• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಇಇ ಪ್ರವೇಶ ಪರೀಕ್ಷೆ‌ ಫಲಿತಾಂಶ: ರಾಜ್ಯದ ಗೌರವ್‌ದಾಸ್ ದೇಶಕ್ಕೆ ಪ್ರಥಮ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಬಹು ನಿರೀಕ್ಷಿತ ಜೆಇಇ (ಮೇನ್) ಮುಖ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 44 ವಿದ್ಯಾರ್ಥಿಗಳು ಶೇ.100ಕ್ಕೆ 100ರಷ್ಟು ಅಂಕ ಗಳಿಸಿದ್ದಾರೆ.

ಜೆಇಇ ಮುಖ್ಯ ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ಬೆಂಗಳೂರಿನ ಸಹಕಾರನಗರದ ನಾರಾಯಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗೌರವ್‌ದಾಸ್ ಅವರು ದೇಶದಲ್ಲೇ ಪ್ರಥಮ ರ್‍ಯಾಂಕ್ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.

ಜೆಇಇ ಮೇನ್ಸ್ 2021 ಫಲಿತಾಂಶ ಪ್ರಕಟ, 44 ಅಭ್ಯರ್ಥಿಗಳಿಗೆ ಶೇ.100 ಅಂಕ
ಬೆಂಗಳೂರಿನ ಸಹಕಾರ ನಗರದ ನಾರಾಯಣ ಐಐಟಿ ಅಕಾಡೆಮಿಯ ವಿದ್ಯಾರ್ಥಿಯಾದ ಗೌರವ್‌ದಾಸ್, ಜೆಇಇ (ಮೇನ್) ಮುಖ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿರುವುದಕ್ಕೆ ಸಂಸ್ಥೆಯ ನಿರ್ದೇಶಕರಾದ ಡಾ.ಸಿಂಧೂರ ನಾರಾಯಣ, ಪುನೀತ್ ಕೊತಪ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಮಂಗಳವಾರ ಮಧ್ಯರಾತ್ರಿ ಫಲಿತಾಂಶ ಪ್ರಕಟವಾಗಿದ್ದು, 18 ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆದುಕೊಂಡಿದ್ದು, ಅವರಲ್ಲಿ ಗೌರವ್‌ದಾಸ್ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ಪ್ರಸಕ್ತ ಸಾಲಿನಿಂದ ಜೆಇಇ (ಮೇನ್) ಪರೀಕ್ಷೆಯನ್ನು ವರ್ಷಕ್ಕೆ 5 ಬಾರಿ ನಡೆಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಅಂಕಗಳನ್ನು ಸುಧಾರಿಸುವ ಅವಕಾಶ ನೀಡಲಾಗುತ್ತಿದೆ. ಮೊದಲ ಎಡಿಷನ್ ಫೆಬ್ರವರಿಯಲ್ಲಿ ಹಾಗೂ ಎರಡನೇ ಅಡಿಷನ್ ಪರೀಕ್ಷೆಯನ್ನು ಮಾರ್ಚ್ ತಿಂಗಳಲ್ಲಿ ನಡೆಸಲಾಗಿತ್ತು. ಮುಂದಿನ ಹಂತಗಳ ಪರೀಕ್ಷೆಯನ್ನು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲೇ ನಿಗದಿಪಡಿಸಲಾಗಿತ್ತು.

ಆದರೆ, ದೇಶದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿದ್ದರಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. 3ನೇ ಅಡಿಷನ್ ಜುಲೈ 20 ರಿಂದ 25 ಮತ್ತು 4ನೇ ಅಡಿಷನ್ ಆಗಸ್ಟ್ 26 ರಿಂದ ಸೆಪ್ಟೆಂಬರ್ 2ರವರೆಗೆ ನಡೆಸಲಾಗಿತ್ತು. ಈ 4 ಎಡಿಷನ್ ಪರೀಕ್ಷೆಯಲ್ಲಿ 9.34 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು 13 ಪ್ರಾದೇಶಿಕ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಜೆಇಇ (ಮೇನ್) ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಯಿತು. ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮಿ, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿ ಪರೀಕ್ಷೆ ನಡೆಯಿತು.

ಈ ವರ್ಷ ಜೆಇಇ ಮೇನ್‌ 2021 ಪರೀಕ್ಷೆಯನ್ನು ನಾಲ್ಕು ಬಾರಿ ನಡೆಸಲಾಗಿದ್ದು, ಅಭ್ಯರ್ಥಿಗಳಿಗೆ ನಾಲ್ಕು ಬಾರಿ ಅಥವಾ ಅವರು ಇಚ್ಛಿಸಿದಷ್ಟು ಅವಕಾಶಗಳಿಗೆ ಭಾಗವಹಿಸುವ ಅವಕಾಶ ನೀಡಲಾಗಿತ್ತು. jeemain.nta.nic.inನಲ್ಲಿ ಫಲಿತಾಂಶ ನೋಡಬಹುದಾಗಿದೆ.

ರ್‍ಯಾಂಕ್ ಪಡೆದವರು
ಗೌರವ್‌ದಾಸ್- ಕರ್ನಾಟಕ

ವೈಭವ್ ವಿಶಾಲ್- ಬಿಹಾರ

ವೆಂಕಟಪನೀಷ್- ಆಂಧ್ರಪ್ರದೇಶ

ಸಿದ್ಧಾಂತ್ ಮುಖರ್ಜಿ ಅಂಶುಲ್‌ವರ್ಮಾ, ಮೃಧು ಅಗರ್‌ವಾಲ್- ರಾಜಸ್ತಾನ

ರುಚಿಲ್ ಬನ್ಸಾಲ್, ಕಾವ್ಯ ಚೋಪ್ರಾ- ದೆಹಲಿ

ಅಮಯ್ಯ ಸಿಂಗಾಲ್, ಪಾಲ್‌ಅಗರ್‌ವಾಲ್- ಉತ್ತರ ಪ್ರದೇಶ

   ತಾಲಿಬಾನ್ ಮೇಲೆ ದಾಳಿ ಮಾಡಲು ಭಾರತದ ಸೇನೆಯ ಸಹಾಯ ಕೋರಿದ ಅಮೆರಿಕ | Oneindia Kannada

   ಕೊಮ್ಮಾ ಶರಣ್ಯ, ಜೋಯ್ಸುಲಾ ವೆಂಕಟ ಆದಿತ್ಯ- ತೆಲಂಗಾಣ

   ಬಸಾಲ ವೀರಶಿವ, ಕರಣಮ್ ಲೋಕೇಶ್, ಕಾಂಚನಪಲ್ಲಿ ರಾಹುಲ್‌ನಾಯ್ಡು- ಆಂಧ್ರಪ್ರದೇಶ

   ಪುಲ್ಕಿತ್ ಗೋಯಲ್- ಪಂಜಾಬ್

   ಗುರುಮೃತ್‌ಸಿಂಗ್-ಚಂಡೀಗಢ

   English summary
   The results of the JEE Main Exam were announced on Tuesday in which Gauravdas from Bengaluru was ranked first in the country.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X