ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಎಲ್ಎಲ್ ಇಂಡಿಯಾದಿಂದ ವಿಶಿಷ್ಟ ಸಮಾವೇಶ

|
Google Oneindia Kannada News

ಬೆಂಗಳೂರು, ಡಿಸೆಂಬರ್ 4: ದೇಶದ ಅತಿ ದೊಡ್ಡ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಮತ್ತು ವೃತ್ತಿಪರ ಸೇವಾ ಸಂಸ್ಥೆ ಜೆಎಲ್‌ಎಲ್‌ ಇಂಡಿಯಾ, ಕಳೆದ ಗುರುವಾರ ಬೆಂಗಳೂರಿನಲ್ಲಿ ತನ್ನ ಮೊದಲ ಸಹಭಾಗಿತ್ವದ ಸಮಾವೇಶ ಆಯೋಜಿಸಿತ್ತು.

'ಜೆಎಲ್ಎಲ್ ಪಾರ್ಟ್ನರ್ ಸಮ್ಮಿಟ್: ಟುಗೆದರ್ ಟುವರ್ಡ್ಸ್ ಟುಮಾರೋ' ಸಮಾವೇಶವು ಜೆಎಲ್‌ಎಲ್ ಜತೆಗಿನ ಭಾರತದ ಪ್ರಮುಖ ಸೌಲಭ್ಯ ನಿರ್ವಹಣಾ ಸೇವಾ ಸಹಭಾಗಿತ್ವವನ್ನು ಗುರುತಿಸಲು ಮತ್ತು ಗೌರವಿಸುವ ಉದ್ದೇಶದಿಂದ ಆಯೋಜನೆಗೊಂಡಿತ್ತು. ಇದರ ಬಳಿಕ ಜೆಎಲ್ಎಲ್ ತನ್ನ ಸಹಭಾಗಿತ್ವದ ಸಂಸ್ಥೆಗಳಿಗೆ ಪ್ರಶಸ್ತಿ ವಿತರಣಾ ಸಮಾರಂಭವನ್ನು ಕೂಡ ಆಯೋಜಿಸಿತ್ತು.

JLL Organised Partner Summit For Facility Management Suppliers

ಸೌಲಭ್ಯ ನಿರ್ವಹಣೆ ಅಡಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ನೀಡಿದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಡಸ್ಟರ್ಸ್ ಟೋಟಲ್ ಸೊಲ್ಯೂಷನ್ಸ್ ಸರ್ವೀಸಸ್‌ಗೆ ಅತ್ಯುತ್ತಮ ಜನಿಟೋರಿಯಲ್ ಸರ್ವೀಸಸ್ ಪ್ರಶಸ್ತಿ, ಶಂಕರ್ ಎಲೆಕ್ಟ್ರಿಕಲ್ಸ್‌ಗೆ ಅತ್ಯುತ್ತಮ ತಂತ್ರಜ್ಞಾನ ಸೇವಾ ಪ್ರಶಸ್ತಿ ನೀಡಲಾಯಿತು. ಅಲ್ಲದೆ, ಕೆಲವು ವಿಶೇಷ ಪ್ರಶಸ್ತಿಗಳನ್ನು ಕೂಡ ವಿತರಿಸಲಾಯಿತು. ಪ್ರೊಸೆಸ್ ಇನ್ನೋವೇಷನ್‌ಗಾಗಿ ಬೆಟರ್ ಪ್ಲೇಸ್ ಸೇಫ್ಟಿ ಸೊಲ್ಯೂಷನ್ಸ್‌ಗೆ ಪ್ರಶಸ್ತಿ ದೊರಕಿತು. ಬೆಸ್ಟ್ ಕಾಂಪ್ಲಿಯನ್ಸ್ ಪ್ರಾಕ್ಟೀಸಸ್ ಪ್ರಶಸ್ತಿ 24*7 ಫೆಸಿಲಿಟಿ ಸರ್ವೀಸ್ ಕನೆಕ್ಟ್ ಪಾಲಾಯಿತು. ಇದರೊಂದಿಗೆ ಅತಿ ದೀರ್ಘಾವಧಿ ಸಂಬಂಧಕ್ಕಾಗಿ ಮೂರು ಪ್ರಶಸ್ತಿಗಳನ್ನು ಕೊಡಲಾಯಿತು.

JLL Organised Partner Summit For Facility Management Suppliers

'ಈ ಸಮಾವೇಶವು ಸೇವಾ ಪೂರೈಕೆಯಲ್ಲಿನ ಪ್ರಗತಿ ಮತ್ತು ಗ್ರಾಹಕ ಕೇಂದ್ರಿತ ನಡೆಯನ್ನು ಬಯಸಿರುವ ಕೈಗಾರಿಕಾ ಮುಂದಾಳುಗಳು ಮತ್ತು ಸಹಭಾಗಿಗಳ ನಡುವೆ ಮಹಾನ್ ಸಹಯೋಗದ ಆರಂಭಕ್ಕೆ ನಾಂದಿ ಹಾಡಿದೆ. ತಂತ್ರಜ್ಞಾನ ಮತ್ತು ಅತ್ಯಾಧುನಿಕ ಪರಿಹಾರೋಪಾಯಗಳ ಆಧಾರದಲ್ಲಿ ಉದ್ಯಮವು ಕ್ರಾಂತಿಕಾರಿ ಬದಲಾವಣೆಯನ್ನು ಬಯಸಿದೆ ಎನ್ನುವುದಕ್ಕೆ ಈ ಸಮ್ಮೇಳನ ಸಾಕ್ಷಿ' ಎಂದು ಜೆಎಲ್ಎಲ್‌ನ ಪಶ್ಚಿಮ ಏಷ್ಯಾದ ಕಾರ್ಪೊರೇಟ್ ಸೊಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸೇಥಿ ಹೇಳಿದರು.

English summary
JLL India on Thursday had organised JLL Partner Summit: Together To(a)wards in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X