ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ' ಪುಸ್ತಕ ಲೋಕಾರ್ಪಣೆ

By Vanitha
|
Google Oneindia Kannada News

ಬೆಂಗಳೂರು, ನವೆಂಬರ್, 07 : ಡಾ.ಗಜಾನನ ಶರ್ಮಾ ಬರೆದಿರುವ "ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ" ಪುಸ್ತಕದ ಲೋಕಾರ್ಪಣ ಸಮಾರಂಭ ಚರಕ ಆಡಿಟೋರಿಯಂ, ಪ್ರಶಾಂತಿ ಆಯುರ್ವೇದಿಕ್ ಸೆಂಟರ್, ರಾಜಾಜಿ ನಗರದಲ್ಲಿ ನವೆಂಬರ್ 8ರ ಭಾನುವಾರದಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ.

ರಾಗಬೈರಾಗಿ ಗರ್ತಿಕೆರೆ ರಾಘಣ್ಣ ಅವರು 80 ವರ್ಷ ಪೂರೈಸಿದ ನೆನಪಿನಾರ್ಥ "ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ" ಎಂಬ ಪುಸ್ತಕವನ್ನು ಡಾ.ಗಜಾನನ ಶರ್ಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಭಾರತೀ ಪ್ರಕಾಶದಿಂದ ಪ್ರಕಟಗೊಂಡಿದೆ.[ಮುಮ್ಮಡಿ ಶ್ರೀಕೃಷ್ಣರಾಜರ ಕಾಲದ ಕಾದಂಬರಿಗೆ 100]

Kaadu Kaniveya Haadu Hakki Gartikere Raghanna book release programme on November 7th

ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ನಲ್ಲಿ ನಡೆಯುವ ಈ ಸಮಾರಂಭದಲ್ಲಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ, ಖ್ಯಾತ ಸಾಹಿತಿ ಗಿರೀಶ ರಾವ್ (ಜೋಗಿ) "ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ" ಪುಸ್ತಕ ಬಿಡುಗಡೆ ಮಾಡಲಿದ್ದಾರೆ.[ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ]

ಗರ್ತಿಕೆರೆ ರಾಘಣ್ಣ ಹಾಡಿದ 'ಎಂದಾದರೊಂದು ದಿನ' ಎಂಬ ಸಿಡಿಯನ್ನು ಕವಿ ಬಿ.ಆರ್ ಲಕ್ಷ್ಮಣ ರಾವ್ ಬಿಡುಗಡೆಗೊಳಿಸಲಿದ್ದಾರೆ. ಸಾಕೇತ ಶರ್ಮಾ ಹಾಡಿದ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಎಂಬ ಸಿಡಿಯನ್ನು ಕವಿ ಡಾ. ಚಿಂತಾಮಣಿ ಕೊಡ್ಲೆಕೆರೆ ಲೋಕಾರ್ಪಿತಗೊಳಿಸಲಿದ್ದಾರೆ. 80 ವರ್ಷ ತುಂಬಿದ ಗರ್ತಿಕೆರೆ ರಾಘಣ್ಣ ಅವರಿಗೆ ಪತ್ರಕರ್ತ ಕೆ.ಎಸ್ ಅಚ್ಯುತನ್ ನುಡಿನಮನ ಸಲ್ಲಿಸಲಿದ್ದಾರೆ.

English summary
Kaadu Kaniveya Haadu Hakki Gartikere Raghanna book release programme on Sunday, November 7th, 11.30 AM, at Charaka Auditorium, Prashanthi Ayurvedhik Centre, Rajaji Nagar, Bengaluru, This book written by Dr. Gajanana Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X