ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾ.ಶೆಟ್ಟಿ ಕೊಲೆಗೆ ಯತ್ನಿಸಿದ ಆರೋಪಿ 5 ದಿನ ಪೊಲೀಸರ ವಶಕ್ಕೆ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 08: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕೊಲೆಗೆ ಯತ್ನಿಸಿದ ಆರೋಪಿ ತೇಜರಾಜ್‌ ಶರ್ಮಾನನ್ನು 5 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.

ನಿನ್ನೆ ಸಂಜೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಹೆಚ್ಚಿನ ತನಿಖೆಗಾಗಿ 5 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.

ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?

ಆರೋಪಿ ತೇಜ್‌ರಾಜ್ ಈಗಾಗಲೇ ತಪ್ಪೊಪ್ಪಿಕೊಂಡಿದ್ದು, ದೂರು ಸಲ್ಲಿಸಿ ಹತಾಶನಾಗಿದ್ದು, ನ್ಯಾಯಯುತವಾಗಿ ತನಿಖೆ ನಡೆಸಿಲ್ಲ ಎಂಬ ಕೋಪದಲ್ಲಿ ಚಾಕು ಹಾಕಿದ್ದಾಗಿ ಆತ ಹೇಳಿದ್ದಾನೆ.

judge murder attempt accused given to police custody

ಆತನ ಮೇಲೆ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ), 353 ಸರ್ಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿ ಆರೋಪಗಳಡಿ ಕೇಸು ದಾಖಲಿಸಲಾಗಿದೆ. ಘಟನೆಗೆ ಭದ್ರತಾ ಲೋಪವೇ ಕಾರಣವೆಂದು ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಲಾಗಿದ್ದು. ಆಯುಕ್ತರು ಇಂದು ಕ್ರಮ ಜರುಗಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಆರೋಪಿ ತೇಜ್‌ರಾಜ್ ತುಮಕುರಿನ ಹಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದ ಆದರೆ ಸಾಕ್ಷ್ಯಾಧಾರಗಳ ಕೊರತೆ ಇಮದಾಗಿ ದೂರುಗಳು ವಜಾಗೊಂಡಿದ್ದವು. ಇದರಿಂದ ಹತಾಶನಾಗಿದ್ದ ಆತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಇರಿದಿದ್ದ.

ಲೋಕಾಯುಕ್ತರಿಗೆ ಚೂರಿ ಇರಿದಾತನ ಹಿಂದೆ ಸರಕಾರಿ ಅಧಿಕಾರಿಗಳ ಲಂಚದ ಕಥೆ!ಲೋಕಾಯುಕ್ತರಿಗೆ ಚೂರಿ ಇರಿದಾತನ ಹಿಂದೆ ಸರಕಾರಿ ಅಧಿಕಾರಿಗಳ ಲಂಚದ ಕಥೆ!

English summary
Lokayukta Judge Vishwanath Shetty murder accused Teja Raj Sharma given to police custody for 5 days for more interrogation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X