• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ರಂಗಾಸ್ಥೆ’ ತಂಡದಿಂದ ಕಲಾಗ್ರಾಮದಲ್ಲಿ 'ಕಾದು ಕತೆಯಾದವರು'

|

ಬೆಂಗಳೂರು, ಸೆಪ್ಟೆಂಬರ್ 12: 'ರಂಗಾಸ್ತೆ' ಕನ್ನಡ ರಂಗತಂಡವು ' ಕಾದು ಕತೆಯಾದರು' ಎನ್ನುವ ಕನ್ನಡ ನಾಟಕವನ್ನು ಶನಿವಾರ, ಸೆಪ್ಟೆಂಬರ್ 15 2018 ರಂದು ಸಮುಚ್ಚಯ ಕಲಾಗ್ರಾಮದಲ್ಲಿ 3.30 ಮತ್ತು 7.30 ಕ್ಕೆ ಪ್ರದರ್ಶಿಸಲಿದೆ.

ಕಾದು ಕತೆಯಾದವರು: ತಳ ಸಮುದಾಯದ ನೆಲೆಗಟ್ಟಿನ ಕಥಾ ಎಳೆಯನ್ನು ಹೊಂದಿದ, ಸಮಾಜದಿಂದ ಹೊರದಬ್ಬಿದ, ಊರಾಚೆ ಕಾಡಿನ ಗುಡ್ಡದ ಮೇಲೆ ಪಾಳು ಗುಡಿಯಲ್ಲಿ ಜೀವನದ ಕನಸು ಕಾಣುತ್ತಾ ನಿರಾಕಾರ ವ್ಯಕ್ತಿಗಾಗಿ ಕಾದು ಕುಳಿತ ದಿಕ್ಕು ದೆಸೆಯಿಲ್ಲದ ವಿಚಿತ್ರ ಅಸಂಗತ ವ್ಯಕ್ತಿಗಳ ಸ್ವಗತಕಥನ."

ತಲೆಕೆಟ್ಟವರು, ಗತಿಕೆಟ್ಟವರು, ಅನಾಥರು, ಕುಡುಕರು, ದಾರಿಹೋಕರ ಬವಣೆಯಚಿತ್ರಣ. ವ್ಯವಸ್ತೆಯ ವಿರುದ್ಧ ಬಂಡಾಯವೆದ್ದು ಪರ್ಯಾಯ ಮಾರ್ಗದಲ್ಲಿ, ಸಮಾಜವನ್ನು, ಜಾತಿಧರ್ಮವನ್ನು, ಸರ್ವಾಧಿಕಾರತ್ವವನ್ನು ದಿಕ್ಕರಿಸುವ ಬೀದಿ ಬದಿಯದುರಂತ ಪಾತ್ರಗಳು.

ಲಯತಪ್ಪಿದ ಪ್ರೀತಿ - ಪ್ರೇಮ , ಹಾದರ, ನಂಬಿಕೆ, ಆದರ್ಶ, ಇವುಗಳಲ್ಲಿ ಹಾದಿ ತಪ್ಪಿ ಹೊಸ ಜೀವನಕ್ಕೆ ಹಪ - ಹಪಿಸುವ ದುಃಖಾಂತ್ಯ ಪ್ರಬಂಧದ ಅಭಿವ್ಯಕ್ತತೆ. ಹಳೇ ಮೈಸೂರು ಪ್ರಾಂತ್ಯದ ಭಾಷಾ ಶೈಲಿಯಲ್ಲಿ ಬದುಕಿನ ವಿಡಂಬನೆಯೊಂದಿಗೆ ಪ್ರಯೋಗಾತ್ಮಕವಾಗಿ ರಚನೆಗೊಂಡಿದೆ.

ಪ್ರದರ್ಶನ:

ಶನಿವಾರ, ಸೆಪ್ಟೆಂಬರ್ 15, 2018 ರಂದು ಸಮುಚ್ಚಯ ಕಲಾಗ್ರಾಮದಲ್ಲಿ 3.30 ಹಾಗು 7.30 ಕ್ಕೆ.

