ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಕಾಂತ್ 'ಭಾವ ತೀರ ಯಾನ' ಬಿಡುಗಡೆಗೆ ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಮೇ.8: ಪತ್ರಕರ್ತ ಮತ್ತು ಜನಪ್ರಿಯ ಅಂಕಣಕಾರ ಎ.ಆರ್.ಮಣಿಕಾಂತ್ ಅವರ 'ಭಾವತೀರಯಾನ'ಪುಸ್ತಕವನ್ನು ನಟ ಪ್ರಕಾಶ್ ರೈಅವರು ಮೇ. 11ರಂದು ಸಂಜೆ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಬಿಡುಗಡೆಯ ದಿನ- ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ನಾಗಚಂದ್ರಿಕಾ ಭಟ್ ಮತ್ತು ವರ್ಷಾ ಸುರೇಶ ಅವರಿಂದ ಸುಮಧುರ ಭಾವಗೀತೆಗಳ ಗಾಯನ ಆಯೋಜಿಸಲಾಗಿದೆ.

ಪುಸ್ತಕ ಬಿಡುಗಡೆಯ ದಿನದಂದು ಪುಸ್ತಕ ಮಾರಾಟದಿಂದ ಸಿಗುವ ಹಣವನ್ನು ಬಹಳ ಕಷ್ಟದಲ್ಲಿ ಬದುಕುತ್ತಿರುವ 4-5 ಜನರಿಗೆ ಕೊಡಬೇಕು ಎಂಬ ಆಶಯದ ಮಣಿಕಾಂತ್ ಅವರು ಕನ್ನಡಿಗರ ಔದಾರ್ಯದಿಂದ ಮೇ 11 ರಂದು ಹೊಸ ಪುಸ್ತಕ ಭಾವತೀರಯಾನ ಮಾರಾಟವಾಗಿ ಸಿಗುವ ಹಣವನ್ನು ಕಷ್ಟದಲ್ಲಿ ಇರುವ ಸಾಹಿತಿಗಳ ಕುಟುಂಬಕ್ಕೆ/ ಅನಾರೋಗ್ಯದಿಂದ ಬಳಲುವ ಬಡ ಕುಟುಂಬಕ್ಕೆ/ ಪ್ರತಿಭಾವಂತ ವಿದ್ಯಾರ್ಥಿಗೆ ಕೊಡುವುದಾಗಿ ತಿಳಿಸಿದ್ದಾರೆ.

ಕನ್ನಡ ಪ್ರಭ ಪ್ರತ್ರಿಕೆಯ ಜನಪ್ರಿಯ ಅಂಕಣ 'ಭಾವತೀರಯಾನ'ದ ಲೇಖನಗಳ ಮೂಲಕ ನಾಡಿನ ಹಾಗು ವಿದೇಶದ ಕನ್ನಡಿಗರ ಮನಸ್ಸು ಗೆದ್ದ ಮಣಿಕಾಂತ್, ಆಟೊಮೊಬೈಲ್ ಎಂಜಿನಿಯರಿಂಗ್ ನಲ್ಲಿ ಪದವೀಧರರಾಗಿದ್ದರೂ ಒಲಿದದ್ದು ಮಾತ್ರ ಪತ್ರಿಕಾರಂಗಕ್ಕೆ.

Journalist A.R Manikanth's Bhaava Teera Yaana book release

ಭಾವ ತೀರ ಯಾನ ಬೆನ್ನುಡಿಯ ಸಾಲುಗಳು: ಸೋಲಿಸಬೇಡ, ಗೆಲಿಸಯ್ಯಾ... ಎಂಬುದು ಇವತ್ತು ಎಲ್ಲರ ಪ್ರಾರ್ಥನೆಯೂ ಆಗಿದೆ. ತಮಾಷೆಯೆಂದರೆ, ಸದಾ ಗೆಲುವನ್ನೇ ಧ್ಯಾನಿಸುವ ಮನುಷ್ಯ, ರಿಸ್ಕ್ಗೆ ಕೈಹಾಕಲು ಹಿಂಜರಿಯುತ್ತಾನೆ, ಹೆದರುತ್ತಾನೆ. ಇವತ್ತಿನ ಸಂದರ್ಭದಲ್ಲಿ, ಗೆಲ್ಲಲು ಹೊರಟ ಜನಕ್ಕೆ ಒಬ್ಬ ಹೀರೋ ಬೇಕು. ಕಣ್ಣೆದುರಿಗೆ ಒಂದು ರೋಲ್ ಮಾಡೆಲ್ ಇರಬೇಕು. ಆಗ ಮಾತ್ರ, ಮನಸ್ಸೆಂಬುದು ಕನಸೆಂಬ ಕುದುರೆಯನೇರಿಬಿಡುತ್ತದೆ.

