ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೆಂಬರ್ 25ರಿಂದ ಬಸವನಗುಡಿ ಕಡಲೆಕಾಯಿ ಪರಿಷೆ

|
Google Oneindia Kannada News

ಬೆಂಗಳೂರು, ನವೆಂಬರ್ 17 : ಬೆಂಗಳೂರಿನ ಬಸವನಗುಡಿ ಐತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಸಿದ್ಧವಾಗಿದೆ. ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಮೂರು ದಿನಗಳ ಕಾಲ ಪರಿಷೆ ನಡೆಯುತ್ತದೆ.

ನವೆಂಬರ್ 25ರ ಸೋಮವಾರ ಈ ವರ್ಷದ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗಲಿದೆ. ನವೆಂಬರ್ 23, 24ರಿಂದಲೇ ಜನರು ಬಸವನಗುಡಿಗೆ ಬಂದು ಬುಲ್ ಟೆಂಪಲ್ ರಸ್ತೆಯಲ್ಲಿ ಕಡಲೆಕಾಯಿಯ ರುಚಿ ಸವಿಯುತ್ತಾರೆ.

ಅನಂತ ಕುಮಾರ್ ಇಲ್ಲದ ಬಸವನಗುಡಿ ಕಡಲೆಕಾಯಿ ಪರಿಷೆ ಅನಂತ ಕುಮಾರ್ ಇಲ್ಲದ ಬಸವನಗುಡಿ ಕಡಲೆಕಾಯಿ ಪರಿಷೆ

ನವೆಂಬರ್ 25, 26 ಮತ್ತು 27ರಂದು ಈ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದೆ. ಈಗಾಗಲೇ ದೊಡ್ಡ ಗಣಪತಿ ದೇವಾಲಯ ಸುತ್ತಮುತ್ತಲು ಅಂಗಡಿಗಳಲ್ಲಿ ಕಡಲೆಕಾಯಿ ವ್ಯಾಪಾರ ಜೋರಾಗಿದೆ. ಜನರು ಸಹ ಆಗಮಿಸುತ್ತಾರೆ.

ಸಾಂಸ್ಕೃತಿಕ ಪ್ರವಾಸಿ ಕೇಂದ್ರವಾಗಿ ಬಸವನಗುಡಿ ಅಭಿವೃದ್ಧಿ: ರವಿ ಸುಬ್ರಹ್ಮಣ್ಯ ಸಾಂಸ್ಕೃತಿಕ ಪ್ರವಾಸಿ ಕೇಂದ್ರವಾಗಿ ಬಸವನಗುಡಿ ಅಭಿವೃದ್ಧಿ: ರವಿ ಸುಬ್ರಹ್ಮಣ್ಯ

 Kadalekai Parishe 2019 From November 25

ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ ಮಾತ್ರವಲ್ಲೇದೇ ತಮಿಳುನಾಡು, ಆಂಧ್ರಪ್ರದೇಶದ ರೈತರು ಪಾಲ್ಗೊಳ್ಳುತ್ತಾರೆ. ಪರಿಷೆ ಸಂದರ್ಭದಲ್ಲಿ 1 ಸಾವಿರಕ್ಕೂ ಅಧಿಕ ಅಂಗಡಿಗಳು ಇರುತ್ತವೆ. ಕಳೆದ ವರ್ಷ ಪರಿಷೆಗೆ 7 ಲಕ್ಷ ಜನರು ಭೇಟಿ ನೀಡಿದ್ದರು.

ಕಡಲೆಕಾಯಿ ಪರಿಷೆ! ಶ್ರದ್ಧೆ ಸಂಭ್ರಮದ ಜಾತ್ರೆ ಕಡಲೆಕಾಯಿ ಪರಿಷೆ! ಶ್ರದ್ಧೆ ಸಂಭ್ರಮದ ಜಾತ್ರೆ

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಗೌರಿ ಬಿದನೂರು, ತುಮಕೂರು, ಚಿಂತಾಮಣಿ, ಕನಕಪುರ, ಮಾಗಡಿ, ರಾಮನಗರ ಭಾಗದ ರೈತರು ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

"ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರೈತರು ಹೆಚ್ಚಾಗಿ ಕಡಲೆಕಾಯಿ ಬೆಳೆದಿದ್ದಾರೆ. ಪರಿಷೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಕಡಲೆಕಾಯಿ ಬರಲಿದೆ. ಉತ್ತಮ ಮಾರಾಟವೂ ಆಗುವ ನಿರೀಕ್ಷೆ ಇದೆ" ಎಂದು ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ರವಿಸುಬ್ರಮಣ್ಯ ಹೇಳಿದರು.

English summary
Bengaluru Basavanagudi all set for Kadalekai Parishe 2019. Kadalekai Parishe will be held form November 25 to three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X