ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಗ್ಗದಾಸಪುರ ಕೆರೆಯಲ್ಲಿ ನೊರೆ, ಮನೆಗಳ ಬಾಗಿಲೂ ತೆರೆಯುವಂತಿಲ್ಲ

|
Google Oneindia Kannada News

ಬೆಂಗಳೂರು, ಜನವರಿ 10: ಸಿವಿ ರಾಮನ್‌ ನಗರದಲ್ಲಿರುವ ಕಗ್ಗದಾಸಪುರ ಕೆರೆಯಲ್ಲಿ ನೊರೆಯು ಉಕ್ಕುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಅಷ್ಟೇ ಅಲ್ಲದೆ ಆ ನೊರೆ ಅಲ್ಲಿ ಸುತ್ತಮುತ್ತಲಿರುವ ಮನೆಗಳಿಗೆ ಹಾರಿ ಬರುತ್ತಿದ್ದು, ಬೆಳಗ್ಗೆ, ರಾತ್ರಿಎನ್ನದೆ ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚಿಯೇ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯಕ್ಕೆ ಎನ್‌ಜಿಟಿ ಎದುರು ಭಾರಿ ಮುಖಭಂಗ: 75 ಕೋಟಿ ದಂಡ ರಾಜ್ಯಕ್ಕೆ ಎನ್‌ಜಿಟಿ ಎದುರು ಭಾರಿ ಮುಖಭಂಗ: 75 ಕೋಟಿ ದಂಡ

ಬೆಳ್ಳಂದೂರು, ವರ್ತೂರು ಕೆರೆ ಬಳಿಕ ಇದೀಗ ಕಗ್ಗದಾಸಪುರ ಕೆರೆಯಲ್ಲೂ ನೊರೆ ಸಮಸ್ಯೆ ಎದುರಾಗಿದೆ. ಇದಕ್ಕೂ ಮುನ್ನ ಕೆಲವು ಬಾರಿ ಈ ರೀತಿಯಾಗಿದೆ. ಮನೆಯಲ್ಲಿರುವ ಮೆಟಲ್ ವಸ್ತುಗಳೆಲ್ಲವೂ ಮಾಲಿನ್ಯದಿಂದಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ ಮತ್ತೆ ದುರ್ವಾಸನೆಯೂ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Kaggadasapura Lake froths; residents fume

ಸೆಪ್ಟಿಕ್ ಟ್ಯಾಂಕ್‌ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ ಸೆಪ್ಟಿಕ್ ಟ್ಯಾಂಕ್‌ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ

ಈ ಕೆರೆಯು ಸುಮಾರು 41 ಎಕರೆ ವಿಸ್ತೀರ್ಣದಲ್ಲಿದೆ. ಇದು ಬಿಬಿಎಂಪಿ ವ್ಯಾಪ್ತಿಗೆ ಸೇರುತ್ತದೆ. ಹಾಗೆಯೇ ಸ್ಥಳೀಯರೆಲ್ಲ ಸೇರಿ ಎಸ್‌ಟಿಪಿ ಅಳವಡಿಕೆಗೆ ಐದು ಎಕರೆ ಜಾಗವನ್ನು ಜಲಮಂಡಳಿಗೆ ಬಿಟ್ಟು ಕೊಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.ಸುತ್ತ ಮುತ್ತ ಇರುವ ಕಾರ್ಖಾನೆಗಳ ಕಲುಷಿತ ನೀರು ಕೆರೆಗೆ ಬಂದು ಸೇರುವುದರಿಂದ ತೊಂದರೆ ಹೆಚ್ಚಾಗಿದೆ.

English summary
Kaggadasapura Lake, near CV Raman Nagar in east Bengaluru, on Wednesday began frothing, sending foam flying into the neighbourhood. Residents from areas abutting the water body were forced to close their doors and windows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X