ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಮಾತನಾಡುವವರಿಗೆ ಮಾತ್ರ ಇಲ್ಲಿ ಉದ್ಯೋಗ

By Prasad
|
Google Oneindia Kannada News

ಬೆಂಗಳೂರು, ಜೂ. 22 : ಟೆಕ್ನಾಲಜಿ ಕಂಪನಿಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುವುದಿಲ್ಲ, ಕೆಲಸ ಕೊಡುವಾಗ ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆ ತೋರುತ್ತಾರೆ ಎಂಬಿತ್ಯಾದಿ ಮಾತುಗಳು ಕೇಳಿಬರುವುದು ಮಾಮೂಲು. ಅಂಥದರಲ್ಲಿ ಕನ್ನಡ ಚೆನ್ನಾಗಿ ಮಾತಾಡಬಲ್ಲವರಿಗಾಗಿ ಟೆಕ್ನಾಲಜಿ ಕಂಪನಿಯಲ್ಲಿ ಕೆಲಸ ಹುಡುಕಿಕೊಂಡು ಬಂದಿದೆ.

ದೊಡ್ಡ ಟೆಕ್ನಾಲಜಿ ಕಂಪನಿಯೊಂದು ದತ್ತ ಸಂಗ್ರಹ ಪ್ರಾಜೆಕ್ಟೊಂದರಲ್ಲಿ ತೊಡಗಿಕೊಂಡಿದೆ. ಈ ಪ್ರಾಜೆಕ್ಟಿನಲ್ಲಿ ಕನ್ನಡ ಮಾತಾಡಬಲ್ಲವರು ಕೆಲಸ ಗಿಟ್ಟಿಸಬಹುದಾಗಿದ್ದು, ಆಂಡ್ರಾಯ್ಡ್ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಕನ್ನಡ ಪದಗಳು ಮತ್ತು ವಾಕ್ಯಗಳನ್ನು ಆಡಿಯೋ ರೆಕಾರ್ಡ್ ಮಾಡಬೇಕಾಗುತ್ತದೆ.

ಒಟ್ಟು 500 ಜನರ ಅವಶ್ಯತೆಯಿದ್ದು, ಅಭ್ಯರ್ಥಿಗಳು ಭಾರತೀಯ ಸಂಜಾತರಾಗಿರಬೇಕು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಭಾರತದಲ್ಲೇ ಮಾಡಿದವರಾಗಿರಬೇಕು ಮತ್ತು ಕನ್ನಡವನ್ನು ಸರಾಗವಾಗಿ ಮಾತಾಡಬಲ್ಲವರಾಗಿರಬೇಕು. ಈ ಪ್ರಾಜೆಕ್ಟಿಗೆ ಆಯ್ಕೆಯಾಗಬೇಕಾದರೆ ಕಂಪನಿ ಕೆಲವೊಂದು ಕಟ್ಟಳೆಗಳನ್ನು ಹೇರಿದೆ. ಅವೇನೆಂದು ಕೆಳಗಿವೆ ನೋಡಿ.

Job opportunity for native Kannada Speakers

ನಿಬಂಧನೆಗಳು/ಅರ್ಹತೆಗಳು ಹೀಗಿವೆ

* ಅಭ್ಯರ್ಥಿ ಭಾರತೀಯನಾಗಿದ್ದು ಅಚ್ಚ ಕನ್ನಡ ಮಾತಾಡಬೇಕು.
* ಆಂಗ್ಲ ಭಾಷೆಯನ್ನೂ ಸರಾಗವಾಗಿ ಮಾತಾಡಬೇಕು.
* ಭಾರತದಲ್ಲೇ ಬೆಳೆದಿರಬೇಕು ಮತ್ತು ಭಾರತದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿರಬೇಕು.
* ಕೂಡಲೆ ಪ್ರತಿಸ್ಪಂದಿಸುವಂತಿರಬೇಕು ಮತ್ತು ಉತ್ತಮ ಸಂವಹನ ನೈಪುಣ್ಯತೆ ಇರಬೇಕು.
* ತರಬೇತಿ, ಪ್ರಾಜೆಕ್ಟ್ ಆರಂಭಿಸುವ ಮುನ್ನ ಗೌಪ್ಯ ಕಾಪಾಡುವ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧರಿರಬೇಕು.
* ಆಂಡ್ರಾಡ್ಯ್ ಮೊಬೈಲ್ ಅಥವಾ ಕಂಪ್ಯೂಟ್ (ವಿಂಡೋಸ್ 7+, ಮ್ಯಾಕ್ ಅಥವಾ ಲೈನಕ್ಸ್ ಓಎಸ್), ಕ್ರೋಮ್ ಬ್ರೌಸರ್ ಮತ್ತು ವೇಗವಾದ ಇಂಟರ್ನೆಟ್ ಸಂಪರ್ಕ ಸೌಲಭ್ಯವಿರಬೇಕು. [ಕಾವೇರಿ ಬ್ಯಾಂಕಿನಲ್ಲಿ ಕನ್ನಡ ಬಲ್ಲವರಿಗೆ ಉದ್ಯೋಗ]

ಪ್ರಾಜೆಕ್ಟ್ ವಿವರ

* ತುಣುಕು ಕೆಲಸದ ಆಧಾರದ ಮೇಲೆ ಹಣ ನೀಡಲಾಗುವುದು. ಆಯ್ಕೆಯಾದವರು ಸುಮಾರು 600 ಪದಗಳನ್ನು ರೆಕಾರ್ಡ್ ಮಾಡಬೇಕಾಗುತ್ತದೆ. ಇದೆಲ್ಲ ಒಂದು ಗಂಟೆಯಲ್ಲಿ ಮುಗಿಯುವಂಥದು.
* ಅಭ್ಯರ್ಥಿಗಳು ಸಂದರ್ಶನ ಪ್ರಶ್ನಾವಳಿಗೆ ಉತ್ತರಿಸಬೇಕು.
* ಪ್ರಾಜೆಕ್ಟ್ ಆರಂಭವಾಗುವ ಮೊದಲು ಎಲ್ಲ ವಿವರಗಳನ್ನು ನೀಡಲಾಗುವುದು.
* ಆರಂಭಿಕ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವವರಿಗೆ ಮುಂದೆ ಹೆಚ್ಚಿನ ಅವಕಾಶ ನೀಡಲಾಗುವುದು.
* ಒಟ್ಟು 500 ಕನ್ನಡ ಮಾತಾಡುವವರು ಬೇಕಾಗಿದ್ದಾರೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.

English summary
A technology company is hiring more than 500 people for a data collection project. The candidates have to be native of India, should have had primary and higher education in India and should be fluent in speaking Kannada. Candidates will have to read Kannada (India) words and phrases and record their audio with the use of an android device or computer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X