ಈ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ತಲಕಾಡು ಗುರುರಾಜು. ನಿರ್ಮಾಣ, ನಿರ್ವಹಣೆ ಮತ್ತು ಬೆಳಕು ಧನುಶ್ .ಎನ್

ನಿರ್ದೇಶಕ ತಲಕಾಡು ಗುರುರಾಜು

ನಿರ್ದೇಶಕ ತಲಕಾಡು ಗುರುರಾಜು

ತಲಕಾಡು ಗುರುರಾಜು : ತಲಕಾಡು ಗುರುರಾಜು ಕನ್ನಡ ರಂಗಭೂಮಿಯ ಪ್ರಯೋಗಶೀಲ ಯುವ ನಿರ್ದೇಶಕರಲ್ಲಿ ಒಬ್ಬರು. ಸಾಹಿತ್ಯ ಪ್ರಕಾರ ಮತ್ತು ರಂಗ ಚಟುವಟಿಕೆಯಲ್ಲಿ ಪ್ರಯೋಗಶೀಲ ಉಳ್ಳವರು. ರಂಗರೂಪಕ್ಕೆ ತಕ್ಕಂತೆ ನೇರ ಹಾಗೂ ಸರಳವಾಗಿ ರಂಗಕೃತಿಯನ್ನು ಸಿದ್ಧಗೊಳಿಸುವ ಕೌಶಲ್ಯ ಹೊಂದಿದ್ದಾರೆ. ಕನ್ನಡ ಸ್ನಾತಕೋತ್ತರ ಪದವೀಧರರಾದ ಇವರು ಮೈಸೂರಿನ "ರಂಗಾಯಣ ಭಾರತೀಯ ರಂಗಶಿಕ್ಷಣ ಕೇಂದ್ರ" ದಲ್ಲಿ ಹಾಗೂ "ನೀನಾಸಂ" ನಲ್ಲಿ ರಂಗಶಿಕ್ಷಣ ಪಡೆದು ತಿರುಗಾಟದಲ್ಲಿ ನಟನಾಗಿ, ತಂತ್ರಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ ಸಂಯೋಜಕರಾಗಿ ಕೆಲಸ ನಿರ್ವಹಿಸಿದ್ದಾರೆ.

ಇವರ ನಿರ್ದೇಶನದ ಮುಖ್ಯ ನಾಟಕಗಳು

ಇವರ ನಿರ್ದೇಶನದ ಮುಖ್ಯ ನಾಟಕಗಳು

ಇವರ ನಿರ್ದೇಶನದ ಮುಖ್ಯ ನಾಟಕಗಳೆಂದರೆ, ‘ಐಕ್ಳಾಟ' , ‘ನಾಟಕ ಮಕ್ಕಳು' , ‘ಸಮಾಜಮುಖಿ' , ‘ಲೋಕಪಾತ್ರ' , ‘ಫಾರ್ಮರ್ ಟೀಚರ್ ಸೋಲ್ಜರ್' , ‘ಪಂಚತಂತ್ರ' , ‘ದುಷ್ಟಬುದ್ದಿ' , ‘ಕಿಂಗ್‍ಲಿಯರ್' , ‘ಹಳ್ಳಿ ಹಾಡು' , ‘ಬೇಂಟೆ' , ‘ಒಂದಾನೊಂದು ಕಾಲ್ದಾಗ' , ‘ಹಳೆಮನೆಯ ಪಾತ್ರಗಳು' , ‘ರೈತನಾಗುವೆ' , ‘ಚಿಕ್ಕದೇವ ಭೂಪ' , ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ' , ‘ಅಶ್ವತ್ಥಾಮೊ ನಾ ಹತ ಕುಂಜರಹ' , ‘ನೆರಳಿರವು' , ‘ಸಮ್ಮುಖದಲ್ಲಿ ಸ್ವಗತ' , ‘ಗ್ರಾಣ', ‘ಉಜ್ಜಯನಿಯಲ್ಲೊಂದು ಪ್ರಸಂಗ', ‘ಗ್ರಾಮ್ಯದೇವತೆ' , ‘ಕೆಂಪು ಸತ್ಯಾಗ್ರಹ' , ಮುಂತಾದವು.

ಪ್ರಸ್ತುತ ರಂಗಾಸ್ಥೆ ತಂಡಕ್ಕೆ "ಕಾದು ಕತೆಯಾದವರು" ಎಂಬ ನಾಟಕವನ್ನು ರಚಿಸಿ ರಂಗರೂಪದೊಂದಿಗೆ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.

