ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಲಾ' ಚಿತ್ರಕ್ಕೆ ಬೆಂಗಳೂರಲ್ಲಿ ಹಿನ್ನಡೆ, ಮಾಲ್‌ಗಳಲ್ಲಿ ಪ್ರದರ್ಶನ ಸಾಧ್ಯತೆ

By Manjunatha
|
Google Oneindia Kannada News

ಬೆಂಗಳೂರು, ಜೂನ್ 07: ಇಂದು ರಜನೀಕಾಂತ್ ಅಭಿನಯದ 'ಕಾಲಾ' ಚಿತ್ರ ಬಿಡುಗಡೆ ಆಗಿದ್ದು, ಬೆಂಗಳೂರಿನಲ್ಲಿ ಎಲ್ಲಾ ಮಾಲ್‌ಗಳು ಹಾಗೂ ಪ್ರಮುಖ ಚಿತ್ರಮಂದಿರಗಳಿಗೆ ಬಿಗಿ ಭದ್ರತೆ ನೀಡಲಾಗಿದೆ.

ಬೆಳಿಗ್ಗೆ 10 ಗಮಟೆ ವರೆಗೂ ಬೆಂಗಳೂರಿನ ಯಾವುದೇ ಚಿತ್ರಮಂದಿರಗಳಲ್ಲಿ ಕಾಲಾ ಪ್ರದರ್ಶನ ಕಂಡಿರಲಿಲ್ಲ. ಆದರೆ ಮಂತ್ರಿ ಮಾಲ್, ಲಿಡೋ ಥಿಯೇಟರ್, ಗರುಡಾ ಮಾಲ್‌ನಲ್ಲಿ 'ಕಾಲಾ' ಚಿತ್ರ ಪ್ರದರ್ಶನ ಮಾಡುವ ಸಾಧ್ಯತೆ ಇದೆ. ಹಾಗಾಗಿ ಈ ಮಾಲ್‌ಗಳಿಗೆ ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

ಫೇಸ್‌ಬುಕ್‌ನಲ್ಲಿ ಲೈವ್‌ ಬಂದ 'ಕಾಲಾ': ಸಿಂಗಪುರದಲ್ಲಿ ಯುವಕನ ಬಂಧನ ಫೇಸ್‌ಬುಕ್‌ನಲ್ಲಿ ಲೈವ್‌ ಬಂದ 'ಕಾಲಾ': ಸಿಂಗಪುರದಲ್ಲಿ ಯುವಕನ ಬಂಧನ

ಟ್ರಿನಿಟಿ ವೃತ್ತದ ಲಿಡೋ ಚಿತ್ರಮಂದಿರದಲ್ಲಿ 'ಕಾಲಾ' ಚಿತ್ರದ ಪ್ರದರ್ಶನ ಮಾಡಲಾಗುತ್ತದೆ ಎಂಬ ಮಾಹಿತಿ ಇದ್ದ ಕಾರಣ ಕನ್ನಡ ಸಂಘಟನೆ ಹೋರಾಟಗಾರರು ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಿದರು. ಈ ಸಮಯದಲ್ಲಿ ರಜನೀಕಾಂತ್ ಅಭಿಮಾನಿಗಳು ಹಾಗೂ ಸಂಘಟನೆ ಸದಸ್ಯರ ಜೊತೆಗೆ ವಾಗ್ವಾದ ನಡೆಯಿತು.

Kaala not released in Bengaluru. Mals may release the movie

ಲಿಡೋದಲ್ಲಿ ಕಾಲಾ ಚಿತ್ರಕ್ಕೆ ಈಗಾಗಲೇ ಟಿಕೆಟ್ ಸಹ ವಿತರಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಲಿಡೋ ಚಿತ್ರದ ಮುಂದೆ ಪ್ರತಿಭಟನೆಗಳು ಜೋರಾಗಿದ್ದು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ತಮಿಳು ಚಿತ್ರಗಳನ್ನು ಹೆಚ್ಚಾಗಿ ಪ್ರದರ್ಶಿಸುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಾದ ಊರ್ವಶಿ, ನಟರಾಜ, ಸಂಪಿಗೆ, ವಿನಾಯಕ ಚಿತ್ರಮಂದಿರಗಳಲ್ಲಿ 'ಕಾಲಾ' ಪ್ರದರ್ಶನ ಮಾಡುತ್ತಿಲ್ಲ. ಆ ಚಿತ್ರಮಂದಿರಗಳಲ್ಲಿ ಬೇರೆ ಚಿತ್ರಗಳ ಪ್ರದರ್ಶನವನ್ನು ಮುಂದುವರೆಸಿವೆ.

ಬೆಂಗಳೂರಿನ ಚಿತ್ರಮಂದಿರಗಳಲ್ಲಿ 'ಕಾಲಾ'ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ

ನಟ ರಜನೀಕಾಂತ್ ಅವರು ಕಾವೇರಿ ವಿಷಯದ ಬಗ್ಗೆ ಕನ್ನಡಿಗರಿಗೆ ನೋವಾಗುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆಂದು ಅವರ ಅಭಿನಯದ 'ಕಾಲಾ' ಚಿತ್ರವನ್ನು ಬಿಡುಗಡೆ ಮಾಡಬಾರದೆಂದು ಕನ್ನಡಪರ ಸಂಘಟನೆಗಳು ಮತ್ತು ಇತರ ಕೆಲವು ಸಂಘಟನೆಗಳು ಹೋರಾಟ ಮಾಡುತ್ತಿವೆ.

ಕಾಲಾ ಚಿತ್ರ ಪ್ರದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, 1000 ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಕೆಎಸ್‌ಆರ್‌ಪಿ ತುಕಡಿಯನ್ನೂ ಬಳಸಿಕೊಳ್ಳಲಾಗಿದೆ.

English summary
Kaala movie has not been released by any single screen theaters in bengaluru. But Mals like Mantri, Garuda, Lido may screen the movie. Kannada organization members protesting against the movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X