ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಶಂಕರದಲ್ಲಿ ಜೋಗಿಯವರ ಆಸ್ಕ್ ಮಿ ವೈಎನ್ಕೆ

By Prasad
|
Google Oneindia Kannada News

ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡುವುದು ಏನಕೆ? ಆಸ್ಕ್ ಮಿಸ್ಟರ್ ವೈಎನ್ಕೆ... ಎಂಬುದು YNK ಎಂದೇ ಖ್ಯಾತರಾಗಿದ್ದ ಪತ್ರಕರ್ತ ವೈಎನ್ ಕೃಷ್ಣಮೂರ್ತಿ ಅವರು ಬರೆದಿದ್ದ ಚುಟುಕು ಕವನ. ಈ ಕವನದ ಸಾಲೊಂದನ್ನು ಸ್ಫೂರ್ತಿಯಾಗಿಟ್ಟುಕೊಂಡು ಹಾಸ್ಯ ನಾಟಕ ಬರೆದಿರುವುದು ಜೋಗಿ ಎಂದು ಹೆಸರುವಾಸಿಯಾಗಿರುವ ಪತ್ರಕರ್ತ ಗಿರೀಶ್ ರಾವ್.

ಜೋಗಿ ವಿರಚಿಸಿರುವ "ಆಸ್ಕ್ ಮಿಸ್ಟರ್ ವೈಎನ್ಕೆ" ಹಾಸ್ಯ ನಾಟಕವನ್ನು punಡಿತ ಎಂದೆ ಖ್ಯಾತಿಯಾಗಿರುವ ಯೆಳಂದೂರು ನರಸಿಂಹಮೂರ್ತಿ ಕ್ರಿಷ್ಣಮೂರ್ತಿ (YNK) ಅವರಿಗೆ ಅರ್ಪಣೆ ಮಾಡಲಾಗಿದೆ.[ತುಳು ರಂಗಭೂಮಿಯಲ್ಲಿ ಹೊಸ ದಾಖಲೆಗೆ ಕ್ಷಣಗಣನೆ]

Jogi's Kannada play Ask Mr YNK at Rangashankara

ಮಂಜು ನಾರಾಯಣ್ ಅವರು ನಿರ್ದೇಶಿಸಿರುವ ಈ ನಾಟಕವನ್ನು ಏಪ್ರಿಲ್ 4ರಂದು ಸಂಜೆ 7.30ಕ್ಕೆ ರಂಗಪ್ರತಿಭೆ ತಂಡ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶಿಸುತ್ತಿದೆ. ಟಿಕೆಟ್ ಬೆಲೆ ಕೇವಲ 100 ರುಪಾಯಿಗಳು.

ಈ ನಾಟಕವನ್ನು ನಿರ್ದೇಶಿಸಿರುವವರು ಬೆಳಕು ತಜ್ಞ ಮಂಜು ನಾರಾಯಣ್. ಈ ನಾಟಕವನ್ನು ಮಂಜು ನಾರಾಯಣ್ ಅವರು ಹಲವಾರು ಪ್ರದರ್ಶಿಸಿದ್ದು, ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಈವರೆಗೆ ನಾಲ್ಕು ಪ್ರದರ್ಶನ ಯಶಸ್ವಿಯಗಿದ್ದು, ಇದೀಗ ಐದನೆ ಬಾರಿ ಈ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.[ನಾಟಕಚೈತ್ರ 2017 : ಎರಡು ನಾಟಕಗಳ ವಿಮರ್ಶೆ]

Jogi's Kannada play Ask Mr YNK at Rangashankara

ನಾಟಕದ ಬಗ್ಗೆ : ದಾಂಪತ್ಯದಲ್ಲಿನ ಏಳು ಬೀಳು, ಆಗು ಹೋಗುಗಳನ್ನು ಹಾಸ್ಯಮಯವಾಗಿ YNKಯವರ "ಘಾ" ಪಾತ್ರದ ಮೂಲಕ ತೋರಿಸಿದ್ದಾರೆ ಜೋಗಿ. ಮಾಡರ್ನ್ ವಿಶ್ವಾಮಿತ್ರ ಮತ್ತು ಮೇನಕೆ, "ದಾಂಪತ್ಯ ನಿರ್ಮೂಲನ ಯೋಜನೆ"ಯಡಿ ತಮ್ಮ ದಾಂಪತ್ಯವನ್ನು ನಿರ್ಮೂಲನೆ ಮಾಡಿಕೊಳ್ಳಲು ಹೊರಡುತ್ತಾರೆ. ಹೆಂಡತಿ ಅಂದರೆ ಬರಿ ಮನೆ ಕೆಲಸ ಮಾಡುವ ಆಳಲ್ಲ, ಆಕೆ ಒಂಟಿಯಾಗಿ ಬದುಕಬಲ್ಲಳು ಎನ್ನುತ್ತಾಳೆ ಮೇನಕೆ. ಹೆಂಡತಿ ಅಂದ್ರೆ ಸಿಲ್ಲಬಸ್ ನಲ್ಲೇ ಇಲ್ಲದೆ ಇರೊ ಪ್ರಶ್ನೆ ಇದ್ದ ಹಾಗೆ ಅಂತಾನೆ ವಿಶ್ವಾಮಿತ್ರ.

ಇದರ ಮಧ್ಯೆಯು, ಪ್ರೀತಿಯಲ್ಲಿ, ಮದುವೆಯಲ್ಲಿ ನಂಬಿಕೆ ಇಟ್ಟಿರುವ ಮಾಡರ್ನ್ ಶಕುಂತಲೆ ಮತ್ತು ದುಶ್ಯಂತ. ಆದರೆ ಹೀಗೆ ದಾಂಪತ್ಯ ನಿರ್ಮೂಲನೆ ಮಾಡಬಹುದೆ? ಸಮಜಕ್ಕೆ ಇದರಿಂದ ಆಗುವ ಪರಿಣಾಮವೇನು? ಇದರಿಂದ ಲಾಭವೆ? ಮದುವೆ ಅನ್ನೋದು ವ್ಯವಸ್ಥೆಯೊ ಅಥವ ಅವ್ಯವಸ್ಥೆಯೊ? ಇದೆಲ್ಲ ತಿಳಿಯಬೇಕಾದರೆ, ನಾಟಕವನ್ನು ನೋಡಲೆಬೇಕು.[ಬೀದಿಯೊಳಗೊಂದು ಮನೆಯ ಮಾಡಿ ಮತ್ತೊಮ್ಮೆ ನೋಡಿ]

ತಂಡ - ರಂಗಪ್ರತಿಭೆ
ರಚನೆ - ಜೋಗಿ
ಸಂಗೀತ - ಅರ್ಜುನ್ ರಾಮು ಮತ್ತು ತೇಜಸ್ವಿ ಹರಿದಾಸ್
ವಿನ್ಯಾಸ ಮತ್ತು ನಿರ್ದೇಶನ - ಮಂಜು ನಾರಾಯಣ್
4/4/2017, ರಂಗಶಂಕರ, ಜೆ.ಪಿ.ನಗರ, ಸಂಜೆ 7:30 (5ನೇ ಪ್ರದರ್ಶನ)
ಟಿಕೆಟ್ ದರ-100 ರುಪಾಯಿ.

English summary
Kannada writer Jogi's play Ask Mr YNK will be stated at Rangashankara, Bengaluru on 4th April at 7.30 PM. The humourous Kannada play is based on short poem by YN Krishna Murthy, known as YNK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X