ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ 17 ನಗರಗಳಲ್ಲಿ ಗ್ರೇಟ್ ಇಂಡಿಯನ್ ರೆಸ್ಟೋರೆಂಟ್ ಫೆಸ್ಟಿವಲ್

|
Google Oneindia Kannada News

ಬೆಂಗಳೂರು, ಆಗಸ್ಟ್ 04: ಗ್ರೇಟ್ ಇಂಡಿಯನ್ ರೆಸ್ಟೋರೆಂಟ್ ಫೆಸ್ಟಿವಲ್‌ನ 4ನೇ ಆವೃತ್ತಿ ಆಗಸ್ಟ್ 1, 2019ರಿಂದ ಸೆಪ್ಟೆಂಬರ್ 1, 2019ರವರೆಗೆ ನಡೆಯಲಿದ್ದು, ದೇಶದ 17 ನಗರಗಳ ಜನಪ್ರಿಯ ರೆಸ್ಟೋರೆಂಟ್‌ಗಳು ಫೆಸ್ಟಿವಲ್‌ನಲ್ಲಿ ಭಾಗಿಯಾಗಲಿವೆ.

ಈ ಗ್ರೇಟ್ ಇಂಡಿಯನ್ ರೆಸ್ಟೋರೆಂಟ್ ಫೆಸ್ಟಿವಲ್ (ಜಿಐಆರ್‌ಎಫ್) ಹೊಚ್ಚಹೊಸ ಆವೃತ್ತಿಗಾಗಿ ಜಿಯೋ ಹಾಗೂ ಭಾರತದ ಅತಿದೊಡ್ಡ ಡೈನಿಂಗ್ ಔಟ್ ವೇದಿಕೆಯಾದ ಡೈನ್‌ಔಟ್ ಒಟ್ಟಾಗಿ ಸೇರಿವೆ. ಡೈನ್‌ಔಟ್‌ನ ಈವರೆಗಿನ ಅತಿದೊಡ್ಡ ಆಹಾರ ಮತ್ತು ಪಾನೀಯಗಳ ಹಬ್ಬದ ಸಂದರ್ಭದಲ್ಲಿ ಬಳಕೆದಾರರಿಗೆ ವಿಶಿಷ್ಟ ಪ್ರಯೋಜನಗಳನ್ನು ನೀಡಲಿರುವ ಈ ಪಾಲುದಾರಿಕೆಯ ಮೂಲಕ, ಜಿಯೋ ತನ್ನ ಬಳಕೆದಾರರ ಡಿಜಿಟಲ್ ಜೀವನ ಅನುಭವವನ್ನು ಉತ್ಕೃಷ್ಟಗೊಳಿಸುವುದನ್ನು ಮುಂದುವರೆಸಿದೆ.

ಸಾಮಾನ್ಯವಾಗಿ, ಡೈನ್‌ಔಟ್ ಬಳಕೆದಾರರು ಈ ವೇದಿಕೆಯಲ್ಲಿ ಕಾಯ್ದಿರಿಸುವಿಕೆಗಳಿಗಾಗಿ ಬುಕಿಂಗ್ ಶುಲ್ಕವನ್ನು ನೀಡಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ ಅವರು ಬಿಲ್ ಮೊತ್ತದ ಮೇಲೆ ರಿಯಾಯಿತಿ ಪಡೆಯಬಹುದಾಗಿದ್ದು, ಆಹಾರ, ಪಾನೀಯ ಮತ್ತು ಬುಫೆಗಳ ಮೇಲೆ 1+1 ಆಫರ್‌ಗಳನ್ನೂ ಆನಂದಿಸಬಹುದು.

ರಿಲಯನ್ಸ್ ನಿವ್ವಳ ಲಾಭದಲ್ಲಿ 6.8% ಏರಿಕೆ, 30 ಕೋಟಿ ದಾಟಿದ ಗ್ರಾಹಕರು ರಿಲಯನ್ಸ್ ನಿವ್ವಳ ಲಾಭದಲ್ಲಿ 6.8% ಏರಿಕೆ, 30 ಕೋಟಿ ದಾಟಿದ ಗ್ರಾಹಕರು

ಈ ಜಿಐಆರ್‌ಎಫ್ ಸಂದರ್ಭದಲ್ಲಿ, ಡೈನ್‌ಔಟ್ ಕಾರ್ಯಾಚರಿಸುವ 17 ನಗರಗಳಲ್ಲಿನ ಜಿಯೋ ಚಂದಾದಾರರು ಆಫರ್ ಅವಧಿಯಲ್ಲಿನ ತಮ್ಮ ಮೊದಲ ಬುಕಿಂಗ್ ಶುಲ್ಕದ ಮೇಲೆ ರೂ. 100 ರಿಯಾಯಿತಿ ಪಡೆಯಬಹುದು. ಇದು ಜಿಯೋ ಬಳಕೆದಾರರಿಗೆ ಮಾತ್ರವೇ ದೊರಕುವ ವಿಶಿಷ್ಟ ಸೌಲಭ್ಯವಾಗಿದೆ.

