• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಾಣ ತೆಗೆದ ಜಾಲಿ ರೈಡ್ ಮೋಜು, ಅಪಘಾತವಾಗಿದ್ದು ಹೇಗೆ?

|
   ಪ್ರಾಣ ತಗೆದ ಜಾಲಿ ರೈಡ್ ಮೋಜು , ಅಪಘಾತವಾಗಿದ್ದು ಹೇಗೆ | Oneindia Kannada

   ಬೆಂಗಳೂರು, ಸೆಪ್ಟೆಂಬರ್ 18 : ಮೂವರು ಪಿಯುಸಿ ವಿದ್ಯಾರ್ಥಿಗಳ ಮೋಜಿನ ಜಾಲಿ ರೈಡ್ ಒಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ಲೈಸೆನ್ಸ್ ಇಲ್ಲದಿದ್ದರೂ ಮಕ್ಕಳಿಗೆ ಕಾರು ಕೊಡಿಸಿದ್ದ ತಪ್ಪಿಗೆ ವಿದ್ಯಾರ್ಥಿಗಳ ಪೋಷಕರು ಜೈಲು ಪಾಲಾಗಿದ್ದಾರೆ.

   ಹೊಸೂರು ರಸ್ತೆಯ ರೂಪೇನಾ ಅಗ್ರಹಾರ ಬಳಿ ಸಂಭವಿಸಿದ ಅಪಘಾತದಲ್ಲಿ ಅರ್ಫಾನ್ ಸಲೀಂ (17) ಮೃತಪಟ್ಟಿದ್ದಾನೆ. ಶ್ರೀನಿವಾಸ್ (16) ಮತ್ತು ಅನಿರುದ್ಧ್ (16) ಗಾಯಗೊಂಡಿದ್ದಾರೆ. ಮೂವರು ನಗರದಲ್ಲಿ ಆಗಾಗ ಜಾಲಿ ರೈಡ್ ಹೋಗುತ್ತಿದ್ದರು. ಶನಿವಾರ ಜಾಲಿ ರೈಡ್ ಹೋದ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

   ಹೊಸೂರು : ಜಾಲಿ ರೈಡ್ ಮೋಜಿಗೆ ಒಂದು ಬಲಿ

   ಅಜಾಗರೂಕತೆಯಿಂದ ವಾಹನ ಸಂಚಾರ ನಡೆಸಿ ಜೀವಕ್ಕೆ ಕುತ್ತು ತಂದ ಆರೋಪದಡಿ ಶ್ರೀನಿವಾಸ್ ಮತ್ತು ಅನಿರುದ್ಧ್ ವಶಕ್ಕೆ ಪಡೆದುಕೊಂಡ ಮಡಿವಾಳ ಸಂಚಾರಿ ಪೊಲೀಸರು ಇಬ್ಬರನ್ನು ಬಾಲ ಮಂದಿರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಮಕ್ಕಳ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ಕಾರು ಕೊಡಿಸಿದ್ದಕ್ಕಾಗಿ ಪೋಷಕರನ್ನು ಬಂಧಿಸಲಾಗಿದೆ.

   ಆವಲಹಳ್ಳಿ ಜಂಕ್ಷನ್ ನಲ್ಲಿ ಕೆಲಸಕ್ಕೆ ಬಾರದ ಪೊಲೀಸ್!

   ಅರ್ಫಾನ್‌ ಮತ್ತು ಶ್ರೀನಿವಾಸ್ ದೇವರ ಚಿಕ್ಕನಹಳ್ಳಿಯ ನಿವಾಸಿಗಳು. ಅನಿರುದ್ಧ್ ಎಚ್‌ಎಸ್‌ಆರ್ ಲೇಔಟ್ ನಿವಾಸಿ. ನಗರದ ಬೇರೆ-ಬೇರೆ ಕಾಲೇಜುಗಳಲ್ಲಿ ಎಲ್ಲರೂ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಮೂವರು ಆಗಾಗ ಕಾರುಗಳಲ್ಲಿ ಜಾಲಿ ರೈಡ್ ಹೋಗುತ್ತಿದ್ದರು. ಶನಿವಾರ ಹೀಗೆ ಜಾಲಿ ರೈಡ್ ಹೋದಾಗ ಅಪಾಘಾತ ನಡೆಸಿದ್ದು, ಅರ್ಫಾನ್ ಸಲೀಂ ಮೃತಪಟ್ಟಿದ್ದಾನೆ.

   ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ, 'ನಮ್ಮ100' ಸಹಾಯವಾಣಿಗೆ ಚಾಲನೆ

    ಜಾಲಿ ರೈಡ್ ಪ್ರಾಣ ತೆಗೆಯಿತು

   ಜಾಲಿ ರೈಡ್ ಪ್ರಾಣ ತೆಗೆಯಿತು

   ಶನಿವಾರ ತಡರಾತ್ರಿ 12.30ರಿಂದ ಭಾನುವಾರ ಮುಂಜಾನೆ 2.30ರ ತನಕ ಮೂವರು ಜಾಲಿ ರೈಡ್ ನಡೆಸಿದ್ದಾರೆ. ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಹಲವು ಬಾರಿ ಇವರು ಸುತ್ತಾಟ ನಡೆಸಿದ್ದಾರೆ. ವಾಹನಗಳನ್ನು ಓವರ್ ಟೇಕ್ ಮಾಡುವ ಪೈಪೋಟಿ ನಡೆಸುವಾಗ ನಿಯಂತ್ರಣ ತಪ್ಪಿ ಅಪಘಾತ ನಡೆಸಿದೆ.

    ಒಂದು ಸಾವು, ಕಾರು ಜಖಂ

   ಒಂದು ಸಾವು, ಕಾರು ಜಖಂ

   ಶ್ರೀನಿವಾಸ್ ಇನ್ನೋವಾ, ಅರ್ಫಾನ್ ಸ್ಕೋಡಾ, ಅನಿರುದ್ಧ್ ಮಾರುತಿ ಡಿಸೈರ್ ಕಾರು ತೆಗೆದುಕೊಂಡು ಜಾಲಿ ರೈಡ್ ಹೋಗಿದ್ದರು. ಭಾನುವಾರ ಮುಂಜಾನೆ 2.45ರ ಸುಮಾರಿಗೆ ರೂಪೇನಾ ಅಗ್ರಹಾರ ಬಳಿ ಇನ್ನೋವಾ ಕಾರು ಉಳಿದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದು, ಅಪಘಾತವಾಗಿದೆ. ಅರ್ಫಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಇಬ್ಬರ ಪ್ರಾಣ ಸೀಟ್ ಬೆಲ್ಟ್‌ನಿಂದ ಉಳಿಯಿತು

   ಇಬ್ಬರ ಪ್ರಾಣ ಸೀಟ್ ಬೆಲ್ಟ್‌ನಿಂದ ಉಳಿಯಿತು

   ಇನ್ನೋವಾ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಅನಿರುದ್ಧ್ ಮತ್ತು ಅರ್ಫಾನ್ ಇದ್ದ ಕಾರು ಮಗುಚಿ ಬಿದ್ದಿದೆ. ಇನ್ನೋವಾ ಕಾರು ಮುಂದೆ ಸಾಗಿ ಟ್ಯಾಂಕರ್‌ಗೆ ಗುದ್ದಿದೆ. ತಲೆಗೆ ಗಂಭೀರಗಾಯವಾಗಿದ್ದ ಅರ್ಫಾನ್ ಸ್ಥಳದಲ್ಲಿಯೇ ಮೃತಪಟ್ಟರೆ. ಸೀಟ್ ಬೆಲ್ಟ್ ಧರಿಸಿದ್ದರಿಂದ ಅನಿರುದ್ಧ್‌ ಮತ್ತು ಶ್ರೀನಿವಾಸ್ ಪ್ರಾಣ ಉಳಿಸಿದೆ.

    'ಗೊತ್ತಿಲ್ಲದೇ ತೆಗೆದುಕೊಂಡು ಹೋಗಿದ್ದರು'

   'ಗೊತ್ತಿಲ್ಲದೇ ತೆಗೆದುಕೊಂಡು ಹೋಗಿದ್ದರು'

   ಮಡಿವಾಳ ಸಂಚಾರಿ ಪೊಲೀಸರು ವಿಚಾರಣೆ ನಡೆಸಿದಾಗ ಪೋಷಕರು. 'ನಮಗೆ ಗೊತ್ತಿಲ್ಲದಂತೆ ಕಾರುಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಮಾಹಿತಿ ನೀಡಿದ್ದಾರೆ.'. 'ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ಕಾರು ಕೊಡಿಸಿದ ತಪ್ಪಿಗೆ ಪೋಷಕರನ್ನು ಬಂಧಿಸಲಾಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Jolly ride turns tragic for three PUC students. One of them was killed on the spot, other two injured in accident near Roopena Agrahara. The deceased is Arfan (16). Srinivas (16) and Anirudh (16) injured. Madiwala police arrested Anirudh and Srinivas for rash driving and arrested their parents for allowing the teenagers to drive the cars.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more