ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ರಕರ್ತ ಶಂಷಿಲ್ ಉದಾ ಹಂತಕರು ಸಿಕ್ಕಿಬಿದ್ದರು

|
Google Oneindia Kannada News

ಬೆಂಗಳೂರು, ಜು. 14 : ಒಂದು ವರ್ಷದ ಹಿಂದೆ ನಡೆದ ಪತ್ರಕರ್ತ ಮತ್ತು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶಂಷಿಲ್ ಉದಾ ಕೊಲೆ ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ತಂಗಿಯ ಮಗಳನ್ನು ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿದ್ದ ದಂಪತಿಗಳು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಶಂಷಿಲ್ ಉದಾ (63) ಕೊಲೆ ಪ್ರಕರಣದ ಬಗ್ಗೆ ವಿವರಣೆ ನೀಡಿದರು. ಕಳೆದ ವರ್ಷದ ಜುಲೈ 3ರಂದು ಶಂಷಿಲ್ ಅವರನ್ನು ಟ್ಯಾನರಿ ರಸ್ತೆಯ ಈದ್ಗಾ ಕಾಂಪ್ಲೆಕ್ಸ್ ನಲ್ಲಿಯ ಕ್ರೆಡಿಟ್ ಕೋ ಆಪರೇಟಿವ್ ಕಚೇರಿಯಲ್ಲಿಯೇ ಕತ್ತು ಕೊಯ್ದೆ ಕೊಲೆ ಮಾಡಲಾಗಿತ್ತು.

Raghavendra Auradkar

ತಂಗಿಯ ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ಅಶೋಕ ನಗರ ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿರುವ ಸಯ್ಯದ್ ಸಲ್ಮಾನ್ ಷಾ (3೦) ಮತ್ತು ಈತನ ಪತ್ನಿ ಶಬರೀನ್ ತಾಜ್ (2೦) ಅವರು ಪತ್ರಕರ್ತ ಮತ್ತು ಸೊಸೈಟಿ ಅಧ್ಯಕ್ಷ ಶಂಷಿಲ್ ಉದಾ ಅವರನ್ನು ಕೊಲೆ ಮಾಡಿದ್ದರು ಎಂದು ಔರಾದ್ಕರ್ ಹೇಳಿದರು. [ಹಣಕ್ಕಾಗಿ ಮಗು ಕೊಂದಿದ್ದ ಸೋದರತ್ತೆ, ಮಾವ ಬಂಧನ]

ಚಿಕ್ಕಪ್ಪನನ್ನು ಕೊಂದಿದ್ದ : ಸಲ್ಮಾನ್ ಮತ್ತು ಶಬರಿನ್ ಪ್ರೀತಿಸಿ ಮದುವೆಯಾಗಿದ್ದರು. ಸಲ್ಮಾನ್ ಮನೆಯಲ್ಲಿ ಮದುವೆಗೆ ವಿರೋಧಿಸಿದ ಕಾರಣ ಅವನು ಕೆಲವು ಕಾಲ ಶಬರಿನ್ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲಸವಿಲ್ಲದ ಅಳಿಯನನ್ನು ಅತ್ತೆ ಮನೆಯಲ್ಲಿ ಹೊರ ಹಾಕಿದ್ದರು.

ನಂತರ ಸಲ್ಮಾನ್ ಮತ್ತು ಶಬರಿನ್ ಅನಾಥ ಆಶ್ರಮವೊಂದರಲ್ಲಿದ್ದರು. ನಂತರ ಸಲ್ಮಾನ್ ಪತ್ನಿಯೊಂದಿಗೆ ಸೇರಿ ಚಿಕ್ಕಪ್ಪ ಶಂಷಿಲ್ ಉದಾ ಕೊಲೆಗೆ ಸಂಚು ರೂಪಿಸಿದ್ದರು. ಕೋ-ಆಪರೇಟಿವ್ ಸೊಸೈಟಿ ನಡೆಸುತ್ತಾ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ಶಂಷಿಲ್ ಅವರನ್ನು ಕೊಂದು ಹಣ ಮಾಡುವುದು ದಂಪತಿಗಳ ಉದ್ದೇಶವಾಗಿತ್ತು.

Shamsid Uda

ಅದರಂತೆ 2013ರ ಜುಲೈ 3ರಂದು ಟ್ಯಾನರಿ ರಸ್ತೆಯ ಈದ್ಗಾ ಕಾಂಪ್ಲೆಕ್ಸ್‌ನಲ್ಲಿರುವ ಸೊಸೈಟಿಗೆ ಬಂದ ಇಬ್ಬರು, ಚಿಕ್ಕಪ್ಪನ ಬಳಿ ಹಣ ಕೇಳಿದ್ದರು ಕೊಡಲು ನಿರಾಕರಿಸಿದಾಗ, ಹಫೀಜ್ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ, 60 ಸಾವಿರ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. [ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಗ್ಗೊಲೆ]

ಕೊಲೆ ನಂತರ ಹೈದರಾಬಾದ್ ಗೆ ಪರಾರಿಯಾಗಿದ್ದ ದಂಪತಿಗಳು ಚಿನ್ನವನ್ನು ಅಡವಿಟ್ಟು ಹೈದರಾಬಾದ್ ನಲ್ಲಿ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದು ಭಾರತಿನಗರದ ತಿಮ್ಮಯ್ಯ ರಸ್ತೆಯಲ್ಲಿ ನೆಲೆಸಿದ್ದರು. ಕಳೆದ ಬುಧವಾರ ತಂಗಿಯ ಮಗಳನ್ನು ಅಪಹರಿಸಿ ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈ ದಂಪತಿಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಈ ಕೊಲೆಯ ಸತ್ಯ ಬಯಲಾಗಿದೆ.

ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದರು : ಪತ್ರಕರ್ತ ಮತ್ತು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶಂಷಿಲ್ ಉದಾ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದರು.

English summary
Bangalore Ashok Nagar Police arrested two accused in the case of kidnapping and murder 7 year old child. Accused Salman and Shabarien also involved in the murder case of Co-operative society president and journalist Shamsid Uda(63)said, Bangalore police commissioner Raghavendra Auradkar. Shamsid Uda murdered in July 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X