ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಲ್ಲಿ ಹಿಂದೂ ಮುಖಂಡನ ಹತ್ಯೆಗೈದು ಬೆಂಗಳೂರಲ್ಲಿ ನೆಲೆಸಿದ್ದ ಜಿಹಾದಿಗಳು

|
Google Oneindia Kannada News

ಬೆಂಗಳೂರು, ಜನವರಿ 10: ದೆಹಲಿಯಲ್ಲಿ ಬಂಧಿತನಾದ ಖಾಜಾ ಮೊಯಿದೀನ್ ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

ತಿಂಗಳ ಹಿಂದೆ ತಮಿಳುನಾಡಿನಲ್ಲಿ ಹಿಂದೂ ಸಂಘಟನೆಯ ಮುಖಂಡನನ್ನು ಹತ್ಯೆಗೈದ ಬಳಿಕ 6 ಜಿಹಾದಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಲ್ಲಿ ಮೂವರನ್ನು ಕೆಲ ದಿನಗಳ ಹಿಂದೆ ತಮಿಳುನಾಡು ಪೊಲೀಸರು ಬಂಧಿಸಿದ್ದರು.

ದೆಹಲಿಯಲ್ಲಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರಿಂದ ಬೆಚ್ಚಿ ಬೀಳಿಸುವ ಮಾಹಿತಿ ದೆಹಲಿಯಲ್ಲಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರಿಂದ ಬೆಚ್ಚಿ ಬೀಳಿಸುವ ಮಾಹಿತಿ

ಅದಕ್ಕೂ ಮುನ್ನ ಇನ್ನುಳಿದ ಮೂವರು ಬಂಗಾಳಕ್ಕೆ ಪರಾರಿಯಾಗಿದ್ದರು. ಅವರಲ್ಲಿ ಮೊಯಿದೀನ್ ಕೂಡ ಒಬ್ಬ ಎನ್ನಲಾಗಿದೆ.

Jihadists Residing In Bengaluru After The Assassination Of A Hindu leader

ಬಂಧಿತ ಜಿಹಾದಿಗಳು ಬೆಂಗಳೂರಿನ ಸದ್ದುಗುಂಟೆ ಪಾಳ್ಯದ ಪಿಜಿಯಲ್ಲಿ ವಾಸವಾಗಿದ್ದರು. ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ ಮುಖಂಡನನ್ನು ಹತ್ಯೆ ಮಾಡಿ, ಮೊಹಮ್ಮದ್ ಹನೀಫ್, ಇಮ್ರಾನ್ ಖಾನ್ ಹಾಗೂ ಮೊಹಮ್ಮದ್ ಸೈಯದ್ ಬಂಧಿಸಲಾಗಿದೆ.

ಸೆರೆಯಾದ ಬೆಂಗಳೂರಿಗರು ತಮಿಳುನಾಡಿನ ನಿಷೇಧಿತ ಉಗ್ರ ಸಂಘಟನೆಯಾದ ಅಲ್ ಉಮ್ಮಾದ ಶಂಕಿತ ಸದಸ್ಯರಾದ ಮೊಹಮ್ಮದ್ ಹನೀಫ್ ಖಾನ್, ಇಮ್ರಾನ್ ಖಾನ್, ಮೊಹಮ್ಮದ್ ಸೈಯದ್ ಎಂದು ತಿಳಿದುಬಂದಿದೆ. 2013ರಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ ಪ್ರಕರಣದಲ್ಲೂ ಇದೇ ಸಂಘಟನೆಯ ಸದಸ್ಯರು ಬಂಧಿತರಾಗಿದ್ದರು. ಅವರು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಈಗ ಸಿಕ್ಕಿಬಿದ್ದಿರುವ ತಮಿಳುನಾಡು ಮೂಲದ ಮತೀಯ ಸಂಘಟನೆಯ ಶಂಕಿತರು ಬೆಂಗಳೂರಿನಲ್ಲಿ ಸಹ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದರೇ ಎಂಬ ಬಗ್ಗೆ ಸಿಸಿ ತನಿಖೆ ನಡೆಸುತ್ತಿದೆ.

ಒಂದು ತಿಂಗಳಿಂದ ನಗರದಲ್ಲಿ ಆ ಮೂವರು ನೆಲೆಸಿದ್ದರು. ಮೇಲಾಗಿ ಪಿಸ್ತೂಲ್‌ಗಳನ್ನು ಸಹ ಅವರು ತರಿಸಿಕೊಂಡಿದ್ದರು. ಸಂಘಟನೆಯ ಮುಖಂಡನ ನೇತೃತ್ವದಲ್ಲಿ ಸಭೆ ಕೂಡಾ ನಡೆದಿದೆ.

English summary
It was reported that Khaja Moideen, who was arrested in Delhi, fled West Bengal from Bengaluru a few days ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X