ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕದ್ದ ಬೈಕ್‌ನ್ನು ಪೊಲೀಸ್ ಬೈಕ್ ಅನ್ನಾಗಿ ಪರಿವರ್ತಿಸಿ OLX ನಲ್ಲಿ ಮಾರಾಟ!

|
Google Oneindia Kannada News

ಬೆಂಗಳೂರು, ಜು. 29: ರಾಜಸ್ಥಾನದಿಂದ ವಿಮಾನದಲ್ಲೇ ಬೆಂಗಳೂರಿಗೆ ಬರುತ್ತಿದ್ದರು. ಇಲ್ಲಿ ಎರಡು ಮೂರು ತಾಸು ಬ್ಯುಸಿನೆಸ್ ಮಾಡಿ ಲಕ್ಷಾಂತರ ರೂಪಾಯಿ ಗಳಿಕೆಯೊಂದಿಗೆ ವಾಪಸು ಪ್ಲೈಟ್‌ನಲ್ಲಿಯೇ ಹೊರಟು ಹೋಗುತ್ತಿದ್ದರು. ಇದು ಯಾವುದೇ ಮಾರ್ವಡಿ ವ್ಯಾಪಾರವಲ್ಲ. ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಐಷಾರಾಮಿ ಬೈಕ್ ಕದ್ದು ವಾಪಸು ಆಗುತ್ತಿದ್ದ ಅಂತರಾಜ್ಯ ಕಳ್ಳ ಗ್ಯಾಂಗ್‌ನ ರಿಯಲ್ ಸ್ಟೋರಿ!

ರಾಜಸ್ಥಾನ ಮೂಲದ ಮೂವರು ಬೈಕ್ ಕಳ್ಳರು ಸೆರೆ: ರಾಜಸ್ಥಾನದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಐಷಾರಾಮಿ ಬೈಕ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬೆಂಗಳೂರಿನಲ್ಲಿ ಕಳುವು ಆಗಿದ್ದ 33 ಲಕ್ಷ ರೂ. ಮೌಲ್ಯದ 26 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಿಕಾಸ್ ಕುಮಾರ್, ದವಲ್ ದಾಸ್ ಹಾಗೂ ದಶರತ್ ಬಂಧಿತ ಆರೋಪಿಗಳು. ಬೆಂಗಳೂರಿನಲ್ಲಿ ಕದ್ದ ಬೈಕ್ ಗಳನ್ನು ಟ್ರೇನ್ ಮೂಲಕ ರಾಜಸ್ತಾನಕ್ಕೆ ಸಾಗಿಸುತ್ತಿದ್ದರು.

Kamakshipalya police arrested a interstate Bike theft gang !

ಕೆಟಿಎಂ ಮತ್ತು ಎನ್‌ಫಿಲ್ಡ್ ಟಾರ್ಗೆಟ್: ಬಂಧಿತ ಆರೋಪಿಗಳು ಸಣ್ಣ ಪುಟ್ಟ ಬೈಕ್‌ಗಳನ್ನು ಮುಟ್ಟುತ್ತಿರಲಿಲ್ಲ. ಕೇವಲ ಕೆಟಿಎಂ ಡ್ಯೂಕ್, ರಾಯಲ್ ಎನ್‌ಫೀಲ್ಡ್ ನಂಥ ದುಬಾರಿ ಬೈಕ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಕದ್ದ ಬೈಕ್‌ಗಳನ್ನು ಕೇವಲ ಐವತ್ತು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಹೀಗೆ ಸುಮಾರು ಬೈಕ್‌ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿದ್ದರು. ಮೂವರು ಆರೋಪಿಗಳಿಂದ ಬೈಕ್ ಖರೀದಿಸಿದವರು ಇದೀಗ ಪೊಲೀಸರ ತನಿಖೆ ಎದುರಿಸುವಂತಾಗಿದೆ.

Kamakshipalya police arrested a interstate Bike theft gang !

ಎಟಿಎಂಗೆ ಕನ್ನ ಹಾಕಿದ್ದ ಖದೀಮರು:
ಬಂಧಿತ ಆರೋಪಿಗಳ ವಿಚಾರಣೆ ವೇಳೆ ಯಶವಂತಪುರದ ಎಪಿಎಂಸಿ ಯಾರ್ಡ್ ಸಮೀಪ ಎಟಿಎಂ ಕಳುವು ಮಾಡಲು ಆರೋಪಿಗಳು ಯತ್ನಿಸಿದ್ದರು. ಮೆಕಾನಿಕ್ ಆಗಿದ್ದ ವಿಕಾಸ್ ಗ್ಯಾಸ್ ಕಟ್ಟರ್ ಬಳಿಸಿ ಎಟಿಎಂ ದೋಚಲು ಯತ್ನಿಸಿದ್ದ. ಅದು ಕೈಗೂಡದ ವೇಳೆ ಬೈಕ್‌ಗಳನ್ನು ಕಳುವು ಮಾಡಿ ಯಶಸ್ಸು ಗಳಿಸಿದ್ದ. ಮೂವರು ಆರೋಪಿಗಳು ಯಶವಂತಪುರದ ಸಮೀಪ ಎಟಿಎಂ ರಾಬರಿ ಮಾಡಲು ಯತ್ನಿಸಿದ್ದ ಪ್ರಕರಣ ಕೂಡ ಇದೀಗ ಪತ್ತೆಯಾಗಿದೆ.

Kamakshipalya police arrested a interstate Bike theft gang !

Recommended Video

Congress ಪಕ್ಷ ಸೇರಿಕೊಂಡ ಮಧು ಬಂಗಾರಪ್ಪ | Siddaramaiah | DK Shivakumar | Hubli | Oneindia Kannada

ಪಿಎಸ್ಐ ಹೆಸರಿನಲ್ಲಿ ಕಳ್ಳರು ಬೈಕ್ ಮಾರಾಟ: ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕದ್ದಿರುವ ಬೈಕ್‌ಗಳನ್ನು ಆಂಧ್ರಹಳ್ಳಿಯ ಖಾಲಿ ನಿವೇಶನದ ಬಳಿ ನಿಲ್ಲಿಸುತ್ತಿದ್ದರು. ಮೂರು ದಿನ ಕಾಯುತ್ತಿದ್ದರು. ಒಎಲ್ ಎಕ್ಸ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಡುವ ದಾಖಲೆಗಳನ್ನು ಪಡೆದು ಅಸಲಿ ದಾಖಲೆ ಎಂಬಂತೆ ನಂಬರ್ ಪ್ಲೇಟ್ ಹಾಕುತ್ತಿದ್ದರು. ಹೀಗೆ ನಕಲಿ ಆರ್‌ಸಿ ಹಾಗೂ ಬೈಕ್ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಬೈಕ್‌ಗಳನ್ನು ಒಎಲ್‌ಎಕ್ಸ್ ನಲ್ಲಿಯೇ ಮಾರಾಟ ಮಾಡುತ್ತಿದ್ದರು. ಕದ್ದ ಬೈಕ್ ಗೆ ಪೊಲೀಸ್ ಸಬ್ ಇನ್ಸಪೆಕ್ಟರ್ ಎಂಬ ಹೆಸರಿನಲ್ಲಿ ಸ್ಟಿಕ್ಕರ್ ಹಾಕಿದ್ದರು. ಮಾತ್ರವಲ್ಲ ಪೊಲೀಸರ ಸೈರನ್ ಕೂಡ ಹಾಕಿಸಿ ಮಾರಾಟ ಮಾಡಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

English summary
Kamakshipaly police have arrested interstate thieves who stole expensive bikes and sold them at OLX in Bengaluru. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X