ರಂಗಾಸ್ಥೆ ತಂಡ

ರಂಗಾಸ್ಥೆ ತಂಡ

ತಂಡದ ಬಗ್ಗೆ : ರಂಗಾಸ್ಥೆ ತಂಡವು ಸಮಾನ ಮನಸ್ಕರು ಕಟ್ಟಿಕೊಂಡಿರುವ ಒಂದು ಹವ್ಯಾಸಿ ರಂಗ ತಂಡ, ವಿಶೇಷವೇನೆಂದರೆ ತಂಡದ ಬಹಳಷ್ಟು ಸದಸ್ಯರು ಯುವ ವಿದ್ಯಾರ್ಥಿಗಳೇ ಆಗಿದ್ದಾರೆ. ವಿದ್ಯಾರ್ಥಿಗಳನ್ನು ರಂಗಭೂಮಿಯತ್ತ ಕರೆತರುವ ಧ್ಯೇಯೋದ್ದೇಶದಿಂದ ಈ ತಂಡವನ್ನು ಕಟ್ಟುತ್ತಿರುವ ಧನುಷ್.ಎನ್ ರವರ ನೇತೃತ್ವದಲ್ಲಿ ತಂಡ ಈಗಾಗಲೆ ಎರಡು ವಸಂತಗಳನ್ನು ಮುಗಿಸಿದ್ದು, ಎರಡು ವರ್ಷಗಳಲ್ಲಿ ಮೂರು ಬಾರಿ ಸತತವಾಗಿ ರಂಗಶ್ರೀ ಸಂಸ್ಥೆಯ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಲ್ಲದೆ ಪ್ರೇಕ್ಷಕರಿಂದ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಎರಡು ವರ್ಷದ ಈ ಪಯಣದಲ್ಲಿ

ಎರಡು ವರ್ಷದ ಈ ಪಯಣದಲ್ಲಿ

"ನಾವು ನಾಟಕ ಮಾಡ್ತಿಲ್ಲ", "ನಮ್ಮೂರ ರಾಮಾಯಣ", "ದೇವ್ರೇ ಕಾಪಾಡ್ಬೇಕು", "ರಾಣಿ ಆದಿಲ್ ಶಾ", "ನೀವು ಕರೆ ಮಾಡಿರುವ ಚಂದಾದಾರರು", "ಕಡೇ ದಿನ ಕಡೇ ಶೋ", ನಾಟಕಗಳು ಪ್ರದರ್ಶನಗೊಂಡಿದ್ದು ಎಲ್ಲಾ ನಾಟಕಗಳು ಹೊಸ ಪ್ರಯೋಗಗಳಾಗಿವೆ. ಪ್ರಸ್ತುತ ಶ್ರೀ ತಲಕಾಡು ಗುರುರಾಜು ರವರು ರಚಿಸಿ ನಿರ್ದೇಶಿಸಿರುವ "ಕಾದು ಕತೆಯಾದವರು" ನಾಟಕ ಪ್ರಯೋಗಕ್ಕೆ ಅಣಿಯಾಗಿದೆ.

ಎರಡು ವರ್ಷದ ಈ ಪಯಣದಲ್ಲಿ ಒಟ್ಟು ಸರಿಸುಮಾರು ಐವತ್ತಕ್ಕೂ ಹೆಚ್ಚಿನ ರಂಗ ಪ್ರದರ್ಶನಗಳನ್ನು ನೀಡಿದ್ದು ಎಲ್ಲವೂ, ಹೊಸ ಕೃತಿಗಳೇ ಆಗಿವೆ, ಮತ್ತು ತಂಡವು ಸಾಮಾಜಿಕ ವಿಷಯಗಳ ಕುರಿತು ಬೀದಿ ನಾಟಕಗಳನ್ನು ಕೂಡ ಮಾಡಿದ್ದು, ಯುವಕರಲ್ಲಿ ರಂಗಾಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rangasthe, a Kannada amateur theatre group will stage Kannada drama Kaadhu Katheyadavaru at Samucchaya Kalagrama, Mallathahalli on September 15, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more