ಜಿಯೋ ಬಳಕೆದಾರರಿಗೆ ಪ್ರಯೋಜನಗಳು:

ಜಿಯೋ ಬಳಕೆದಾರರಿಗೆ ಪ್ರಯೋಜನಗಳು:

* ಜಿಐಆರ್‌ಎಫ್ ಸಂದರ್ಭ ಮೊದಲ ಬುಕಿಂಗ್ ಶುಲ್ಕದ ಮೇಲೆ ರೂ. 100 ರಿಯಾಯಿತಿ
* ಆಹಾರ, ಪಾನೀಯ, ಬುಫೆ ಅಥವಾ ಒಟ್ಟು ಬಿಲ್‌ನ ಮೇಲೆ ಕೂಪನ್ ಕೋಡ್ ಅನ್ವಯ
* ಮೈಜಿಯೋ ಆಪ್‌ನ ಕೂಪನ್ಸ್ ವಿಭಾಗದಲ್ಲಿ ರಿಯಾಯಿತಿ ಕೂಪನ್ ಕೋಡ್ ಲಭ್ಯ.
ನಾಲ್ಕನೇ ಆವೃತ್ತಿಯಲ್ಲಿ ಒಟ್ಟು ಬಿಲ್, ಆಹಾರದ ಬಿಲ್, ಪಾನೀಯಗಳ ಬಿಲ್ ಹಾಗೂ ಬುಫೆಗಳ ಮೇಲೆ 8000+ ರೆಸ್ಟೋರೆಂಟ್‌ಗಳಿಂದ 50% ರಿಯಾಯಿತಿ ನಿರೀಕ್ಷಿಸಬಹುದು.

ಜಿಯೋ ಜೊತೆ ಕೈಜೋಡಿಸಿದ ಪಬ್‌ಜಿ ಕಾರ್ಪ್, ಉಚಿತ ಗಿಫ್ಟ್ ಕೊಡುಗೆ ಜಿಯೋ ಜೊತೆ ಕೈಜೋಡಿಸಿದ ಪಬ್‌ಜಿ ಕಾರ್ಪ್, ಉಚಿತ ಗಿಫ್ಟ್ ಕೊಡುಗೆ

ಮೈಜಿಯೋ ಆಪ್‌ ಮೂಲಕ ಪಡೆಯಿರಿ

ಮೈಜಿಯೋ ಆಪ್‌ ಮೂಲಕ ಪಡೆಯಿರಿ

ಗ್ರೇಟ್ ಇಂಡಿಯನ್ ರೆಸ್ಟೋರೆಂಟ್ ಫೆಸ್ಟಿವಲ್‌ನ ಡಿಜಿಟಲ್ ಪಾಲುದಾರಿಕೆ: ಡೈನ್‌ಔಟ್ ಜೊತೆ ಕೈಜೋಡಿಸಿದ ಜಿಯೋ, ಫೆಸ್ಟಿವಲ್ ಸಂದರ್ಭ ಜಿಯೋ ಬಳಕೆದಾರರಿಗೆ ವಿಶಿಷ್ಟ ಪ್ರಯೋಜನಗಳ ಘೋಷಣೆ ಮಾಡಿದೆ. ಜಿಯೋ ಬಳಕೆದಾರರು ರಿಯಾಯಿತಿ ಪಡೆಯಲು ಬೇಕಾದ ಕೋಡ್ ಮೈಜಿಯೋ ಆಪ್‌ನ ಕೂಪನ್ಸ್ ವಿಭಾಗದಲ್ಲಿ ಲಭ್ಯವಿರಲಿದೆ. ಈಗಾಗಲೇ ಮೈಜಿಯೋ ಆಪ್ ಬಳಸುತ್ತಿಲ್ಲದ ಜಿಯೋ ಚಂದಾದಾರರು ಕೂಡ ಆಪ್ ಡೌನ್‌ಲೋಡ್ ಮಾಡಿಕೊಂಡು ಡೈನ್‌ಔಟ್ ವೇದಿಕೆಯಲ್ಲಿ ಉಪಯೋಗಿಸಲು ಬೇಕಾದ ಕೂಪನ್‌ಗಳನ್ನು ಪಡೆದುಕೊಳ್ಳಬಹುದು.