ಗೆಲುವಿನ ಕಥೆಗಳನ್ನು ಹೆಜ್ಜೆಹೆಜ್ಜೆಗೂ ಕೇಳಲು ಆಸೆಪಡುತ್ತದೆ. ನನ್ನ ಸಂತೋಷವೆಂದರೆ, ಈ ಪುಸ್ತಕದ ಪ್ರತಿ ಪುಟದಲ್ಲೂ ಗೆಲುವಿನ ಸುವಾಸನೆಯಿದೆ. ಪರೀಕ್ಷೆಗೆ ಹೊರಟು ನಿಂತ ಮಗನ ಹಣೆಗೆ ತಿಲಕವಿಟ್ಟು, ಒಳ್ಳೆಯದಾಗುತ್ತೆ, ಹೋಗಿ ಬಾ ಎಂದು ಅಮ್ಮ ಶುಭಹಾರೈಸುತ್ತಾಳಲ್ಲ; ಅಂಥದೊಂದು ಅಕ್ಕರೆಯಿದೆ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇಲ್ಲಿರುವ ಬಹುಪಾಲು ಸಕ್ಸಸ್ ಸ್ಟೋರಿಗಳ ಮೂಲ ಇಂಟರ್ನೆಟ್. ಆದರೆ, ಅಂತರ್ಜಾಲದ ಮಾಹಿತಿಯಿಂದಲೇ ಯಾವುದೇ ಬರಹವೂ ಪೂರ್ಣವಾಗಿಲ್ಲ. ಈ ಪುಸ್ತಕದಲ್ಲಿರುವ ಎಲ್ಲ ರಿಯಲ್ ಹೀರೋಗಳೂ ಮಾತಿಗೆ ಸಿಕ್ಕಿದ್ದಾರೆ. ಗಂಟೆಗಟ್ಟಲೆ ಮಾತಾಡಿದ್ದಾರೆ.
ಸುಖ-ದುಃಖ ಹಂಚಿಕೊಂಡಿದ್ದಾರೆ. ಇಲ್ಲಿರುವ ರಿಯಲ್ ಹೀರೋಗಳ ಹಳೆಯ ಕಥೆಯನ್ನು ಬರೆಯುವಾಗೆಲ್ಲ, ಅವರಿಗೆ ಎದುರಾದ ಕ್ರೌರ್ಯ, ಅವಮಾನ, ಸಂಕಟವನ್ನು ನೆನೆದು ನಡುಗಿಹೋಗಿದ್ದೇನೆ.

ಬೇರೊಬ್ಬರ ಸಂಕಟ ನನ್ನದೇ ಆದಂತಾಗಿ, ಬರೆವ ಕೈ ತಡವರಿಸಿ, ಗಂಟಲುಬ್ಬಿ ಬಂದು, ಕಣ್ಣೀರು ಕೆನ್ನೆಗಿಳಿದ ಮೋದಕ್ಕೆ ಬೆರಗಾಗಿದ್ದೇನೆ. ಕಡೆಗೊಮ್ಮೆ, ಗೆಲುವೆಂಬುದು ಅವರ ಮನೆ ಬಾಗಿಲು ತಟ್ಟಿತು ಎಂದು ಬರೆದ ತಕ್ಷಣ ಸಕ್ಕರೆ ತಿಂದು ಸಂಭ್ರಮಿಸಿದ್ದೇನೆ. ಹೌದು, ಬರೆಯುವ ಸಂದರ್ಭದಲ್ಲಿ, ಕಣ್ಣಮುಂದೆ ಬೇರೇನೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ಬರಹಗಳು ನನ್ನನ್ನು ಆವರಿಸಿಕೊಂಡಿವೆ. ಗೆಲುವೆಂಬುದು, ನನ್ನ ಜೊತೆಗಿರುವ ಎಲ್ಲರಿಗೂ ದಕ್ಕಲಿ ಎಂದು ಪ್ರಾಥಿಸುವಂತೆಯೂ ಮಾಡಿವೆ.

English summary
Journalist and columnist A.R Manikanth's Bhaava Teera Yaana' book will be released by Actor Prakash Rai on May.10. It will be followed by Musical program by Upasana Mohan and team. venue: Ravindra Kalakshetra, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X