ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ನಾಯಕರ ಮುಂದೆ ಶಪಥ ಮಾಡಿದ ಕೆ.ಜೆ.ಜಾರ್ಜ್!

|
Google Oneindia Kannada News

Recommended Video

ಕಾಂಗ್ರೆಸ್ ನಾಯಕರ ಮುಂದೆ ಶಪಥ ಮಾಡಿದ ಕೆ.ಜೆ.ಜಾರ್ಜ್! | Oneindia Kannada

ಬೆಂಗಳೂರು, ಆಗಸ್ಟ್ 04 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ಸರ್ಕಾರ ಪತನಗೊಳ್ಳಲು ಬೆಂಗಳೂರಿನ ಕೆಲವು ಕಾಂಗ್ರೆಸ್ ಶಾಸಕರು ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಈಗ ಅನರ್ಹಗೊಂಡಿದ್ದಾರೆ.

ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಕೆ. ಆರ್. ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ ಎಂಬುದು ಕಾಂಗ್ರೆಸ್ ನಾಯಕರ ವಿಶ್ವಾಸ.

ಯಡಿಯೂರಪ್ಪ, ರಾಜ್ಯಪಾಲರಿಗೆ ಸಿದ್ದರಾಮಯ್ಯ ಕುಟುಕು ಟ್ವೀಟ್‌ಯಡಿಯೂರಪ್ಪ, ರಾಜ್ಯಪಾಲರಿಗೆ ಸಿದ್ದರಾಮಯ್ಯ ಕುಟುಕು ಟ್ವೀಟ್‌

ಕೆ. ಆರ್. ಪುರ ಕ್ಷೇತ್ರದ ಉಪ ಚುನಾವಣೆ ಮಾಜಿ ಸಚಿವ ಕೆ. ಜೆ. ಜಾರ್ಜ್ ಮತ್ತು ಬೈರತಿ ಬಸವರಾಜ ನಡುವಿನ ಹೋರಾಟದ ವೇದಿಕೆಯಾಗಲಿದೆ. ಪಕ್ಷದ ನಾಯಕರ ಮುಂದೆ ಕೆ. ಜೆ. ಜಾರ್ಜ್ ಶಪಥ ಮಾಡಿದ್ದು, ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವೆ ಎಂದು ಪಣತೊಟ್ಟಿದ್ದಾರೆ.

ಸಮೀಕ್ಷಾ ವರದಿ: ಬೆಂಗಳೂರಿನ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರಲ್ಲಿ ಯಾರು ಬೆಸ್ಟ್?ಸಮೀಕ್ಷಾ ವರದಿ: ಬೆಂಗಳೂರಿನ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರಲ್ಲಿ ಯಾರು ಬೆಸ್ಟ್?

ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಬೈರತಿ ಬಸವರಾಜ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ನ್ಯಾಯಾಲಯ ಏನು ತೀರ್ಪು ನೀಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ ಉಪ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ....

ಬಿಜೆಪಿಯ ಚಾರ್ಜ್‌ಶೀಟ್‌ ರಾಜಕಾರಣಕ್ಕೆ ಕಾಂಗ್ರೆಸ್‌ ಕೌಂಟರ್‌ಬಿಜೆಪಿಯ ಚಾರ್ಜ್‌ಶೀಟ್‌ ರಾಜಕಾರಣಕ್ಕೆ ಕಾಂಗ್ರೆಸ್‌ ಕೌಂಟರ್‌

ಬೈರತಿ ಬಸವರಾಜ ವಿರುದ್ಧ ಗರಂ

ಬೈರತಿ ಬಸವರಾಜ ವಿರುದ್ಧ ಗರಂ

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕೆ. ಜೆ. ಜಾರ್ಜ್ ಬೈರತಿ ಬಸವರಾಜ ವಿರುದ್ಧ ಗರಂ ಆಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ ಅವರನ್ನು ಉಪ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಪಣ ತೊಟ್ಟಿದ್ದಾರೆ.

ಜಾರ್ಜ್ ಕೋಪಕ್ಕೆ ಕಾರಣವೇನು?

ಜಾರ್ಜ್ ಕೋಪಕ್ಕೆ ಕಾರಣವೇನು?

ಮಾಜಿ ಸಚಿವ ಕೆ. ಜೆ. ಜಾರ್ಜ್ ಬೈರತಿ ಬಸವರಾಜ ವಿರುದ್ಧ ಅಸಮಾಧಾನಗೊಳ್ಳಲು ಕಾರಣವೂ ಇದೆ. ಮೈತ್ರಿ ಸರ್ಕಾರದಲ್ಲಿ ಜಾರ್ಜ್ ಸಚಿವರಾಗಿದ್ದಾಗ ಬೈರತಿ ಬಸವರಾಜ ಅವರನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಜಾರ್ಜ್‌ಗೆ ಅವಾಜ್ ಹಾಕಿದ್ದರು. ಈ ಸೇಡನ್ನು ತೀರಿಸಿಕೊಳ್ಳಲು ಜಾರ್ಜ್ ಮುಂದಾಗಿದ್ದಾರೆ.

ಸಿದ್ದರಾಮಯ್ಯಗೆ ದೂರು ನೀಡಿದ್ದರು

ಸಿದ್ದರಾಮಯ್ಯಗೆ ದೂರು ನೀಡಿದ್ದರು

ಕೆ. ಆರ್. ಪುರ ಶಾಸಕರಾಗಿದ್ದ ಬೈರತಿ ಬಸವರಾಜ, "ಕೇರಳದಿಂದ ಬಂದು ಬೆಂಗಳೂರಿನಲ್ಲಿ ನಿನ್ನ ಆಟ ನಡೆಸುತ್ತೀಯಾ. ನಿನ್ನನ್ನ ಮುಂದೆ ನೋಡಿಕೊಳ್ತೀನಿ" ಎಂದು ಜಾರ್ಜ್‌ಗೆ ಅವಾಜ್ ಹಾಕಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಜಾರ್ಜ್ ವಿರುದ್ಧ ದೂರು ನೀಡಿದ್ದರು.

ಕೆ. ಜೆ. ಜಾರ್ಜ್ ಉಸ್ತುವಾರಿ

ಕೆ. ಜೆ. ಜಾರ್ಜ್ ಉಸ್ತುವಾರಿ

ಕರ್ನಾಟಕ ಕಾಂಗ್ರೆಸ್ ಶಾಸಕರು ಅನರ್ಹಗೊಂಡ 17 ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಕೆ. ಆರ್. ಪುರ ಕ್ಷೇತ್ರದ ಉಸ್ತುವಾರಿಯನ್ನು ಕೆ. ಜೆ. ಜಾರ್ಜ್ ತಮಗೆ ನೀಡುವಂತೆ ಕೇಳಿ ಪಡೆದಿದ್ದಾರೆ. ಉಪ ಚುನಾವಣೆಯಲ್ಲಿ ಬೈರತಿ ಬಸವರಾಜ್ ಸೋಲಿಸುವುದೇ ನನ್ನ ಗುರಿ ಎಂದು ಶಪಥ ಮಾಡಿದ್ದಾರೆ.

English summary
K.R.Puram first time MLA Byrathi Basavaraj disqualified from MLA post. Now all set for by election, it may be big issue between KJ George V/S Byrathi Basavaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X