂಕ್ಷನ್‌ಲ್ಲಿ ಬಸ್‌ಗಳ ಸಂಚಾರ ನಿರ್ಬಂಧಿಸಲಾಗಿದೆ. ಸ್ವಾಮಿ ವಿವೇಕಾನಂದ ರಸ್ತೆ-ಹಲಸೂರು ಸ್ಟೇಷನ್, ಟ್ರಿನಿಟಿ ವೃತ್ತ, ರಿಚ್‌ಮಂಡ್ ರೋಡ್ ಕಾರಿಡಾರ್ ಮೂಲಕವೇ ಚಲಿಸಬೇಕು.

English summary
MG Road Cubbon road between the Kamaraj road should be closed for 4 years due to Metro work. about 200 metre long road closed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X