ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಗೆ ಇನ್ನು ಮುಂದೆ ಐವರು ಕಾರ್ಯಾಧ್ಯಕ್ಷರು!

|
Google Oneindia Kannada News

Recommended Video

ಕರ್ನಾಟಕ ಜೆಡಿಎಸ್ ನಲ್ಲಿ ಇನ್ಮುಂದೆ ಐವರು ಕಾರ್ಯಾಧ್ಯಕ್ಷರು | oneindia Kannada

ಬೆಂಗಳೂರು, ಸೆಪ್ಟೆಂಬರ್ 21: ಜೆಡಿಎಸ್ ತಮ್ಮ ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸುವ ನಿಟ್ಟಿನಲ್ಲಿ ಐವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಜೆಡಿಎಸ್ ಸಭೆಯಲ್ಲಿ ನಿರ್ಧರಿಸಿದೆ.

ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿದೆ ಎಂಬ ಆರೋಪದಿಂದ ಹೊರಬಂದು ಜೆಡಿಎಸ್ ಪಕ್ಷವನ್ನು ವಿಸ್ತರಿಸಿ ಬಲಪಡಿಸಲು ತೀರ್ಮಾನಿಸಿದೆ ಈ ಕುರಿತು ಗುರುವಾರ ಸಂಜೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಯಡಿಯೂರಪ್ಪನವರೇ ಅಧಿಕಾರ ನನ್ನ ಬಳಿ ಇದೆ: ಕುಮಾರಸ್ವಾಮಿ ನೇರ ಎಚ್ಚರಿಕೆ ಯಡಿಯೂರಪ್ಪನವರೇ ಅಧಿಕಾರ ನನ್ನ ಬಳಿ ಇದೆ: ಕುಮಾರಸ್ವಾಮಿ ನೇರ ಎಚ್ಚರಿಕೆ

ಗುರುವಾರ ಸಂಜೆ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ಕಂದಾಯ ವಿಭಾಗಗಳಿಗೆ ತಲಾ ಒಬ್ಬರು ಹಾಗೂ ಬೆಂಗಳೂರು ನಗರಕ್ಕೆ ಒಬ್ಬರಂತೆ ಒಟ್ಟು ಐವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.

ಇದೇ ವೇಳೆ ರಾಜ್ಯದ ಎಲ್ಲ ಜಿಲ್ಲಾ ಘಟಕಗಳು, ರೈತ ಘಟಕ, ಕಾರ್ಮಿಕ ಘಟಕ, ಯುವ ಘಟಕ, ಮಹಿಳಾ ಘಟಕ ಸೇರಿದಂತೆ ಉಳಿದೆಲ್ಲ ಘಟಕಗಳನ್ನು ಸಂಪೂರ್ಣ ಹೊಸದಾಗಿ ರಚಿಸಲು ಕೂಡ ತೀರ್ಮಾನಿಸಲಾಗಿದೆ.

ಡಿಕೆಶಿಯನ್ನು ಕುಮಾರಸ್ವಾಮಿ ಶಾಸಕರೊಂದಿಗೆ ಹಠಾತ್ ಭೇಟಿ ಮಾಡಿದ್ದೇಕೆ? ಡಿಕೆಶಿಯನ್ನು ಕುಮಾರಸ್ವಾಮಿ ಶಾಸಕರೊಂದಿಗೆ ಹಠಾತ್ ಭೇಟಿ ಮಾಡಿದ್ದೇಕೆ?

ಸಭೆಯಲ್ಲಿ ಚರ್ಚೆ ಅಪೂರ್ಣಗೊಂಡಿದ್ದು, ಸಚಿವ ಸಂಪುಟ ಸಭೆ ಇದ್ದ ಕಾರಣ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೆ ಸಭೆ ಸೇರಿ ಎಲ್ಲ ಘಟಕಗಳ ಪದಾಧಿಕಾರಿಗಳ ನೇಮಕಾತಿ ಸಂಬಂಧ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.

ಪರಿಷತ್ ನ ಒಂದು ಸ್ಥಾನ: ಜೆಡಿಎಸ್ ನಲ್ಲಿ ಐದು ಮಂದಿ ತಿಪ್ಪರಲಾಗ!ಪರಿಷತ್ ನ ಒಂದು ಸ್ಥಾನ: ಜೆಡಿಎಸ್ ನಲ್ಲಿ ಐದು ಮಂದಿ ತಿಪ್ಪರಲಾಗ!

ಸಭೆಯಲ್ಲಿ ಶಾಸಕ ಕೆ.ಗೋಪಾಲಯ್ಯ, ಮಾಜಿ ಶಾಸಕರಾದ ರಮೇಶ್‌ಬಾಬು, ಮಧು ಬಂಗಾರಪ್ಪ, ಉಪಾಧ್ಯಕ್ಷ ಶಫೀವುಲ್ಲಾ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ವಿಧಾನ ಪರಿಷತ್ ಆಯ್ಕೆ : ಸೆ.21ಕ್ಕೆ ಜೆಡಿಎಸ್ ಮಹತ್ವದ ಸಭೆ

ವಿಧಾನ ಪರಿಷತ್ ಆಯ್ಕೆ : ಸೆ.21ಕ್ಕೆ ಜೆಡಿಎಸ್ ಮಹತ್ವದ ಸಭೆ

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಅಕ್ಟೋಬರ್ 3ರಂದು ನಡೆಯುವ ಚುನಾವಣೆ ವೇಳೆ ಜೆಡಿಎಸ್ ನಿಂದ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಸೆ.21ರಂದು ಪಕ್ಷದ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಹೊರ ಬೀಳಲಿದೆ.

ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡು ಶಿವಮೊಗ್ಗ ಲೋಕಸಭೆಯಿಂದ ಕಣಕ್ಕಿಳಿಯುವ ನಿರೀಕ್ಷೆ ಇದ್ದು, ಪರಿಷತ್‌ಗೆ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ರಮೇಶ್‌ಬಾಬು, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಹಿರಿಯ ಮುಖಂಡ ನಾರಾಯಣರಾವ್, ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್, ಯುವ ಘಕಟದ ಅಧ್ಯಕ್ಷ ರಮೇಶ್‌ಗೌಡ, ಕೆ.ಆರ್.ಪುರಂನ ಕೆ.ವಿ.ಅಮರನಾಥ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಒಬ್ಬರಿಗೆ ಅದೃಷ್ಟ ಒಲಿಯುವ ಲಕ್ಷಣಗಳಿವೆ.

ಐವರು ಕಾರ್ಯಾಧ್ಯಕ್ಷರ ಹುದ್ದೆ ಎಲ್ಲೆಲ್ಲಿ?

ಐವರು ಕಾರ್ಯಾಧ್ಯಕ್ಷರ ಹುದ್ದೆ ಎಲ್ಲೆಲ್ಲಿ?

ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ಕಂದಾಯ ವಿಭಾಗಗಳಿಗೆ ತಲಾ ಒಬ್ಬರು ಹಾಗೂ ಬೆಂಗಳೂರು ನಗರಕ್ಕೆ ಒಬ್ಬರಂತೆ ಒಟ್ಟು ಐವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.

ಮಧು ಬಂಗಾರಪ್ಪ ಪಾರ್ಲಿಮೆಂಟ್ ಗೆ ವೈಎಸ್ ವಿ ದತ್ತ ಪಕ್ಷದ ಕೆಲಸಕ್ಕೆ

ಮಧು ಬಂಗಾರಪ್ಪ ಪಾರ್ಲಿಮೆಂಟ್ ಗೆ ವೈಎಸ್ ವಿ ದತ್ತ ಪಕ್ಷದ ಕೆಲಸಕ್ಕೆ

ಮಧು ಬಂಗಾರಪ್ಪ ಅವರಿಗೆ ಲೋಕಸಭೆಗೆ ಟಿಕೆಟ್ ನೀಡಿ ವೈಎಸ್ವಿ ದತ್ತ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ, ಎನ್ನಲಾಗಿದೆ, ಮಧು ಬಂಗಾರಪ್ಪ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆಂಬ ನಿರೀಕ್ಷೆ ಇತ್ತಾದರೂ, ಅವರಿಗೆ ರಾಜ್ಯ ರಾಜಕಾರಣದಲ್ಲೇ ಇರಬೇಕೆಂಬ ಇಚ್ಛೆ ಇರುವುದರಿಂದ ಆ ಸಾಧ್ಯತೆ ಕ್ಷೀಣಿಸಿದೆ. ಪರಿಷತ್ ಗೆ ನಾಮಕರಣ ಮಾಡಿ ಸಚಿವ ಸ್ಥಾನ ನೀಡಿದರೆ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂಬುದು ಮಧು ಬೇಡಿಕೆಯಾಗಿದೆ. ಇದಕ್ಕೆ ಸಿಎಂ ಸಹಮತ ಇದೆಯಾದರೂ ಎಚ್ಡಿಕೆಗೆ ಸಹಮತ ಇದೆಯಾದರೂ ದೇವೇಗೌರು ಈವರೆಗೆ ಗುಟ್ಟು ಬಿಟ್ಟುಕೊಟ್ಟಿಲ್ಲ, ಒಂದು ವೇಳೆ ದೊಡ್ಡ ಗೌಡರ ವಿರುದ್ಧವಾಗಿ ರಮೇಶ್ ಬಾಬು ಬೇಡವೆಂದಾದರೆ ದತ್ತ ನೇಮಕ ಮಾಡಿದರೆ ದೇವೇಗೌಡರಿಗೆ ಸಂತೋಷವಾಗುತ್ತದೆ. ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ಪರ ಬಲವಾಗಿ ಸಮರ್ಥನೆ ಮಡಿಕೊಳ್ಳುತ್ತಾರೆ ಎಂಬ ಅಭಿಪ್ರಾಯವಿದೆ

ಹಳೇ ಮೈಸೂರಿನಲ್ಲಿ ಜೆಡಿಎಸ್ ಗಟ್ಟಿ, ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕಿಲ್ಲ ಜಗಜಟ್ಟಿ

ಹಳೇ ಮೈಸೂರಿನಲ್ಲಿ ಜೆಡಿಎಸ್ ಗಟ್ಟಿ, ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕಿಲ್ಲ ಜಗಜಟ್ಟಿ

ಜೆಡಿಎಸ್ ಪಕ್ಷ ಎಲ್ಲರಿಗೂ ತಿಳಿದಿರುವ ಹಾಗೆ ಹಳೇ ಮೈಸೂರು ಭಾಗದಲ್ಲಿ ಪ್ರಭಲವಾಗಿದೆ, ಆದರೆ ಉತ್ತರ ಕರ್ನಾಟಕದಲ್ಲಿ ಉತ್ತಮ ನಾಯಕರಿಲ್ಲದೆ ಸೊರಗಿದೆ, ಹಳೇ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಿದೆ ಎನ್ನುವ ಅಪವಾದದಿಂದ ಹೊರ ಬರಲು ಜೆಡಿಎಸ್ ಮುಖಂಡರು ಚಿಂತನೆ ನಡೆದಿದ್ದು ಅದಕ್ಕಾಗಿಯೇ ಐವರು ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

English summary
To strengthening the party apart from old Mysore region, JDS party has decided to appoint five working presidents. Four revenue divisions of the will have each working presidents and separate one more for Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X