ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್‌ ಕಚೇರಿಗೆ ಸಚಿವರ ಭೇಟಿ ಕಡ್ಡಾಯ: ದೇವೇಗೌಡ ಆದೇಶ

By Nayana
|
Google Oneindia Kannada News

ಬೆಂಗಳೂರು, ಜು.28: ಜೆಡಿಎಸ್‌ ಕಚೇರಿಗೆ ಸಚಿವರ ಭೇಟಿ ಕಡ್ಡಾಯ ಮಾಡಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಆದೇಶ ಹೊರಡಿಸಿದ್ದಾರೆ. ಸರತಿ ಪ್ರಕಾರವಾಗಿ ಜೆಡಿಎಸ್‌ ಕಚೇರಿಗೆ ಸಚಿವರ ಭೇಟಿ ನಿಗದಿಯಾಗಿದೆ.

ಆಗಸ್ಟ್‌ 1ರಿಂದ ಆಗಸ್ಟ್‌ 31ರವರೆಗೆ ವೇಳಾಪಟ್ಟಿ ನಿಗದಿಯಾಗಿದೆ. ಪಕ್ಷದ ಕಾರ್ಯಕರ್ತರ ಸಮಸ್ಯೆ ಆಲಿಸಬೇಕು ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯೂ ಕಡ್ಡಾಯವಾಗಿ ಕಚೇರಿಗೆ ಬರಬೇಕು ಎಂದು ತಾಕೀತು ಮಾಡಿದ್ದಾರೆ.ಎಚ್‌ಡಿ ದೇವೇಗೌಡ ಅವರ ಪರವಾಗಿ ಜೆಡಿಎಸ್‌ ಬೂತ್‌ ಸಮಿತಿ ಅಧ್ಯಕ್ಷ ಸುರೇಶ್‌ ಬಾಬು ಆದೇಶ ಹೊರಡಿಸಿದ್ದಾರೆ.

JDS supremo mandates ministers visit to party office

ಆ.1ರಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ, ಆ.2ರಂದು ಪ್ರವಾಸೋದ್ಯಮ ಸಚಿವ ಸಾ. ರಾ. ಮಹೇಶ್‌, ಆಗಸ್ಟ್‌ 9ರಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಆಗಸ್ಟ್ 10ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆ.14ರಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಎಂ.ಸಿ. ಮನಗೂಳಿ, ಬಂಡೆಪ್ಪ ಕಾಶಂಪುರ, ಸಿಎಸ್‌ ಪುಟ್ಟರಾಜು ಹೀಗೆ ಜೆಡಿಎಸ್‌ ಕಚೇರಿಗೆ ಸಚಿವರ ಭೇಟಿ ನಿಗದಿಯಾಗಿದೆ.

JDS supremo mandates ministers visit to party office

ಶನಿವಾರ ಮತ್ತು ಭಾನುವಾರ ಬಿಟ್ಟು ಉಳಿದ ದಿನ ಅಹವಾಲು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

English summary
JDS supremo H.D.Devegowda has insisted his party ministers in collation government to visit party office JP bhavan in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X