ರೆಸ್ಟೋರೆಂಟ್ ಫೆಸ್ಟಿವಲ್ ಕುರಿತು

ರೆಸ್ಟೋರೆಂಟ್ ಫೆಸ್ಟಿವಲ್ ಕುರಿತು

ಫೆಸ್ಟಿವಲ್ ಕುರಿತು: ಒಟ್ಟು ಬಿಲ್, ಆಹಾರದ ಬಿಲ್, ಪಾನೀಯಗಳ ಬಿಲ್ ಹಾಗೂ ಬುಫೆಗಳ ಮೇಲೆ 50% ರಿಯಾಯಿತಿ ಹಾಗೂ ಕೂಪನ್‌ಗಳನ್ನು ನೀಡಲಿರುವ ಈ ಹಬ್ಬವು ಆಗಸ್ಟ್ 1ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿದೆ. ಈ ಕೊಡುಗೆಗಳನ್ನು ಕೆಳಕಂಡ 17 ನಗರಗಳ 8000+ ರೆಸ್ಟೋರೆಂಟ್‌ಗಳಾದ್ಯಂತ ಪಡೆಯಬಹುದು: ದೆಹಲಿ (ದೆಹಲಿ ಎನ್‌ಸಿಆರ್), ಮುಂಬೈ, ಬೆಂಗಳೂರು, ಕೋಲ್ಕಾತಾ, ಪುಣೆ, ಚೆನ್ನೈ, ಹೈದರಾಬಾದ್, ಅಹಮದಾಬಾದ್, ಚಂಡೀಗಢ, ಗೋವಾ, ಜೈಪುರ, ಲಕ್ನೋ, ಇಂದೋರ್, ಸೂರತ್, ಕೊಚ್ಚಿ, ಲುಧಿಯಾನಾ ಹಾಗೂ ನಾಗಪುರ.

2017ರಲ್ಲಿ ಪ್ರಾರಂಭವಾದ ಜಿಐಆರ್‌ಎಫ್

2017ರಲ್ಲಿ ಪ್ರಾರಂಭವಾದ ಜಿಐಆರ್‌ಎಫ್

2017ರಲ್ಲಿ ಪ್ರಾರಂಭವಾದ ಜಿಐಆರ್‌ಎಫ್, ರೆಸ್ಟೋರೆಂಟ್ ಉದ್ಯಮದ ಮೊತ್ತಮೊದಲ ಆಹಾರ ಮತ್ತು ಪಾನೀಯಗಳ ಹಬ್ಬವಾಗಿದ್ದು, ಡೈನಿಂಗ್ ಔಟ್ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಭಾರತೀಯರು ಹೊರಗೆ ಆಹಾರ ಸೇವಿಸುವ ವಿಧಾನವನ್ನು ಬದಲಿಸುವ ಉದ್ದೇಶ ಹೊಂದಿದೆ. ಈ ಹಬ್ಬವು ಬಳಕೆದಾರರು ಹಾಗೂ ಪಾಲುದಾರ ರೆಸ್ಟೋರೆಂಟ್‌ಗಳಿಬ್ಬರಿಗೂ ಉಪಯುಕ್ತವಾಗಿದೆ. ಜನಪ್ರಿಯ ರೆಸ್ಟೋರೆಂಟ್‌ಗಳಲ್ಲಿ ದೊರಕುವ ಯಾವುದೇ ಪ್ರಶ್ನೆಗಳಿಲ್ಲದ 50% ರಿಯಾಯಿತಿ, ಕ್ಯಾಶ್‌ಬ್ಯಾಕ್‌, ಬ್ಯಾಂಕ್ ಕೊಡುಗೆ, ಪಾಲುದಾರರ ಕೊಡುಗೆ ಮತ್ತಿತರ ಸೌಲಭ್ಯಗಳು ಈ ಹಬ್ಬದ ಸಫಲತೆಗೆ ಪ್ರಮುಖ ಕಾರಣಗಳಾಗಿವೆ.

English summary
Jio and Dineout, for the latest edition of Great Indian Restaurant Festival (GIRF) starting 1st August 2019 and concluding on 1st September 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X