ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕೊನೆಗೂ ಬೆಂಗಳೂರಿಗೆ ಬಂದ ಕಂಪ್ಲಿ ಗಣೇಶ್

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಕ್ಷೇತ್ರ(ಬಳ್ಳಾರಿ)ದ ಶಾಸಕ ಜೆ ಎನ್ ಗಣೇಶ್ ಅವರನ್ನು ಪೊಲೀಸರು ಇಂದು ಬೆಂಗಳೂರಿಗೆ ಕರೆತಂದಿದ್ದಾರೆ.

ಬುಧವಾರ ಗಣೇಶ್ ಅವರನ್ನು ಗುಜರಾತಿನಲ್ಲಿ ಬಂಧಿಸಲಾಗಿತ್ತು. ಜನವರಿ 19 ರಂದು ರಾತ್ರಿ ಈಗಲ್ಟನ್ ರೆಸಾರ್ಟ್ ನಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕ ಆನಂದ್ ಸಿಂಗ್ ಮೇಲೆ ಗಣೇಶ್ ಹಲ್ಲೆ ನಡೆಸಿದ್ದರು. ನಂತರ ಜ.21 ರಂದು ಅವರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಆ ನಂತರ ಗಣೇಶ್ ತಲೆಮರೆಸಿಕೊಂಡಿದ್ದರು.

JN Ganesh is brought back to Bengaluru by police

ಹಲ್ಲೆ ನಡೆದು ತಿಂಗಳ ಬಳಿಕ ಆರೋಪಿ ಶಾಸಕ ಗಣೇಶ್ ಬಂಧನಹಲ್ಲೆ ನಡೆದು ತಿಂಗಳ ಬಳಿಕ ಆರೋಪಿ ಶಾಸಕ ಗಣೇಶ್ ಬಂಧನ

ಕೊನೆಗೂ ಅವರನ್ನು ಫೆ.20 ರಂದು ಗುಜರಾತಿನಲ್ಲಿ ಬಂಧಿಸಲಾಗಿತ್ತು. ಘಟನೆ ನಡೆದ ಒಂದು ತಿಂಗಳ ನಂತರ ರಾಮನಗರ ಪೊಲೀಸರು ಗಣೇಶ್ ಅವರನ್ನು ಬಂಧಿಸಿದ್ದು, ಇಂದೇ ರಾಮನಗರಕ್ಕೆ ಕರೆತಂದು ಸ್ಥಳೀಯ ನ್ಯಾಯಾಲಯದ ಮುಂದೆ ಗಣೇಶ್ ಅವರನ್ನು ಹಾಜರುಪಡಿಸಲಿದ್ದಾರೆ.

ಈ ಹಲ್ಲೆಯಲ್ಲಿ ನನ್ನದೇನೂ ತಪ್ಪಿಲ್ಲ, ಆನಂದ್ ಸಿಂಗ್ ಅವರೇ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಅಜ್ಞಾತವಾಗಿದ್ದುಕೊಂಡೇ ಕಂಪ್ಲಿ ಗಣೇಶ್ ಫೇಸ್ ಬುಕ್ ನಲ್ಲಿ ಬರೆದಿದ್ದರು. ಎಫ್ ಐಆರ್ ದಾಖಲಾಗಿದ್ದರೂ ಅವರನ್ನು ಇದುವರೆಗೂ ಬಂಧಿಸದರಿರುವುದಕ್ಕೆ ಸರ್ಕಾರದ ಬೆಂಬಲವೇ ಇದೆ ಎಂಬ ಮಾತೂ ಕೇಳಿಬಂದಿತ್ತು.

English summary
JN Ganesh Congress MLA from Kampli, Ballari is brought back to Bengaluru today. He is an accused who attacked another Congress MLA Anand Singh. He was arrested Yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X