ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೂಟೌಟ್ ಪ್ರಕರಣ: ಅಗ್ನಿ ಶ್ರೀಧರ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಆರೋಪಿಯಾಗಿರುವ ಪತ್ರಕರ್ತ ಅಗ್ನಿ ಶ್ರೀಧರ್ ಅವರಿಗೆ ಸೆಷನ್ಸ್ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 10: ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಆರೋಪಿಯಾಗಿರುವ ಪತ್ರಕರ್ತ ಅಗ್ನಿ ಶ್ರೀಧರ್ ಅವರಿಗೆ ಶುಕ್ರವಾರ(ಫೆಬ್ರವರಿ 10) ಸೆಷನ್ಸ್ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಅಗ್ನಿ ಶ್ರೀಧರ್ ಅವರು ಸದ್ಯ ಅಪೋಲೋ ಆಸ್ಪತ್ರೆಯಲ್ಲಿ ಎದೆನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿ ಶ್ರೀಧರ್ ಗೆ 15 ದಿನಗಳ ಕಾಲ ಮಾತ್ರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. [ಶೂಟೌಟ್ ಕೇಸ್ : ಇನ್ನಿಬ್ಬರು ರೌಡಿ ಶೀಟರ್ ಗಳ ಬಂಧನ]


53ನೇ ಸೆಷನ್ಸ್ ನ್ಯಾಯಾಲಯದಿಂದ ತನ್ನ ಕಕ್ಷಿದಾರನಿಗೆ ಜಾಮೀನು ಕೊಡಿಸುವಲ್ಲಿ ಹಿರಿಯ ವಕೀಲ ಸಿ ಹೆಚ್ ಹನುಮಂತರಾಯ ಅವರು ಯಶಸ್ವಿಯಾದರು.

kadabagere Srinivas Shootout case: Agni Sreedhar gets interim anticipatory bail

ಫೆಬ್ರವರಿ 7ರಂದು ಕುಮಾರಸ್ವಾಮಿ ಲೇ ಔಟ್ ನಲ್ಲಿರುವ ಅಗ್ನಿ ಶ್ರೀಧರ್ ಅವರ ಮನೆ ಮೇಲೆ ಬೆಂಗಳೂರಿನ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಅಗ್ನಿ ಶ್ರೀಧರ್ ಸೇರಿದಂತೆ 11 ಜನರ ಮೇಲೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪದಡಿ ಕೆ.ಎಸ್. ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದ ಸೈಯದ್ ಅಲಿಯಾಸ್ ಬಚ್ಚನ್ ಹಾಗೂ ಆತನ ಸಹಚರರಾದ ಬ್ರಿಜ್​ಭೂಷಣ್ ಹುಸೇನ್ ಪಾಂಡೆ, ರಾಮ್ ಕುಮಾರ್ ರಾಯ್, ಸಾಬೀರ್ ಅಲಿ, ತನ್ವೀರ್, ಅರುಣ್​ಕುಮಾರ್, ವರುಣ್​ಕುಮಾರ್​ನನ್ನು 14 ದಿನಗಳ ಕಾಲ ಯಲಹಂಕ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.

English summary
Kadabagere Srinivas Shootout case: Journalist Agni Sreedhar gets interim anticipatory bail from Session court in Bengaluru. Bacchan and other are sent to 14 days police custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X