ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಲಿನ ದರ ಏರಿಕೆ ಲಾಭ ಯಾರಿಗೆ ಹೋಗುತ್ತಿದೆ?

|
Google Oneindia Kannada News

ಬೆಂಗಳೂರು, ಜನವರಿ 11 : ಹಾಲಿನ ದರ ಏರಿಕೆ ಸರ್ಕಾರದ ಜನವಿರೋಧಿ ನೀತಿಯಾಗಿದೆ. ಕೆಎಂಎಫ್ ನಂದಿನಿ ಹಾಲಿನ ದರವನ್ನು ಇಳಿಕೆ ಮಾಡಬೇಕು ಎಂದು ಬೆಂಗಳೂರು ಮಹಾನಗರ ಜನತಾದಳ ಒತ್ತಾಯಿಸಿದೆ.

ಬೆಂಗಳೂರಿನ ಮೌರ್ಯ ಸರ್ಕಲ್‌ ಬಳಿಯ ಗಾಂಧಿ ಪ್ರತಿಮೆ ಮುಂದೆ ಸೋಮವಾರ ಜನತಾದಳದ ಕಾರ್ಯಕರ್ತರು ನಗರ ಮಹಾಪ್ರಧಾನ ಕಾರ್ಯದರ್ಶಿ ಆರ್.ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. [ಹಾಲಿನ ದರ ಏರಿಕೆ : ಸಚಿವರು ನೀಡಿದ ಸಮರ್ಥನೆಗಳು]

jds

ಕರ್ನಾಟಕ ಸರ್ಕಾರ ಜನವರಿ 5ರಿಂದ ಅನ್ವಯವಾಗುವಂತೆ ಹಾಲಿನ ದರವನ್ನು ಲೀಟರ್‌ಗೆ 5 ರೂ. ಮತ್ತು ಮೊಸರಿನ ದರವನ್ನು 2 ರೂ. ಏರಿಕೆ ಮಾಡಿದೆ. ಪ್ರತಿಯೊಬ್ಬರಿಗೂ ಉಪಯುಕ್ತವಾದ ಇಂತಹ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ದರ ಏರಿಕೆ ಮಾಡಿರುವುದು ಜನ ವಿರೋಧಿ ನೀತಿಯಾಗಿದೆ ಎಂದು ಜೆಡಿಎಸ್ ದೂರಿದೆ. [ಹಾಲಿನ ದರ 4 ರೂ ಏರಿಕೆ, ಎಲ್ಲಿ ದರ ಎಷ್ಟಿದೆ?]

ಹಾಲು ಉತ್ಪಾದಕರಿಗೆ ಹೆಚ್ಚಿನ ಮೊತ್ತವನ್ನು ತಲುಪಿಸುತ್ತೇವೆ ಎಂದು ಹೇಳಿ ಸರ್ಕಾರ ದರವನ್ನು ಏರಿಕೆ ಮಾಡಿದೆ. ಆದರೆ, ಪಶು ಆಹಾರದ ದರವನ್ನು ಏರಿಕೆ ಮಾಡಿರುವ ಸರ್ಕಾರ ಹಾಲು ಉತ್ಪಾದಕರ ಹಿತವನ್ನು ಕಾಪಾಡುವುದರಲ್ಲಿಯೂ ವಿಫಲವಾಗಿದೆ ಎಂದು ಪಕ್ಷ ಆರೋಪಿಸಿದೆ. ['ಹಾಲಿನ ದರ ಏರಿಸಿಯೂ ಮೋಸ ಮಾಡುತ್ತಿರುವ ಸರ್ಕಾರ']

ಜನರ ಮತ್ತು ಹಾಲು ಉತ್ಪಾದಕರ ಹಿತ ಕಾಪಾಡಲು ವಿಫಲವಾಗಿರುವ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಲಿನ ದರವನ್ನು ಕಡಿಮೆ ಮಾಡಬೇಕು. ಜನ ಸಾಮಾನ್ಯರ ಮೇಲೆ ಹೇರಿರುವ ಹೊರೆಯನ್ನು ಇಳಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

kmf

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಲೀಟರ್‌ಗೆ 4 ರೂ. ಹೆಚ್ಚಿಸಿದೆ. ಜನವರಿ 5ರಿಂದ ರಾಜ್ಯಾದ್ಯಂತ ನೂತನ ದರ ಜಾರಿಗೆ ಬಂದಿದೆ. ಲೀಟರ್ ಮೊಸರಿನ ದರವನ್ನು 2 ರೂ. ಹೆಚ್ಚಿಸಲಾಗಿದೆ. ರಾಜ್ಯಾದ್ಯಂತ ಹಾಲಿನ ದರ ಏರಿಕೆಯನ್ನು ವಿರೋಧಿಸಲಾಗುತ್ತಿದೆ.

English summary
Members of the Bengaluru district unit of the JDS took out a procession and staged a dharna at Maurya circle on Monday to pressure the Karnataka government to withdraw milk price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X